ಹಿರಿಯ ಪತ್ರಕರ್ತ ರವಿ ಬೆಳಗೆರೆಯಿಂದ ಹೆಗ್ಗದ್ದೆ ಸಮಾಚಾರ್ ವೆಬ್ ಸೈಟ್ ಲೋಕಾರ್ಪಣೆ: heggaddesamachar.com

Spread the love

ಹಿರಿಯ ಪತ್ರಕರ್ತ ರವಿ ಬೆಳಗೆರೆಯಿಂದ ಹೆಗ್ಗದ್ದೆ ಸಮಾಚಾರ್ ವೆಬ್ ಸೈಟ್ ಲೋಕಾರ್ಪಣೆ: ಡಿಜಿಟಲ್ ಬರವಣಿಗೆಯಲ್ಲಿ ಸುದ್ದಿ, ಸಾಹಿತ್ಯ, ಸಮಾಜದ ವಿಷಯಗಳ ಗುದ್ದು… ಇದೀಗ ನಿಮ್ಮ ಕೈಯಲ್ಲಿದೆ ನಮ್ಮ ‘ಹೆಗ್ಗದ್ದೆ ಸಮಾಚಾರ್’ ಸದ್ದು… ಹೌದು… ಈಗಾಗಲೇ ಡಿಜಿಟಲ್ ತಂತ್ರಜ್ಞಾನ ಜಗತ್ತನ್ನ ವ್ಯಾಪಕವಾಗಿ ಅತಿಕ್ರಮಿಸುತ್ತಿದ್ದು ಆ ನೆಲೆಯಲ್ಲಿ ಹೆಗ್ಗದ್ದೆ ತಂಡ ಬಹಳ ವರ್ಷಗಳಿಂದಲೂ ಕೆಲಸ ನಿರ್ವಹಿಸುತ್ತಿದೆ… ಇಡೀ ಹೆಗ್ಗದ್ದೆ ತಂಡ ಯೂಟ್ಯೂಬ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಅನೇಕ ಸಾಹಿತ್ಯ, ಸಮಾಜ, ರಾಜಕೀಯ, ಸಿನಿಮಾ ಹೀಗೆ ಅನೇಕ ವಿಭಾಗಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದು ಇದೀಗ ಅಂತರ್ಜಾಲ ಮಾಧ್ಯಮದಲ್ಲೂ ಕೆಲಸ ನಿರ್ವಹಿಸಲು ಉತ್ಸುಕತೆಯಲ್ಲಿ ಈ ವೆಬ್ ಸೈಟನ್ನ ನಿಮ್ಮ ಜೋಳಿಗೆಗೆ ಅರ್ಪಿಸುತ್ತಿದೆ. ಸಂತಸದ ವಿಚಾರವೆಂದರೆ ಈ ವೆಬ್ ಸೈಟ್‌ನ್ನು ಹಿರಿಯ ಪತ್ರಕರ್ತರು, ಸಾಹಿತಿಯೂ ಆಗಿರುವ ರವಿ ಬೆಳಗೆರೆಯವರು ಲೋಕಾರ್ಪಿಸಿದ್ದು ನಮ್ಮ ಇಡೀ ತಂಡಕ್ಕೆ ಸಂತಸ ತಂದಿದೆ… ಗುರುಗಳಿಗೆ ನಾವು ಅಭಾರಿ… ಪ್ರತಿ ದಿನದ ಸುದ್ದಿ, ಸಾಹಿತ್ಯದ ಓದು, ಸಮಾಜದ ಸಂಭ್ರಮ, ಅಂಕಣ ಬರಹಗಳು ಹೀಗೆ ಎಲ್ಲಾ ಬಗೆಯ ಬರವಣಿಗೆಗಳಿಗಾಗಿ ಸದಾ ನಮ್ಮ ಸಂಪರ್ಕದಲ್ಲಿರಿ… – ಸಂಪಾದಕರು

2 thoughts on “ಹಿರಿಯ ಪತ್ರಕರ್ತ ರವಿ ಬೆಳಗೆರೆಯಿಂದ ಹೆಗ್ಗದ್ದೆ ಸಮಾಚಾರ್ ವೆಬ್ ಸೈಟ್ ಲೋಕಾರ್ಪಣೆ: heggaddesamachar.com

Leave a Reply

Your email address will not be published. Required fields are marked *