ಬಾಲ್ಯವಿವಾಹ ಪದ್ಧತಿ ಇನ್ನೂ ರೂಢಿಯಲ್ಲಿದೆಯಾ ?

June 28, 2021

ಬಾಲ್ಯ ವಿವಾಹ ಪದ್ಧತಿ ಇನ್ನೂ ಜೀವಂತವಾಗಿ ದೆಯಾ…ಬಾಲ್ಯ ವಿವಾಹಕ್ಕೆ ಕರೊನಾ ನಿಯಂತ್ರಣದ ಲಾಕ್ ಡೌನ್ ವೇದಿಕೆ ಆಗಿದ್ದು ಹೌದಾ…ಬಾಲ್ಯ ವಿವಾಹ ನಿಷೇಧಿಸಲಾಗಿದ್ದು ಕಠಿಣ ಕಾನೂನು ಇದ್ದು ಈ ಪದ್ಧತಿ ನಿರ್ಬಂಧಿಸಿ ಅದಾಗಲೇ ಕೆಲವು ವರುಷಗಳೇ ಉರುಳಿ ಹೋಗಿದೆ ಆದರೂ ನಿಯಂತ್ರಣಕ್ಕೆ ಬಂದಿಲ್ಲ. ಲಾಕ್ ಡೌನ್ ದುರ್ಬಳಕೆ ಮಾಡಿಕೊಂಡು ಮಕ್ಕಳ ಪಾಲಕರು ಸಮಾಜದ ಹಾಗೂ ಸರ್ಕಾರದ ಕಣ್ಣು ತಪ್ಪಿಸಿ ಅಪ್ರಾಪ್ತ ಮಕ್ಕಳ ವಿವಾಹ ಸದ್ದಿಲ್ಲದೆ ನಡೆಸುತ್ತಿದ್ದು ತೆರೆ ಮರೆಯಲ್ಲಿ ಈ ಬಾಲ್ಯವಿವಾಹ ಪದ್ಧತಿ ನಡೆಯುತ್ತಿದೆ ಅನ್ನುವುದನ್ನು ಅರಗಿಸಿಕೊಳ್ಳಲು ನನಗಂತು […]

Read More

ಗುಟುರು….ಗುಟುರು… ಮಂಡೂಕ

June 20, 2021

ಮಳೆಗಾಲ ಆರಂಭವಾಗುತ್ತಲೇ ಗುಟುರು.. ಗುಟುರು ಸದ್ದು ಮಾಡುತ್ತಾ ವಟಗುಟ್ಟುವ ಮಂಡೂಕ ವರ್ಷವಿಡಿ ಅಜ್ಞಾತ ವಾಸದಲ್ಲಿರುವ ಉಭಯಚರಜೀವಿ. ಈ ಬಾರಿ ನಿರೀಕ್ಷೆಗಿಂತ ಮೊದಲೇ‌ ಮಳೆಗಾಲ ಬಂದು ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆದರೆ ಕಪ್ಪೆಗಳ ಸಾಮಾನ್ಯ ವಾಸ ಸ್ಥಾನಗಳಾದ ನದಿ, ಕೆರೆದಂಡೆ,ಹಳ್ಳ ಕೊಳ್ಳ, ಹೊಲಗದ್ದೆ‌ ತೋಟದ ಸಂದುಗೊಂದುಗಳ ನಿಂತ ನೀರಲ್ಲಿ ಜೀವ ಸಂಕುಲಗಳಿಗೆ ಮತ್ತು ಸಂತಾನೋತ್ಪತ್ತಿ ನೆಲೆಯಾಗುವ ಅಪರೂಪದ ಅತಿಥಿಗಳ ಆಗಮನ ‌ಕೆಲ ವರ್ಷಗಳಿಂದ ಅತೀ ವಿರಳವಾಗುತ್ತಿದೆ. ಕಪ್ಪೆಗಳ ಕೂಗು ಮುಂಗಾರು ಆಗಮನದ ಮುನ್ಸೂಚನೆ ಹಾಗೂ […]

