SSLC ಪರೀಕ್ಷೆಗೆ ಡೇಟ್ ಫಿಕ್ಸ್ ಇಲ್ಲಿದೆ ಪೂರ್ಣ ಮಾಹಿತಿ: heggaddesamachar.com

Spread the love

ಪರೀಕ್ಷಾ ವೇಳೆಯಲ್ಲೇ ದಾಪುಗಾಲಿಟ್ಟ ಕೊರೋನಾ, ವಿದ್ಯಾರ್ಥಿಗಳನ್ನು ಚಿಂತೆಯಿಂದ ದಿನ ಕಳೆಯುವಂತೆ ಮಾಡಿದೆ.
ಪರೀಕ್ಷೆ ಎಂಬುದು ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟ….ಆದರೆ ಅದುವೆ ಇಂದು ನಡೆಸದ ಸಂದಿಗ್ದ ಪರಿಸ್ಥಿತಿ ಎದುರಾಗಿದೆ. ವಿದ್ಯಾರ್ಥಿಗಳು ಇನ್ಯಾವಾಗ ಪರೀಕ್ಷೆ ಎಂದು ಘೋಷಣೆ ಮಾಡುತ್ತಾರೋ, ನಾವು ಯಾವಾಗಪ್ಪ ಓದೋದು ಎಂಬ ಚಿಂತನೆಗೆ ತಮ್ಮನ್ನ ತಾವು ದೂಡಿಕೊಂಡಿದ್ದರು ಆದರೆ ಇದೀಗ ಅದಕ್ಕೆ ಅಂತ್ಯ ಸಿಕ್ಕಂತೆ ಕಾಣುತ್ತಿದೆ. ಶಿಕ್ಷಣ ಸಚಿವರಾದ ಡಾ|ಸುರೇಶ್ ಕುಮಾರ್ ಮಾತಾನಾಡಿ ಮುಂದಿನ ಜೂನ್ ತಿಂಗಳಲ್ಲಿ ಪರೀಕ್ಷೆ SSLC BOARD EXAM ಎಸ್ ಎಸ್ ಎಲ್ ಸಿ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಜೂನ್ ಮೂರು, ನಾಲ್ಕನೇ ವಾರದಲ್ಲಿ ಪರೀಕ್ಷೆಗಳು SSLC ವಿದ್ಯಾರ್ಥಿಗಳಿಗೆ ನಡೆಯುತ್ತದೆ.
ಓದುಲು ಅನುವಾಗುವಂತೆ ವಾರದ ಮೊದಲೇ ವೇಳಾಪಟ್ಟಿ ನೀಡುತ್ತೇವೆ ಎಂಬುವುದನ್ನು ತಿಳಿಸಿದ್ದಾರೆ.

ಇನ್ನೂ CBSE ಪರೀಕ್ಷೆ ಸಂಬಂಧಿಸಿದಂತೆ ಈಶಾನ್ಯ ನವದೆಹಲಿಯನ್ನು ಹೊರತು ಪಡಿಸಿ 10ನೇ ತರಗತಿಯ CBSE ಪ್ರಮುಖ ಪತ್ರಿಕೆಗಳ ಪರೀಕ್ಷೆ ಮುಗಿದಿದೆ ಅದರೂ ಉಳಿದ ಒಂದೆರಡು ಪತ್ರಿಕೆಗಳ ಪರೀಕ್ಷೆ ಬಾಕಿಯಾಗಿವೆ. ಹೀಗೆ ಬಾಕಿ ಉಳಿದಿರುವ ಎರಡು ಪರೀಕ್ಷೆಗಳನ್ನು ನಡೆಸುವುದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂತ್ ಅವರು ತಿಳಿಸಿರುತ್ತಾರೆ

ರಿ: ಹೆಗ್ಗದ್ದೆ ಸಮಾಚಾರ್.ಕಾಮ್

One thought on “SSLC ಪರೀಕ್ಷೆಗೆ ಡೇಟ್ ಫಿಕ್ಸ್ ಇಲ್ಲಿದೆ ಪೂರ್ಣ ಮಾಹಿತಿ: heggaddesamachar.com”

Leave a Reply

Your email address will not be published. Required fields are marked *