ಹೊರ ರಾಜ್ಯದಲ್ಲಿ ಸಿಲಿಕಿರುವ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಉಚಿತವಾಗಿ ಕರೆತರಬೇಕು – ಎನ್.ಎಸ್.ಯು.ಐ.ಯಿಂದ ಪ್ರತಿಭಟನೆ: heggaddesamachar.com

ಲಾಕ್ ಡೌನ್ ನಿಂದ ಹೊರ ದೇಶಗಳಲ್ಲಿ,ಹೊರ ರಾಜ್ಯದಲ್ಲಿ ಸಿಲಿಕಿರುವ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಉಚಿತವಾಗಿ ಕರೆತರಬೇಕೆಂದು ಆಗ್ರಹಿಸಿ ಎನ್.ಎಸ್.ಯು.ಐ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರಿನ ನ್ಯಾಯಾಲಯದ ಮುಂಭಾಗ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಕರಿಯಪ್ಪ ಮಾತನಾಡಿ
ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ದೇಶದ ವಿವಿಧ ರಾಜ್ಯಗಳಿಗೆ ತಮ್ಮ ಉನ್ನತಾಭ್ಯಾಸ ಶಿಕ್ಷಣ ಪಡೆಯಲು ತೆರಳಿದ್ದು ಕೋವಿಡ್-೧೯ ರಿಂದ ಸಂಕಷ್ಟಕ್ಕೊಳಗಾಗಿ ತಾವು ತೆರಳಿರುವ ಊರುಗಳಲ್ಲೇ ವಾಸಿಸುತಿದ್ದು ಸಾವಿರಾರು ವಿದ್ಯಾರ್ಥಿಗಳು ಊಟ ಮತ್ತು ತಮ್ಮ ರೂಮುಗಳ ಬಾಡಿಗೆ ನೀಡಲಾಗದೆ ಪರಿತಪ್ಪಿಸುತ್ತಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ದಿನನಿತ್ಯದ ಕಾಲೇಜಿನ ಬಳಿಕ ಪಾರ್ಟ್ ಟೈಮ್ ಉದ್ಯೋಗ ಮಾಡುವ ಮೂಲಕ ತಮ್ಮ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದು ಈ ಕೋವಿಡ್-೧೯ ರ ಲಾಕ್ ಡೌನ್ ನಿಂದ ಬಹಳಾ ಕಷ್ಟಪಡುತ್ತಿದ್ದು, ವಿದ್ಯಾರ್ಥಿಗಳು ದೇಶದ ಆಧಾರಸ್ಥಂಭವಾಗಿದ್ದು ಇವರೇ ನಮ್ಮ ದೇಶದ ಭವಿಷ್ಯವೂ ಆಗಿದ್ದು, ರಾಜ್ಯ ಸರ್ಕಾರ
ರಾಜ್ಯದ ವಿದ್ಯಾರ್ಥಿಗಳಿಗೆ ಬಿ.ಜ ಅನ್ಯಾಯ ಮಾಡುತ್ತಿದೆ.
ಇವರುಗಳ ಬಗ್ಗೆ ಗಮನ ಹರಿಸದಿರುವುದು ತೀವ್ರ ನೋವಿನ ಸಂಗತಿ. ಈ ಬಗ್ಗೆ ಎನ್.ಎಸ್.ಯು.ಐ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿದ್ದರು ಯಾವುದೇ ಪ್ರಕ್ರಿಯೆ ನಡೆಯದಿರುವುದು ಖಂಡನೀಯ. ಹಾಗಾಗಿ ಈ ಕೂಡಲೇ ಸರ್ಕಾರವು ಹೊರ ರಾಜ್ಯದಲ್ಲಿ ಹಾಗು ಹೊರ ದೇಶಗಳಲ್ಲಿ ಸಿಲಿಕಿರುವ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಉಚಿತವಾಗಿ ಕರೆತರಬೇಕ್ಕೆಂದು ಈ ಮೂಲಕ ಆಗ್ರಹಿಸುತ್ತದೆ ಎಂದರು.
ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ದೀಪಕ್ ಕುಮಾರ್,ರೋಹಿತ್ ಸಿಂಗ್,ಪ್ರಶಾಂತ್,ಸುಪ್ರೀತ್,ರವಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವರದಿ:ನಂದಿನಿ