News (ಸುದ್ದಿ)

ಹೌದು ಹುಲಿಯಾ ಪೀರಪ್ಪ ಈಗ ಸೆಲೆಬ್ರೆಟಿ: heggaddesamachar.com

Spread the love

ವಾರದ ಹಿಂದೆ ಮಾಮೂಲಿ ವ್ಯಕ್ತಿಯಾಗಿದ್ದ ಹೌದು ಹುಲಿಯಾ ಖ್ಯಾತಿಯ ಪೀರಪ್ಪ ಬೀರಪ್ಪ ಕಟ್ಟಿಮನಿ ಈಗ ಸೆಲೆಬ್ರೆಟಿ.

ಹೌದು ! ಫೇಸ್ ಬುಕ್, ಟ್ವಿಟರ್, ವ್ಯಾಟ್ಸಾಪ್, ಟಿಕ್ ಟಾಕ್ ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಈತನದ್ದೇ ಹವಾ ಅದಕ್ಕೆಲ್ಲಾ ಕಾರಣ ‘ ಹೌದು ಹುಲಿಯಾ!’ ಡೈಲಾಗ್.

ಕಾಗವಾಡದಲ್ಲಿ ೪ ದಿನಗಳ ಹಿಂದೆ ನಡೆದ ಕಾಂಗ್ರೇಸ್ ಸಮಾರಂಭದಲ್ಲಿ ಮಾಜಿ ಸಿ.ಎಂ ಸಿದ್ದರಾಮಯ್ಯನವರ ಮಾತಿಗೆ, ಶಹಬ್ಬಾಸ್ ಎಂಬಂತೆ ಬೀರಪ್ಪ ಹೌದು ಹುಲಿಯಾ ಡೈಲಾಗ್ ಹೊಡೆದಿದ್ದ. ಅದಾದ ನಂತರ ಆತನ ಡೈಲಾಗ್ ಟಿ.ವಿಯಲ್ಲಿ ಭಿತ್ತರವಾಗಿತ್ತು.

ಇದೀಗ ಆ ಡೈಲಾಗ್ ನಿಂದ ಈತ ಫ್ಯಾಮಿಲಿಯರ್ ಆಗಿದ್ದು, ಈತನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿಬೀಳುತ್ತಿದ್ದಾರಂತೆ. ಐನಾಪುರ ಟಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಈತ ಸದ್ಯಕ್ಕೆ ಸೆಲ್ಫಿ ಸ್ಟಾರ್…

ರೀ: ಹೆಗ್ಗದ್ದೆಸಮಾಚಾರ್

Leave a Reply

Your email address will not be published. Required fields are marked *