ಸ್ತ್ರೀ ಅಂದರೆ ಅಷ್ಟೆ ಸಾಕು | ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು | heggaddesamachar.com

- ಮಾಲತಿ ಲೋಕಪ್ಪ. ಅಡ್ವೊಕೆಟ್, ೯೧೧೦೬೬೫೩೪೯
೧೯೦೯, ಫೆಬ್ರವರಿ ೨೮ರಂದು ಅಮೆರಿಕದ ನ್ಯೂಯಾರ್ಕ್ನಲ್ಲಿ ಮೊದಲ ಬಾರಿಗೆ ಮಹಿಳಾ ದಿನವನ್ನು ಆಚರಿಸಲಾಯಿತು. ನಂತರ ೧೯೧ರಲ್ಲಿ ಜರ್ಮನಿಯಲ್ಲಿ ಆಚರಿಸಲಾಯಿತು. ಅದಾದ ಬಳಿಕ ೧೯೭೭ರಲ್ಲಿ ವಿಶ್ವಸಂಸ್ಥೆ ಮಾರ್ಚ್ ೮ ಅನ್ನು ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸುವಂತೆ ಘೋಷಿಸಿತು. Women’s Day: ನಿನಗೆ ಬೇರೆ ಹೆಸರು ಬೇಕೆ, ಸ್ತ್ರೀ ಎಂದರೆ ಅಷ್ಟೇ ಸಾಕೆ? ಇದರಲ್ಲಿ ಮಹಿಳೆಯ ಎಲ್ಲಾ ಸ್ಥಾನ ಮಾನಗಳ ಪ್ರತಿಕವಾಗಿರುತ್ತದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ಪ್ರತಿ ವರ್ಷ ಮಾರ್ಚ್ ೮ ರಂದು, ಮಹಿಳೆಯರಿಗೆ ಗೌರವದ ಸ್ಥಾನಮಾನ ಉತ್ತಮ ಜೀವನ ನಡೆಸುವ ಅವಕಾಶ ದೊರೆಯಬೇಕು ಎಂಬ ಉದ್ದೇಶದಿಂದ ಆಚರಿಸಲಾಗುತ್ತದೆ. ಮನೆಯಲ್ಲಿ ಕಸ ಗುಡಿಸೋಕೆ ಹೆಣ್ಣಿಗೆ ಮಾತ್ರ ಹೇಳಿಕೊಟ್ಟು, ಗಂಡು ಮಕ್ಕಳಿಗೆ ಅದರ ಅವಶ್ಯಕತೆ ಇಲ್ಲ ಎನ್ನುವ ಎಲ್ಲರಿಗೂ ಧಿಕ್ಕಾರ. ಒಮ್ಮೊಮ್ಮೆ ನಾವು ಗೆಳತಿಯರು ಮಾತಾಡಿಕೊಳ್ತೇವೆ, “ಎಲ್ಲರನ್ನೂ ಒಂದು ೨ ವರ್ಷ ಹೊರದೇಶಕ್ಕೆ ಕಳುಹಿಸಿದರೆ ಎಲ್ಲಾ ಗಂಡು ಮಕ್ಕಳು ಮನೆ ಕೆಲಸ ಎಲ್ಲಾ ಕೆಲಸ ಮಾಡಲು ಕಲೀತಾರೆ ಬಿಡೆ,” ಎಂದು ನಕ್ಕು ಸುಮ್ಮಾನಾಗ್ತಿದ್ವಿ. ದೇವತೆ ಎಂದು ಪೂಜಿಸುವ ಹೆಣ್ಣುಮಕ್ಕಳನ್ನು ಈಗಲೂ ಅಳೆಯುವುದು