Literature (ಸಾಹಿತ್ಯ)

ಸ್ಯಾಂಡಿ ನಾಳ, ಅವನಿಗೆ ಗಾಳ..; ಮಾನವೀಯತೇ, ಕರ್ತವ್ಯ ಪ್ರಜ್ಞೆ ಮರೆತು ಬದುಕುವ ಜನರ ಮಧ್ಯೆ… – ಸಂದೀಪ್ ಶೆಟ್ಟಿ ಹೆಗ್ಗದ್ದೆ – HeggaddeSamachar.com

Spread the love

ಸಂದೀಪ್ ಶೆಟ್ಟಿ ಹೆಗ್ಗದ್ದೆ :

Up course! ಎಲ್ಲರೂ ಒಂದೇ ರೀತಿ ಇರಲ್ಲ… ಹಿರಿಯರ ಮಾತಿನಂತೆ ಐದು ಕೈ ಬೆರಳು ಒಂದೇ ರೀತಿ ಇರುವುದೂ ಇಲ್ಲ. ಆದರೂ ಮಾನವೀಯತೆ ಇರಬಹುದಲ್ವಾ!?, ಮಾನವರಲ್ಲಿ ಕರ್ತವ್ಯ ಪ್ರಜ್ಞೆ ಮೇಳೈಸಬಹುದಲ್ವಾ!?

ಹೀಗೊಂದು ಪ್ರಶ್ನೆ ಎದುರಾಗಿದ್ದು ಮೊನ್ನೆ ಮೊನ್ನೆ. ಎಂದಿನಂತೆ ಮಹಾನಗರಿಯಲ್ಲಿ ನಾನು ಹೆಚ್ಚು ತಿರುಗಾಡುವುದು ನನ್ನ ಸ್ಯಾಂಡಿ ಜೊತೆಗೆ, ಓಹೊ ಸ್ಯಾಂಡಿ ಅಂದ್ರೆ ಯಾರು?? ಅಂತಿದ್ದೀರಾ!? ಅವನೇ ನನ್ನ ಬೈಕೇಶ್ವರ… ಹ ಹ್ಹ!! ಎಸ್! ನನ್ನ ಬೈಕ್ ಗೆ ನಾನು ಪ್ರೀತಿಯಿಂದ ಇಟ್ಟಿರುವ ಹೆಸರು ಅದು.

ಮಧ್ಯಾಹ್ನದ ಸಮಯ. ಊಟ ಆಗಿದ್ದಷ್ಟೇ ವಿಜಯನಗರದಿಂದ ಮಲ್ಲೇಶ್ವರಂ ಕಡೆ ಬರಬೇಕಿತ್ತು. ಇನ್ನೇನು ಬೈಕ್ ಸ್ಟಾರ್ಟ್ ಮಾಡಿ ಕ್ಲಚ್ ಹಾಕಬೇಕು, ಕ್ಲಚ್ ಕೇಬಲ್ ಕಟ್ ಆಯ್ತು. ಅಲ್ಲಿಗೆ‌ ಸ್ಯಾಂಡಿ ಅಂಗ ನಾಳ ಹೋಯ್ತು ಅಂತರ್ಥ. ಹಾಗಂತ ಇದು ಮೊದಲ ಅನುಭವವಲ್ಲ, ರಾಯಲ್ ಎನ್ ಫೀಲ್ಡ್ ಬೈಕ್ ನ ಮಾಮೂಲಿ ಪ್ರಾಬ್ಲಂ ಇದು.
ಸರಿ ಏನ್ಮಾಡೋಕಾಗತ್ತೆ. ಹೋಗಿದ್ದರ ಬಗ್ಗೆ ಚಿಂತೆ ಇಲ್ಲ… ಈಗ ಹೊಸ ಕೇಬಲ್ ಹಾಕಿಸಿಕೊಂಡು ಮುಂದೆ ಹೋಗಬೇಕಲ್ಲ ಎಂದುಕೊಂಡು ಹತ್ತಿರದಲ್ಲೇ ತಳ್ಳೋಗಾಡಿಯಲ್ಲಿ ಹಣ್ಣು ಮಾರುತ್ತಿದ್ದ ಒಬ್ಬ ವ್ಯಾಪಾರಿಯನ್ನ, ಅಣ್ಣಾ! ಇಲ್ಲೇಲ್ಲಾದರೂ ಹತ್ತಿರದಲ್ಲಿ ಬೈಕ್ ರಿಪೇರಿ ಅಂಗಡಿ ಇದ್ಯಾ ಅಂತ ಕೇಳಿದೆ. ಹಾ ಇಲ್ಲೇ ಮುಂದೆ ಡೌನ್ ಹೋಗಿ ಸಿಗುತ್ತೆ ಎಂದ…