Read More

ಕೋಳಿರೊಟ್ಟಿಗೆ ಜಿ ಐ ಮಾನ್ಯತೆ ದೊರಕಬೇಕಿತ್ತು

June 13, 2021

ಆಹಾರ ಕೇವಲ ‌ದೇಹದ ಅಗತ್ಯಮಾತ್ರವಲ್ಲ. ಮನಸ್ಸಿನ ಸಂತೋಷಕ್ಕೂ‌ಹೌದು. ಪ್ರತಿಯೊಂದು ಪ್ರಾಂತ್ಯಕ್ಕೂ ‌ತನ್ನದೇ ಆದ ಆಹಾರ ತಾತ್ವಿಕತೆ ಇದ್ದು ಆಹಾರ ‌ಪದ್ದತಿಯಲ್ಲಿ ಒಂದು ಪರಂಪರೆಯ ಅನುಭವ ಹೊಂದಿದ ಹಿರಿಯರು ‌ಆಹಾರ ವಿಜ್ಞಾನವನ್ನು ಸುವ್ಯವಸ್ಥಿತವಾಗಿ ಅಳವಡಿಸಿಕೊಂಡಿದ್ದರು. ಆದರೆ ನಾಗರಿಕ ಸಮಾಜ ಬೆಳೆದು ಬರುತ್ತಲೆ ತನಗೊಂದು ಬೇರೆ ರೀತಿ- ‌ನೀತಿ‌ ನಿಯಮ- ನಿಬಂಧನೆ ಆಚಾರ- ವಿಚಾರ ಎಂಬ ಧಾರೆಯನ್ನು ರೂಢಿಸಿಕೊಂಡು‌ಬರುತ್ತಾ. ಕೆಲ ಆಹಾರ ಪದ್ದತಿಯನ್ನು ಗಾಳಿಗೆ ತೂರಿ ಬಿಟ್ಟಿದ್ದು ಹೌದಾದರು ‌ಸರ್ವಕಾಲದಲ್ಲೂ ವಿಶೇಷವಾದ ಖಾದ್ಯವಾಗಿ ಉಳಿದು ಕೊಂಡ ಕೋಳಿರೊಟ್ಟಿ ತನ್ನ ಸ್ಥಾನವನ್ನು […]

Read More
maley latha santhosh shetty

ಮಳೆ ಎಂಬ ದೃಶ್ಯ ಕಾವ್ಯ

June 6, 2021

ಮಳೆಯೆಂದರೆ ನೀರಧಾರೆ ಮಾತ್ರವಲ್ಲ ಭೂರಮೆಯ ಹಸಿಯಾಗಿ, ಹಸಿರಾಗಿಸುವ ಮುಂಗಾರಿನ ಅಭಿಷೇಕ. ಪರಿಸರದ‌ ವಾತಾವರಣವನ್ನೆ‌ ಬದಲಾಯಿಸ ಬಲ್ಲ ಅಮೃತ ಸಿಂಚನಾ. ಇದಕ್ಕೆ ಪುಳಕಗೊಳ್ಳೊ ನಾನಂತೂ ಬಾಲ್ಯದಲ್ಲಿ ಮಳೆ ಸುರಿವಾಗ ಅಂಗಳದ ಲತೆಯಾಗುತ್ತಿದ್ದೆ. ಬಿಸಿಲ ಬೇಗೆಯಿಂದ ಕಾದ‌ ಇಳೆಗೆ ಸುರಿವ ಧಾರಕಾರ ‌ಮಳೆ‌ ಹಾಗೂ ಮಳೆಗಾಲದ ‌ಮುನ್ಸೂಚನೆ ನೀಡುವ ಹಲವು ಪ್ರಾಕೃತಿಕ ವೈಚಿತ್ರ್ಯದ ಆತಂಕದ ‌ಕಾರ್ಮೋಡ, ಗುಡುಗು ,ಸಿಡಿಲು, ಕಪ್ಪೆಗಳ ಗುಟುರುವಿಕೆ, ಮಿಂಚು ಹುಳುಗಳ‌ ಸಂಚಾರಗಳ ನಡುವೆ ಮೊದಲ ‌ಮಳೆ ಸ್ಪರ್ಶವಾಗುತ್ತಲೆ ಮಣ್ಣಿನಿಂದ ಹೊರ ಹೊಮ್ಮಿವ ಪರಿಮಳ ಆಘ್ರಣಿಸುತ್ತಾ ಬೇಸರವಿಲ್ಲದೆ‌ […]