ಅವಳ ಬುದ್ಧಮತ್ತೆಯಿಂದ, ಅವಳ ಕಲೆಯಿಂದ, ಅವಳ ಸೌಂದರ್ಯದಿ0ದ; ಅಲ್ಲದೇ ಅವಳ ಅಡಿಗೆ ಕಲೆ, ಮನೆ ನಡೆಸುವ ಕಲೆಯಿಂದಷ್ಟೇ ಎನ್ನುವುದು ಸತ್ಯ. ಮೊನ್ನೆ ನಾ ಅಂದುಕೊಳ್ಳುತ್ತಿದ್ದೆ, “ಎಲ್ಲರೂ ಊಟ ಮಾಡುತ್ತಾರೆ. ಆದರೆ ಅಡಿಗೆ ಕೆಲಸದ ಜವಬ್ದಾರಿಯನ್ನು ಮಾತ್ರ ಯಾಕೆ ಒಂದು ಗುಂಪಿಗೆ ಹೊರಿಸಲಾಗಿದೆ. ಒಮ್ಮೊಮ್ಮೆ ಈ ಅಸಮಾನತೆ ಕೋಪ ತರಿಸುತ್ತದೆ. ಹೆಣ್ಣು ಮೃದುವಾಗಿರಬೇಕು, ಶಾಂತವಾಗಿರಬೇಕು, ತ್ಯಾಗ ಮಾಡಬೇಕು, ತಲೆ ಬಗ್ಗಿಸಬೇಕು, ಜೋರಾಗಿ ಮಾತಾಡಬಾರದು ಎಂಬ ಹುಚ್ಚು ಕಟ್ಟುಪಾಡುಗಳನ್ನು ಇನ್ನಾದರೂ ಮುರಿಯಬೇಕಿದೆ. ಗಂಡು ಜೋರಾಗೇ ಇರಬೇಕು, ಹೆಣ್ಣು ಶಾಂತವಾಗಿರಬೇಕೆ0ಬ ವಿನಃ ಮಾತುಗಳು ಅರ್ಥವಾಗುವುದಿಲ್ಲ ಗಂಡು ಹೆಣ್ಣು ಎಂಬ ಬೇದ-ಬಾವ ಪ್ರಾರಂಭವಾಗುವುದೇ ಮನೆಯಿಂದ. ತನ್ನ ಕೆಲಸ ಕಾರ್ಯ, ತನ್ನ ಗೌರವವನ್ನು ಕಾಪಾಡಿಕೊಳ್ಳಲು ಹೆಣ್ಣು ಯಾವಾಗಲೂ ಮುಂದಾಗಬೇಕು. ಹೆಣ್ಣು ಎಂದು ಗೌರವ ಕೊಡುವುದಕ್ಕಿಂತ ಆಕೆಯೂ ಮನುಷ್ಯಳು ಎಂದು ಗೌರವಿಸುವ ಪದ್ಧತಿ ಶುರುವಾಗಬೇಕಿದೆ. ಈ ವಿಶ್ವ ಹೆಣ್ಣು ಮಕ್ಕಳ ದಿವಸದಂದಾದರೂ ಇದು ನಡೆಯಲಿ. ತಾಯಿಯಾಗಿ, ಸಹೋದರಿಯಾಗಿ, ಗೆಳತಿಯಾಗಿ, ಹೆಂಡತಿಯಾಗಿ ಸ್ತ್ರೀ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾಳೆ. ಮಹಿಳೆಯರಿಗೆ ಗೌರವದ ಸ್ಥಾನಮಾನ ನೀಡಬೇಕು, ಅವರಿಗೈ ಸಮಾಜದಲ್ಲಿ ಉತ್ತಮ ಜೀವನ ನಡೆಸುವ ಅವಕಾಶ ದೊರೆಯಬೇಕು ಎಂಬ ಉದ್ದೇಶದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ.