ತಡ ಮಾಡಲಿಲ್ಲ ಸ್ಯಾಂಡಿಯ ಬಾರ ಮೈಮೇಲೆ ಹಾಕಿಕೊಂಡು ಆತ ಹೇಳಿದ ಕಡೆ ಹೊರಟೆ. ಗ್ಯಾರೇಜ್ ಎನೋ ಸಿಕ್ತು. ಆದರೆ ಆತ ಇದು ಪಂಕ್ಚರ್ ಶಾಪ್ ಸರ್ ಇಲ್ಲಿ ಅದರ ಕೇಬಲ್ ಇಲ್ಲ ಮುಂದೆ ಹೋಗಿ ಅಲ್ಲೊಂದಿದೆ ಸಿಗುತ್ತೆ ಅಂದ.

ಮತ್ತೆ ಮುಂದೆ ತಳ್ಳಿದೆ. ಆಲ್ಲಿಯಾತ ಆಗ ತಾನೇ ಶಾಪ್ ಕ್ಲೋಸ್ ಮಾಡುವ ಸಿದ್ದತೆಯಲ್ಲಿ, ಮದುವೆ ಇದೆ ಸರ್ ಹೋಗಬೇಕು, ಆ ಕೇಬಲ್ ಬೇರೆ ಇಲ್ಲ. ಇಲ್ಲೇ ಮುಂದೆ ಹೋಗಿ ಸಿಗುತ್ತೆ ಎಂದು ಆತನ ಭಾರ ಕಡಿಮೆ ಮಾಡಿಕೊಂಡು ಕೈ ತೊಳೆದುಕೊಂಡ.

ಇದೊಳ್ಳೆ ಕಥೆ ಆಯ್ತಲ್ಲ. ಇಲ್ಲಿಯವರೆಗೆ ತಳ್ಳಿದ್ದೆ ದೊಡ್ಡ ಕೆಲಸ. ಇನ್ನೂ ಮುಂದೆ ಅಂದ್ರೆ ನನ್ನಿಂದ ಆಗಲ್ಲ. ಸ್ಯಾಂಡಿ ಬೇರೆ ೩೫೦ ಕೆ.ಜಿ ಭಾರ ಇದ್ದಾನೆ… ಉಫ್!! ಎನ್ನುತ್ತಲೇ ಬೇರೆ‌ ವಿಧಿಯಿಲ್ಲದೆ ಮುಂದಿನ ಮೆಕಾನಿಕ್ ಬಳಿಗೆ ತೆರಳಿದೆ.

ಅಲ್ಲೂ ಸೇಮ್ ಪ್ರಾಬ್ಲಂ. ನಾನು ಬ್ಯುಸಿ, ಕೇಬಲ್ ಇಲ್ಲ, ಇದ್ದರೂ ಅದನ್ನೆಲ್ಲಾ ಹಾಕೋವಷ್ಟ್ ಟೈಮಿಲ್ಲ, ಮುಂದೆ ಹೋಗಿ ಅನ್ನುತ್ತಲೇ ಗೊಣಗಿದ. ಅಣ್ಣಾ‌ ಕೇಬಲ್ ನಾನೇ ಎಲ್ಲಾದರೂ ಹೋಗಿ ತಂದು ಕೊಡ್ತೀನಿ. ನಿನಗೆ ಅದು ಜಸ್ಟ್ ೫ ನಿಮಿಷದ ಕೆಲಸ ಹಾಕಿ ಕೊಡಿ ಪ್ಲೀಸ್ ಎಂದೆ.