Read More

ಇಳಕಲ್ ಸೀರೆಯ ಮೆರಗು

May 30, 2021

ಅಂದು ನಮ್ಮೊಂದಿಗಿದ್ದ ಪ್ರವಾಸಿ ತಂಡದ ಯಾರಿಗೂ ಕರ್ನಾಟಕದ ಬಾಗಲು ಕೋಟೆ ಜಿಲ್ಲೆಯ ಇಳಕಲ್ ಎಂಬ ಸಣ್ಣ ಊರಿನ ಚಟ್ಟಕ್..ಪಟ್ಟಕ್.. ಶಬ್ದ ಕೇಳುತಿರುವ ಗಲ್ಲಿಯೊಳಗೆ ಸುತ್ತಾಡಲು‌ ಮನಸ್ಸಿರಲಿಲ್ಲ. ಗೈಡ್ ಕೂಡ ಅವರೆಲ್ಲರ ಮಾತಿಗೆ ಶೋಭಾನೆ ಹಾಕುತ್ತಿದ್ದರು. ಇಲ್ಲೇ ಇರುವ ದೊಡ್ಡ ದೊಡ್ಡ ಅಂಗಡಿ ಮೊಲ್ ಗಳಲ್ಲಿ ಬೇಕಾದ‌ ಬಗೆ ಬಗೆಯ ಇಳಕಲ್ ಸೀರೆ ಸಿಗುತ್ತವೆ . ಸೀರೆ ತಯಾರಿಕಾ ಕೇಂದ್ರಕ್ಕೆ ಯಾಕೆ ಹೋಗೊದು ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಹೋಗುವುದು ಬೇಡ ಎಂದವರೆ ಎಲ್ಲಾ‌ ಅಂತೂ ನನ್ನ ಒತ್ತಾಯಕ್ಕೆ […]

Read More

“ಮ್ಯೂಸಿಯಂ ಆಫ್ ಅನಾಟಮಿ” ಕುತೂಹಲದ ಕಣ್ಣಿಗೆ ಅಚ್ಚರಿಯ ನೋಟ

May 23, 2021

ಊಹೆಗೂ ನಿಲುಕದ ಆಶ್ಚರ್ಯಗಳು, ಕಾಲಿಟ್ಟ ಕೂಡಲೇ ಬೆಚ್ಚಿ ಬಿಳಿಸುವ ಅಗಾಧ ಅಸ್ಥಿಪಂಜರಗಳ ಸಮೂಹ. ಕಸ್ತೂರ್ಬಾ‌ ವೈದ್ಯಕೀಯ ಕಾಲೇಜು ಮಣಿಪಾಲ ಇಲ್ಲಿನ ಅಂಗರಚನಾಶಾಸ್ತ್ರ ಮತ್ತು ರೋಗ ಶಾಸ್ತ್ರಕ್ಕೆ ಸಂಬಂದ ಪಟ್ಟ ಸಂಗ್ರಹಾಲಯ ” ಮಣಿಪಾಲ ಮ್ಯೂಸಿಯಂ ಆಫ್ ಅನಾಟಮಿ ಮತ್ತು ಪ್ಯೆಥಾಲಜಿ” ಸಾರ್ವಜನಿಕರಿಗೆ ಸಂದರ್ಶಿಸಲು ಅವಕಾಶವಿರುವ ಭಾರತದ ಕೆಲವೆ ಕೆಲವು‌ ಅನಾಟಮಿ ಮ್ಯೂಸಿಯಂಗಳಲ್ಲಿ ಇದೂ ಒಂದು. ಮಾನವ ತಲೆಬುರುಡೆಯಿಂದ ಕಾಲ ಬೆರಳವರೆಗಿನ ಶರೀರದ ವಿವಿಧ ಅಂಗಗಳ ಸಂಗ್ರಹ ಇಲ್ಲಿದೆ. ಅಪರೂಪದ ಈ ಸಂಗ್ರಹಾಲಯ ನೋಡುವ ಅನುಭವ ತುಸು ವಿಶಿಷ್ಟ […]

