“ಹೆಗ್ಗದ್ದೆ ಸಮಾಚಾರ್” ವೆಬ್ ಸೈಟ್ ಬಿಡುಗಡೆ: heggaddesamachar.com

ಈಗಾಗಲೇ ಸೋಷಿಯಲ್ ಸೈಟ್ ಗಳಲ್ಲಿ, ಯೂಟ್ಯೂಬ್ ನಲ್ಲಿ ವಾಹಿನಿಯನ್ನು ಕಟ್ಟಿ ತಮ್ಮದೇ ಛಾಪನ್ನು ಮೂಡಿಸುತ್ತಿರುವ ಹೆಗ್ಗದ್ದೆ ತಂಡ ಇದೀಗ ಡಿಜಿಟಲ್ ಬರವಣಿಗೆಯಲ್ಲಿ ಸುದ್ದಿ, ಸಾಹಿತ್ಯ, ಸಮಾಜದ ವಿಷಯಗಳ ಗುದ್ದು ನೀಡಲು ರೆಡಿಯಾಗಿದೆ. ಇದೀಗ ‘ಹೆಗ್ಗದ್ದೆ ಸಮಾಚಾರ್’ ವೆಬ್ ಸೈಟ್ ಬಿಡುಗಡೆಗೊಂಡಿದೆ….
ನಗರದ ಹೆಗ್ಗದ್ದೆ ಪ್ರಕಾಶನ ಕಛೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ‘ಹೆಗ್ಗದ್ದೆ ವರ್ಣ’ ತಂಡ ಇದನ್ನು ಲೋಕಾರ್ಪಿಸಿತು…

ಮುಖ್ಯ ಆತಿಥ್ಯದಲ್ಲಿ ವರ್ಣ ಮ್ಯೂಸಿಕ್ ತಂಡದ ಸದಸ್ಯರು ಭಾಗಿಯಾಗಿದ್ದು ವಿಶೇಷವಾಗಿತ್ತು…
ವೆಬ್ ಸೈಟ್ ಲೋಕಾರ್ಪಣೆಯ ಮೊದಲ ಕ್ಲಿಕ್ ಅಶ್ವಿತ್ ಶೆಟ್ಟಿ ಕೊಡ್ಲಾಡಿಯವರು ಮಾಡಿದರೆ, ಪೂರ್ಣ ಸೈಟ್ ಎಂಟರ್ ನ್ನು ವರ್ಣ ತಂಡದ ವಿಜೇತ ಮಂಜಯ್ಯ ಸಂಪರ್ಕಕ್ಕೆ ತೆರೆಸಿದರು.

ಈ ಸಂದರ್ಭದಲ್ಲಿ ಹೆಗ್ಗದ್ದೆ ಸಂಸ್ಥೆಯ ಸಂಸ್ಥಾಪಕ ಸಂದೀಪ್ ಶೆಟ್ಟಿ ಹೆಗ್ಗದ್ದೆ, ನಿರ್ವಾಹಕ ದೀಪಕ್ ಬಾಬು, ಸದಾನಂದ ಶೆಟ್ಟಿ ಹೆಗ್ಗದ್ದೆ, ನಿತ್ಯಾನಂದ ಶೆಟ್ಟಿ ಹೆಗ್ಗದ್ದೆ, ಮಾಗಡಿ ಲೋಕೇಶ್, ಮೂರ್ತಿ, ಹರ್ಷ, ಮೇಷ್ಯ ಪವರ್ (ಸ್ವಾಮಿ), ಶ್ರೀಧರ್ ಗೌಡ್ರು, ತನುಷಾ ಜೊತೆಗಿದ್ದರು…
ಈಗಾಗಲೇ ಡಿಜಿಟಲ್ ತಂತ್ರಜ್ಞಾನ ಜಗತ್ತನ್ನ ವ್ಯಾಪಕವಾಗಿ ಅತಿಕ್ರಮಿಸುತ್ತಿದ್ದು ಆ ನೆಲೆಯಲ್ಲಿ ಹೆಗ್ಗದ್ದೆ ತಂಡ ಬಹಳ ವರ್ಷಗಳಿಂದಲೂ ಕೆಲಸ ನಿರ್ವಹಿಸುತ್ತಿದೆ… ಇಡೀ ಹೆಗ್ಗದ್ದೆ ತಂಡ ಯೂಟ್ಯೂಬ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಅನೇಕ ಸಾಹಿತ್ಯ, ಸಮಾಜ, ರಾಜಕೀಯ, ಸಿನಿಮಾ ಹೀಗೆ ಅನೇಕ ವಿಭಾಗಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದು ಇದೀಗ ಅಂತರ್ಜಾಲ ಮಾಧ್ಯಮದಲ್ಲೂ ಕೆಲಸ ನಿರ್ವಹಿಸಲು ಉತ್ಸುಕತೆಯಲ್ಲಿ ಈ ವೆಬ್ ಸೈಟನ್ನ ಅರ್ಪಿಸಲಾಗಿದೆ.

ಪ್ರತಿ ದಿನದ ಸುದ್ದಿ, ಸಾಹಿತ್ಯದ ಓದು, ಸಮಾಜದ ಸಂಭ್ರಮ, ಅಂಕಣ ಬರಹಗಳು ಹೀಗೆ ಎಲ್ಲಾ ಬಗೆಯ ಬರವಣಿಗೆಗಳಿಗಾಗಿ ಸದಾ heggaddesamachar.com ನ ಸಂಪರ್ಕದಲ್ಲಿರಿ…