ಸರ್ ಹೇಳಿದ್ನಲ್ವಾ ಆಗಲ್ಲ ಅಂತ ಎಂದು ವಕ್ರವಾಗಿಯೇ ಹೇಳಿದ. ಸರಿ ಬೆರೆಲ್ಲಿದೆ, ಎಲ್ಲಿ ಸಿಗುತ್ತೆ ಅದಾದರೂ ಹೇಳಿ ಎಂದರೆ, ಗೊತ್ತಿಲ್ಲ ಸರ್! ಬೇಕಿದ್ರೆ ಹುಡುಕಿಕೊಳ್ಳಿ ಎಂದು ಮುಖ ನೋಡದವರ ಥರ ಗೊಣಗಿದ.

ಯಾಕೋ ಬೇಜಾರಾಯ್ತು. ಅಲ್ಲಿಯೇ ಬೈಕ್ ಸೈಡಿಗೆ ಹಾಕಿ ಗೆಳೆಯ ವಿಜೇತನಿಗೆ ಕರೆಮಾಡಿದೆ. ಅವನ ಮನೆ ಅಲ್ಲಿಯೇ ಸಮೀಪವಿದ್ದದ್ದರಿಂದ ಅವನು ಹತ್ತೇ ನಿಮಿಷದಲ್ಲಿ ನಾನಿರುವಲ್ಲಿಗೆ ಹಾಜರಾದ.

ಸರಿ ಮೊದಲು ಕೇಬಲ್ ತರೋಣ, ಆಮೇಲೆ ನೋಡೋಣವೆಂದುಕೊಂಡು, ಹತ್ತಿರದಲ್ಲೆಲ್ಲಾದರೂ Bike ಅಸೆಸರಿ ಶಾಪ್ ಇದ್ಯಾ ಎಂದು ಹುಡುಕುತ್ತಾ ಹೊರಟೆವು. ಶಾಪ್ ಸಿಕ್ಕಿತು. ಕೇಬಲ್ ಕೂಡ ತಗೊಂಡೆವು. ಮರಳಿ ಬೈಕ್ ಬಳಿಗೆ ಬಂದು ಕೊನೆಯ ಪ್ರಯತ್ನ ಎಂಬಂತೆ ಅದೇ ಮೆಕ್ಯಾನಿಕ್ ಬಳಿ ಇನ್ನೊಮ್ಮೆ, ಸರ್ ನಮಗೆ ಅಷ್ಟಾಗಿ ತಿಳಿದಿಲ್ಲ ಹಾಕಿ ಕೊಡ್ತೀರಾ ಸರ್ ಅಂತ ಮತ್ತೆ ಕೇಳಿದೆ…

ಎಪ್ಪಾ! ಅವನ ಮನಸ್ಸು ಅದ್ಯಾವ ರೀತಿಯದ್ದೋ ಗೊತ್ತಿಲ್ಲ. Rash!! ಆದ. ಆಗಲ್ಲ ಅಂದ್ರೆ ಗೊತ್ತಾಗಲ್ವಾ, ಎಲ್ಲಿಂದ ಬರ್ತಾರೋ ತಲೆ ತಿನ್ನೋಕೆ ಎಂಬಂತೆ ನಮ್ಮ ಕಡೆ ತಿರುಗಿಯೂ ನೋಡದೆ ಆತನ ಕೆಲಸದಲ್ಲಿ ಮಗ್ನನಾದ.

ಒಂದರೆ ಘಳಿಗೆ ನಾನು ವಿಜೇತ್ ಸುಮ್ಮನೆ ನಿಂತು ಯೋಚಿಸಿದೆವು. ಆಗಲೇ ವಿಜೇತ್ ಕೇಬಲ್ ಬಿಡಿಸುವ ಪ್ರಯತ್ನ ಮಾಡತೊಡಗಿದ್ದ. ಅಂತೂ ಹಾಗೋ, ಹೀಗೋ, ಹೀಗಿರಬಹುದು, ಹಾಗಿರಬಹುದು..! ಎಂದುಕೊಳ್ಳುತ್ತಲೇ ಅದೇಗೋ ಸಕ್ಸಸ್ ಫುಲ್ ಆಗಿ ಹೊಸ ಕೇಬಲ್ ನ್ನ ಸ್ಯಾಂಡಿ ಹೊಟ್ಟೆಗೆ ಜೋಡಿಸಿಯೇ ಬಿಟ್ಟೆವು.

