News (ಸುದ್ದಿ)
Fire fighters day : heggaddesamachar.com

ಅಗ್ನಿಶಾಮಕ ಸಿಬ್ಬಂದಿಗಳಿಗೆ ಗೌರವಪೂರ್ವಕ ಈ ದಿನ.
ಒಂದು ಸಣ್ಣ ಬೆಂಕಿ ಕಿಡಿ ಸಾಕು, ಸಂಪತ್ತು ನಾಶವಾಗಲು.
ಒಂದು ಪುಟ್ಟ ರೀತಿಯ ಅಜಾಗರೂಕತೆಯಿಂದ ಬೆಂಕಿಯೊಂದಿಗೆ ಸರಸ ನಡೆಸಿದರೆ, ಭಸ್ಮ ಆಗುವುದಂತೂ ಖಂಡಿತ.
ಆದರೆ ಕೆಲವೊಂದು ಕಡೆ, ಆಕಸ್ಮಿಕ ಸಂದರ್ಭಗಳಲ್ಲಿ ವಿದ್ಯುತ್ ಏರುಪೇರಿನಿಂದಾಗಿ ಅಥವಾ ಗ್ಯಾಸ್ ಸಿಲಿಂಡರ್ ಸ್ಫೋಟ ಹೀಗೆ ಹಲವು ಸಣ್ಣಪುಟ್ಟ ಕಾರಣಗಳು ಕೂಡ ದೊಡ್ಡದಾದ ಪ್ರಾಣಹಾನಿಗೆ ಕಾರಣವಾಗುವಾಗ ನಮಗೆ ನೆನಪಾಗುವುದು “ಅಗ್ನಿಶಾಮಕ ದಳ, ಅಗ್ನಿಶಾಮಕ ಸಿಬ್ಬಂದಿ”
ಪ್ರಾಣದ ಭಯ ತೊರೆದು ಬೆಂಕಿಯ ಕೆನ್ನಾಲಿಗೆಯ ಹತ್ತಿರ ನಿಂತು ಬೆಂಕಿಯನ್ನು ನಂದಿಸುವ ಕಾರ್ಯ ಮಾಡುವುದು ತುಂಬಾ ಕಷ್ಟದ ಕೆಲಸ, ಅಲ್ಲಿ ಬೆಂಕಿಯ ಬಿಸಿಯೇರಿದ ಧಗೆ ತಮ್ಮ ಜೀವಕ್ಕೆ ಅದೆಷ್ಟು ತಾಪ ಸೋಕಿದರೂ ಲೆಕ್ಕಿಸದೇ, ಹಗಲು ಇರುಳು ಬೆಂಕಿ ನಂದಿಸಲು ಶ್ರಮಪಡುವ ಅಗ್ನಿಶಾಮಕದಳದ ನಿಜವಾದ ಹೀರೋಗಳಿಗೆ ನಮ್ಮ ಕಡೆಯಿಂದ ಸೆಲ್ಯೂಟ್….
ಅಗ್ನಿಶಾಮಕ ದಳದ ನಾಯಕರಿಗೆ ಈ ದಿನ ಅರ್ಪಣೆ…