Read More
thale fruits

ಬಹು ಉಪಯೋಗಿ ತಾಳೆ ಹಣ್ಣು

May 16, 2021

ಶ್ರೀ ಕೃಷ್ಣನಗರಿ ಉಡುಪಿಯ ರಥಬಿದಿಯಲ್ಲಿ ತಿಂಗಳ ಹಿಂದೆ ಸಾಗುತ್ತಾ‌ ಇದ್ದೆ . ತಾಳೆ ಹಣ್ಣು ತುಂಬಿದ ಕೈಗಾಡಿಯೆದುರು ಹಿರಿಯ ಕಿರಿಯರು ತಾಳೆ ಸೊಳೆ ತಿನ್ನುವುದಕ್ಕೆ ಸೇರಿದ್ದರು .ಆರೋಗ್ಯದಾಯಕ ನೈಸರ್ಗಿಕ ಆಹಾರದ ಮಹತ್ವಕ್ಕೆ ಕೊಡ ಬೇಕಾದ ಕಾಲ ಘಟವಿದು. ದೇಹದಲ್ಲಿ ರೊಗ ನೀರೊದಕ ಶಕ್ತಿ ಹೆಚ್ಚಿಸಿಕೊಳ್ಳವುದರ ಮಹತ್ವದ ಅರಿವು ಇಂದು ಜನಸಾಮಾನ್ಯರಿಗೆ ಆಗಿದ್ದು .ತಾಳೆಹಣ್ಣು ತಿನ್ನುವುದರಲ್ಲಿ ಮುಗಿಬಿದ್ದರೊ ಎನಿಸಿತು….ಸರಿ ನಾನು ಹೋಗಿ ತಿಂದೆ… ಬಿಸಿಲ ಬೇಗೆಯಿಂದ ಧಣಿವಾರಿಸಿ ಕೊಳ್ಳಲು ಜನ ತಂಪು ಪದಾರ್ಥಗಳನ್ನೆ ಬಯಸುತ್ತಿದ್ದು ಅದರಲ್ಲಿ ಆರೋಗ್ಯಕ್ಕೆ ಹಿತಕರ […]

Read More
beard And jewelry

ಗಡ್ಡಕ್ಕೂ ಆಭರಣದ ಸೊಬಗು

May 9, 2021

ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿ ಯೊಳಗಿನ ಅಧಿಕಾರಿಯೊಬ್ಬರು ಗಡ್ಡದಲ್ಲಿ ಧರಿಸಿದ ಆಭರಣ ನೋಡಿದಾಗ ಅಬ್ಬಾ ಗಡ್ಡಕ್ಕೂ ಆಭರಣವೇ ಎಂದು ನನಗೆ ಆಶ್ಚರ್ಯ ಹಾಗೂ ನಗು ತಡೆಯಲಾಗ ಲಿಲ್ಲ. ಮಾರುಕಟ್ಟೆಯಲ್ಲಿನ‌ ಯಾವುದೋ ಆಭರಣ ಸಿಕ್ಕಿಸಿ ಕೊಂಡಿರಬೇಕು ಅಂದುಕೊಂಡೆ ಆದರೂ ಕುತೂಹಲ ತಡೆಯಲಾಗದೆ ಇದನ್ನು ಹೇಗೆ ಧರಿಸಿದ್ದಿರಿ ಪಿನ್ ಹಾಕಿಸಿಕ್ಕಿಸಿದ್ದ ಅಂತ ಕೇಳಿದ್ದಕ್ಕೆ ಅವರು ನೀಡಿದ ಉತ್ತರ ‌ಹೀಗಿತ್ತು ಕ್ರಾಟೋಮಿಲಾನೋ ಎಂಬ ಕಂಪನಿಯು ಬಿಯರ್ಡ ಜ್ಯುವೆಲರಿ ಹೆಸರಿನಲ್ಲಿ ಗಡ್ಡದ ಆಭರಣಗಳನ್ನು ತಯಾರಿ‌ ಮಾಡುತ್ತಾರೆ. ಕ್ರಾಟೋಮಿಲಾ ನೋ ಎಂಬ ಸಂಸ್ಥೆ ಬೆಳ್ಳಿ, […]

