News (ಸುದ್ದಿ)

ಸ್ವಂತ ಹಣದಿಂದ ಹಿಂದೂ ಮತ್ತು ಮುಸಲ್ಮಾನ ಬಂಧುಗಳ ಮನೆಗೆ ಆಹಾರದ ಕಿಟ್ – ಗ್ರಾಮ ಪಂಚಾಯತ್ ಉಪಾಧ್ಯಕ್ಷನಿಂದ ಜನಮೆಚ್ಚುವಂತ ಕೆಲಸ : heggaddesamachar.com

Spread the love

ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳ್ ಗ್ರಾಮದಲ್ಲಿ ಯುವ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಜಮೀರ್ ಅಹಮದ್ ಅವರು ರಂಜಾನ್ ಹಬ್ಬದ ಪ್ರಯುಕ್ತ ತಮ್ಮ ಸ್ವಂತ ಹಣದಿಂದ ಹಿಂದೂ ಮತ್ತು ಮುಸಲ್ಮಾನ ಬಂಧುಗಳ ಮನೆಗೆ ಆಹಾರದ ಕಿಟ್ ಮತ್ತು ಹಣ್ಣುಗಳನ್ನು ವಿತರಿಸಿದರು.

ಮಹಾಮಾರಿ ಕರೋನ ಬಂದಿರುವ ಕಾರಣ ಯಾರೂ ಸಹ ಹಸಿವಿನಿಂದ ಇರಬಾರದೆಂಬ ದೃಷ್ಟಿಯಿಂದ ನಾನು ಆಹಾರ ಕಿಟ್ ಮತ್ತು ಹಣ್ಣುಗಳನ್ನು ನಮ್ಮ ಅಕ್ಕಿಹೆಬ್ಬಾಳು ಮತ್ತು ದಡದಹಳ್ಳಿ ಗ್ರಾಮದಲ್ಲಿ ವಿವರಿಸಿದ್ದೇನೆ. ಆರ್ಥಿಕವಾಗಿ ತುಂಬಾ ದುರ್ಬಲವಾಗಿರುವ ಯಾವ ಕುಟುಂಬಕ್ಕೆ ಆದರೂ ನಾನು ಸಹಾಯ ಮಾಡಲು ಸಿದ್ಧನಿದ್ದೇನೆ ದಯಮಾಡಿ ಯಾವುದೇ ಸಂಕೋಚವಿಲ್ಲದೆ ನನಗೆ ತಿಳಿಸಿ ಎಂದು ಮನವಿ ಮಾಡಿಕೊಂಡರು.

ಹಾಗೆ ಎಲ್ಲರೂ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ವಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮೂಲಕ ಕರೋನ ಸೋಂಕಿನಿಂದ ಉಳಿಯಬೇಕೆಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಸಮೀರ್ ಅಹಮದ್ ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕುಮಾರ್, ರವಿ, ಶಿವರಾಜ್, ಹಾಗೂ ಸಮೀರ್ ಅಹಮದ್ ರವರ ಕುಟುಂಬವರ್ಗ ಇದ್ದರು.

Leave a Reply

Your email address will not be published. Required fields are marked *