ನಮ್ಮ ಒದ್ದಾಟವನ್ನೆಲ್ಲಾ ಆ ಮೆಕ್ಯಾನಿಕ್ ಗಮನಿಸುತ್ತಲೇ ಇದ್ದ. ನಾ ಕೇಳಿದ ಸ್ಫಾನರ್ ಗೆ ಕೂಡ ಆತ ಅಲ್ಲಿರೋದನ್ನ ಹೆಕ್ಕಿಕೊಳ್ಳಿ, ನಿಮಗೆ ಕೊಡ್ತಾ ಇರೋಕೆ ನಮಗೇನು ಕೆಲಸ ಇಲ್ವಾ ಅಂದಿದ್ದ…
ಬೇಜಾರಾಯ್ತು…
ಬಿಡಲಿಲ್ಲ ಹಾಗೋ ಹೀಗೋ ಮಾಡಿಯೇ ಬಿಟ್ಟಿದ್ದೆವು.
ಆದರೂ ನಮ್ಮ ಛಲ ನಮಗೆ ಹೊಸದೊಂದು ಕಲಿಕೆಯನ್ನ ನೀಡಿತ್ತು…

ನಿಜ! ನಾವಿಬ್ಬರೂ ಬೈಕ್ ಕ್ಲಚ್ ಕೇಬಲ್ ನ ಜೋಡಣೆ ಕಲಿತಿದ್ದು ಒಂದುಕಡೆಯಾದರೆ, ಇನ್ನೊಂದು ಕಡೆ ಆತನಿಗೆ ಸರಿ ಮಾಡಿ ಕೊಟ್ಟಿದ್ದಕ್ಕೆ ನೀಡಬೇಕಿದ್ದ ಹಣವೂ ನಮ್ಮ ಜೇಬಲ್ಲೇ ಉಳಿಯಿತು…

ಆದರೆ ಒಂದಂಶ ನನ್ನ ಬಿಡದೆ ಕಾಡಿತು. ಅದುವೆ! ಆತನಿಗ್ಯಾಕೆ ಕರುಣೆ ಇರಲಿಲ್ಲ.
ಅದೆಷ್ಟೋ ಬಾರಿ ನಾವು ಹಾಗೆ ಹೀಗೆ ಅಂತೀವಿ ಆದರೆ ನಡುರೋಡಲ್ಲಿ ನಿಂತಾಗ, ಭವಣೆಯಲ್ಲಿ ಮಲಗಿದ್ದಾಗ ಅದರಂಶವೇ ಅನೇಕರಿಗೆ ಬರುವುದಿಲ್ಲ ಅಲ್ವಾ! ಮೇಲಾಗಿ ಮಾನವೀಯತೇ ಇಲ್ಲದ ಜನ ಇನ್ನೂ ಇದ್ದಾರೆ ಅಲ್ವಾ!?

ಅದಾಗ್ಯೂ ಎಲ್ಲರೂ ಒಂದೇ ಥರ ಇರಲ್ಲ ಬಿಡು ಎನ್ನುವ ಆತ್ಮಕ್ಕೆ ನನ್ನ ಪ್ರಶ್ನೆ… ಜನ ಕ್ಷಣಗಳ ಅಂಧಕಾರದಲ್ಲಿ ಅವರವರ ವೃತ್ತಿಗೆ ಮೋಸ ಮಾಡುವುದೇಕೆ…!?

ರೋಗಿ ಬಂದಾಗ ಡಾಕ್ಟರೇ ಗಮನಿಸಬೇಕು,
ಬೈಕ್ ಹಾಳಾದಾಗ ಮೆಕ್ಯಾನಿಕ್ಕೇ ಗಮನಿಸಬೇಕು ಅದು ಅವರವರ Responsibility ಅಲ್ವಾ ಹಾಗಾದ್ರೆ!!!!?

Leave a Reply

Your email address will not be published. Required fields are marked *