Read More

ಪಿಶಾಚಿಯಂತೆ ಕಾಡುವ ಅಂತರಗಂಗೆ ರೋಧಿಸುತ್ತಿರುವ ಐತಿಹಾಸಿಕ ಉಣಕಲ್ ‌ಕೆರೆ

May 2, 2021

ಹುಬ್ಬಳ್ಳಿ ಧಾರವಾಡ ಅವಳಿನಗರದ ಸುಂದರ ತಾಣಗಳಲ್ಲೊಂದು ಪ್ರಾಚೀನ ಉಣಕಲ್ ಕೆರೆ. ಚಲನಚಿತ್ರ, ಧಾರವಾಹಿ,ಕಥೆ, ಕಾವ್ಯಗಳಲ್ಲಿ ಈ ಕೆರೆಯ ಬಗ್ಗೆ ವೈವಿಧ್ಯಮಯ ವಿಚಾರಗಳು‌ ಮೂಡಿ ಬಂದಿದ್ದು ಹುಬ್ಬಳ್ಳಿಗೆ ಮುಕುಟದಂತಿರುವ ಪ್ರವಾಸಿತಾಣ ವಿದು. 200 ಎಕರೆ ‌ವಿಸ್ತ್ರಿರ್ಣದ 20 ಅಡಿ ಆಳದ‌ ನೂರಾರು ವರ್ಷಗಳ ಐತಿಹಾಸಿಕ ಕೆರೆಯನ್ನು ಪಿಶಾಚಿಯಂತೆ ಕಾಡುತ್ತಿರುವ ಅಂತರಗಂಗೆ ಹಸಿರು ಕಸ ತೆಗೆದಷ್ಟು ಹೆಚ್ಚಾಗುವ ಅಕ್ರಮಣಕಾರಿ ಸಸ್ಯ ಕೆರೆಯ ನೀರಿನ ಮೇಲ್ಮೈಯನ್ನು ಆಕ್ರಮಿಸಿಕೊಂಡು ತೀರಾ ಒತ್ತಾಗಿ ಬೆಳೆಯುತ್ತಾ ನೀರಿನ ಹರಿವಿಗೆ ತಡೆಯೊಡ್ಡಿ ಜಲಚರಗಳ‌ ಬೆಳವಣಿಗೆ ಹಾಗೂ ಅವುಗಳ […]

Read More
Banglore Karaga

ಬೆಂಗಳೂರು ಕರಗ ಮಹೋತ್ಸವಕ್ಕೆ ಕೊರೊನಾ ಕರಿ‌ನೆರಳು

April 25, 2021

ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಕೋವಿಡ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಆದೇಶದನ್ವಯ ಧಾರ್ಮಿಕ ಆಚರಣೆಗಳನ್ನು ನಡೆಸಲು ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಬೆಂಗಳೂರು ತಿಗಳರ ಪೇಟೆಯ ಶ್ರೀ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ನಡೆಯಲಿರುವ ದ್ರೌಪದಿ ದೇವಿ ಕರಗ ಮಹೋತ್ಸವದ ಮೆರವಣಿಗೆ ರದ್ದು ಪಡಿಸಿ ಸರಕಾರ ಆದೇಶ ಹೊರಡಿಸಿದ್ದರಿಂದ ಸುಪ್ರಸಿದ್ಧ ಕರಗದ ಮೇಲೆ ಕೊರೊನಾ ಕರಿನೆರಳು ಬಾಚಿಕೊಂಡಿದೆ. ಈ ವರ್ಷ ಎಪ್ರಿಲ್ ೨೭ ರಂದು ನಡೆಯಬೇಕಾಗಿದ್ದ ಕರಗ ಸಂಭ್ರಮದ ಸೊಡರಿಗೆ ಅನಿವಾರ್ಯಮಂಕುಕವಿದಿದೆ. ದ್ರೌಪದಿ ಶಕ್ತ್ಯೋತ್ಸವ ಎಂದೇ ಪ್ರಸಿದ್ಧವಾದ‌ ಕರಗ ಮಹೋತ್ಸವಕ್ಕೆ […]

Read More