ಹೀಗೂ ಮಾಡಬಹುದು ನೋಡಿ ಮದುವೆ ವಾರ್ಷಿಕೋತ್ಸವಕ್ಕೆ- ನೀವೂ ಒಮ್ಮೆ ಟ್ರೈ ಮಾಡಿ: heggaddesamachar

ಸಾಮಾನ್ಯವಾಗಿ ಎಲ್ಲರೂ ಮದುವೆ ವಾರ್ಷಿಕೋತ್ಸವಕ್ಕೆ ಕೇಕ್ ಕಟ್ ಮಾಡಿ ಪಾರ್ಟಿ ಮಾಡಿ ಸಂಭ್ರಮಿಸುವು ದುಂಟು. ಆದ್ರೇ ಇಲ್ಲೊಂದು ದಂಪತಿ ತಮ್ಮ ಮದುವೆ ವಾರ್ಷಿಕೋತ್ಸವದ ನೆನಪಿಗಾಗಿ ಗಿಡ ನೆಡುತ್ತಿದ್ದಿದ್ದು ವಿಶೇಷವಾಗಿತ್ತು.
ಹೌದು ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ ಪರಿಸರ ಸಂರಕ್ಷಣಾ ಸಮಿತಿಯ ಬಾನು ಮೋಹನ್ ದಂಪತಿಗಳು ಹಾಗೂ ಉಪ ಅರಣ್ಯಾಧಿಕಾರಿ ಪ್ರಕಾಶ್ ರವರು ರಸ್ತೆ ಬದಿಯಲ್ಲಿ ಗಿಡ ನೆಟ್ಟು ನೀರೆರೆದರು.
ನಂತರ ಬಾನು ಮೋಹನ್ ಮಾತನಾಡಿದ ನಮ್ಮ ಮದುವೆ ವಾರ್ಷಿಕೋತ್ಸವದ ಅಂಗವಾಗಿ ರಾಮಸ್ವಾಮಿ ವೃತ್ತದಿಂದ ಮಹಾರಾಜ ಕಾಲೇಜು ಮೈದಾನದ ರಸ್ತೆಯ ಅಕ್ಕ ಪಕ್ಕ ಅರಳಿ ಹಾಗೂ ನೇರಳೆ ಗಿಡ ನೆಡುತ್ತಿದ್ದೇವೆ.

ಪರಿಸರ ಸಂರಕ್ಷಣಾ ಸಮಿತಿಯಿಂದ ಪಾಲಿಕೆ ಅನುಮತಿ ಪಡೆದು,ಗಿಡಗಳನ್ನ ಅರಣ್ಯ ಇಲಾಖೆ ನೀಡಿತು.ರಘುಲಾಲ್ ಹಾಗೂ ಬಸವ ಬಳಗ ನೀರು ಹಾಕುವುದಾಗಿ ಭರವಸೆ ನೀಡಿದ್ದಾರೆ ಎಂದರಲ್ಲದೇ ಅಭಿವೃದ್ಧಿ ಮಾಡುತ್ತೇವೆ ಎಂದು ಮರ ಕಡಿಯುತ್ತಿದ್ದಾರೆ.ಅದೇ ಜಾಗದಲ್ಲಿ ಒಂದು ಗಿಡ ನಡಬೇಕು.ಸಂಘ ಸಂಸ್ಥೆಗಳಿಂದ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವಿಲ್ಲ ಪ್ರತಿಯೊಬ್ಬರು ಗಿಡ ನೆಟ್ಟು ಪೋಷಿಸಿ ಎಂದು ಮನವಿ ಮಾಡಿದರು.