
ರಾಷ್ಟ್ರ ರಾಜಧಾನಿ ದೆಹಲಿಯಿಂದ 64 ಕಿಲೋಮೀಟರ್ ದೂರದಲ್ಲಿರುವ ರೋಹ್ಟಕ್ ಹಾಗೂ ಹರಿಯಾಣದಲ್ಲಿ ಭೂಕಂಪನ ಸಂಭವಿಸಿದೆ. 9.08 ಗಂಟೆಗೆ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದೆ. ರಸ್ತೆಗಳು ಬಿರುಕು ಬಿಟ್ಟಿದೆ. ಕಟ್ಟಡಗಳು ಬಿರುಕು ಬಿಟ್ಟಿದೆ. ಭೂಮಿ ಕಂಪನ ಅನುಭವವಾಗುತ್ತಿದ್ದಂತೆ ಮನೆಯೊಳಗಡೆ, ಕಟ್ಟಡದೊಳಗೆ ಇದ್ದವರು ಹೊರಗೆ ಓಡಿ ಬಂದಿದ್ದಾರೆ.
ಕಳೆದೆರಡು ತಿಂಗಳಲ್ಲಿ ದೆಹಲಿಯಲ್ಲಿ 5 ಬಾರಿ ಭೂಕಂಪನ ಸಂಭವಿಸಿದೆ. ಮೇ. 15 ರಂದು ಭೂಕಂಪನ ಸಂಭವಿಸಿತ್ತು.
Post Views:
332