Jobs & ಶಿಕ್ಷಣ
S.S.L.C & P.U.C ಪರೀಕ್ಷಾ ದಿನಾಂಕ ಫಿಕ್ಸ್: heggaddesamachar.com

ಎಸ್ ಎಸ್ ಎಲ್ ಸಿ ಪರೀಕ್ಷೆ ಜೂನ್ ೨೫ ರಿಂದ ಜುಲೈ ೪ ರ ವರೆಗೆ ನಡೆಯಲಿದೆ ಮತ್ತು ಜೂನ್ ೧೮ ರಂದು ಇಂಗ್ಲಿಷ್ ಪಿ ಯು ಸಿ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಬಾರಿ ಒಟ್ಟಿ 8,48,196 ಎಸ್ ಎಸ್ ಎಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಜ್ಜಾಗಿದ್ದು,ಎಸ್ಎಸ್ ಎಲ್ಸಿ ಪರೀಕ್ಷೆಯನ್ನು ಜೂನ್ 25 ರಿಂದ ಜುಲೈ 4 ನೇ ತನಕ ಮಾಡಲು ತೀರ್ಮಾನ ಮಾಡಲಾಗಿದೆ ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಸಂಬಂಧ ಒಂದು ಒಂದು ದಿನದ ಅಂತರ ಇರುತ್ತದೆ.
ಪಿಯುಸಿ ವಿದ್ಯಾರ್ಥಿಗಳಿಗೆ ಉಳಿದಿರುವ ಒಂದು ಸಬ್ಜೆಕ್ಟ್ ಪರೀಕ್ಷೆ ಜೂನ್ 18 ರಂದು ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.
ರಿ: ಹೆಗ್ಗದ್ದೆ ಸಮಾಚಾರ್. ಕಾಮ್