creative happy womens day event banner design
ಏನನ್ನೂ ಹೇಳದೆ ಎಲ್ಲಾ ಕೆಲಸವನ್ನು ತನ್ನ ಮೈಮೇಲೆ ಎಳೆದುಕೊಳ್ಳುವ ಹೆಂಗಸರಿಗೆ ತಮ್ಮನ್ನು ಬದಲಾವಣೆ ಮಾಡಿಕೊಳ್ಳುವ ಮನಸ್ಸು ಮಾತ್ರ ಬರುವುದಿಲ್ಲ. ಮಗ ಯಾವತ್ತೂ ಆ ಕೆಲಸ ಮಾಡಿಲ್ಲ… ಈಗಲೂ ಮಾಡಲ್ಲ… ಈ ರೀತಿಯ ಭಾವನೆಯನ್ನು ಅಮ್ಮಂದಿರು ಹೊರಹಾಕದಿದ್ದರೆ ಮನೆಯಲ್ಲಿ ಬದಲವಣೆ ಬರೋದು ತುಂಬಾ ಕಷ್ಟ. ಸಮಾಜ ನಮಗೆ ಕಟ್ಟುಪಾಡು ಹಾಕಿದೆ. ನಾವು ಅದನ್ನು ಬಿಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಅಥವಾ ಈ ಸಮಾಜದಲ್ಲಿ ಬದಲವಣೆ ತರುವ ಪ್ರಯತ್ನ ಮಾಡಬೇಕು. ಅದು ಬಿಟ್ಟು ಇವತ್ತು ತನ್ನ ಮಗಳಗೆ ಕೆಲಸ ಮಾಡಲು ಕಲಿಸುವ ಹೆಣ್ಣುಮಕ್ಕಳೇ ಜಾಸ್ತಿ ಅಗಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಎರಡನೇ ದರ್ಜೆ ನಾಗರೀಕರನ್ನಾಗಿ ನೋಡುವ ಪರಿ ಬದಲಿಸುವ ಪ್ರಯತ್ನ ಮಾಡಬೇಕಾಗಿದೆ. “ನನಗೆ ಸುಮ್ಮನೆ ಅಡುಗೆ ಮಾಡಿಕೊಡು ಹುಡುಗಿ; ಅವಳ ಅಸ್ತಿತ್ವವೇ ಇಲ್ಲದೇ, ‘ನೀ ಹೇಳಿದಂಗೆ ಕೇಳಿಕೊಂಡು ಹೋಗ್ತೀನಿ’ ಎನ್ನುವ ಹುಡುಗಿ ಬೇಡವೇ ಬೇಡ. ಅವಳು ಕೆಲಸ ಮಾಡಬೇಕು. ಇಬ್ಬರೂ ಸೇರಿ ಅಡುಗೆ ಮಾಡ್ತೀವಿ,” ಎಂದ ಹೇಳುವ ಗಂಡಸರು ತುಂಬಾ ಕಡಿಮೆ. ಓದಿಗೂ ಅವರ ಮಾತಿಗೂ ಯಾವುದೇ ಸಂಬ0ಧವಿಲ್ಲ ಎಂಬ ಅರಿವು ಗಂಡಸರನ್ನು ಕಂಡಾಗ ಆಗುತ್ತದೆ. ಈಗೆ ಗೃಹಿಣಿಯಲ್ಲ, ಇಡೀ ಮನುಕುಲವನ್ನೇ ಹೊತ್ತ ಜಗಜ್ಜನನಿ ಬಹಳ ಓದಿರ್ತಾರೆ. ಸಂಬಳ ಬರುತ್ತದೆ. ಲೋಕ ಜ್ಞಾನವೂ ಇರುತ್ತದೆ. ಆದರೂ ಸಹ ಮಾತಿಗೂ ವಿದ್ಯೆಗೆ ಸಂಬ0ಧವೇ ಇರುವುದಿಲ್ಲ ಎನ್ನುವಂತೆ ವರ್ತಿಸುತ್ತಾರೆ. ನೀವು ಯಾವುದೇ ಮನೆಯನ್ನು ನೋಡಿ, ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋದರೆ, ಸಮಯ ಸಂದರ್ಭ ಏನೇ ಇದ್ದರೂ ಅಡುಗೆ ಕೆಲಸ ಹೆಣ್ಣುಮಕ್ಕಳದೇ; ಇಷ್ಟ ಇದೆಯೋ ಇಲ್ಲವೋ ಅವರದನ್ನು ಮಾಲೇಬೇಕು. ಮಾರ್ಚ್ ೮ ರಂದು ಮಾತ್ರ ಮಹಿಳಾ ದಿನಚರಣೆಯಲ್ಲ, ದಿನವೂ ಎಲ್ಲರ ಜೀವನ ನಡೆಯಿವುದು ಮಹಿಳೆಯರಿಂದಲೆ ಆದ್ದರಿಂದ ಪ್ರತಿದಿನವೂ ಮಹಿಳಾ ದಿನ. ಮಾರ್ಚ್ ೮ ಮಹಿಳಾದಿನಾಚರೆಣೆಯೆಂದು ಆಚರಿಸಿದರೆ ಸಾಲದು. ಎಲ್ಲರು ಅವರವರ ಮನೆ ಮತ್ತು ಕಛೇರಿಗಳಲ್ಲಿ ಮಹಿಳೆಯರಿಗೆ ಪೀತಿ, ಗೌರವದಿಂದ ಕಾಣುವಂತಾಗಬೇಕು ಆಗ ಮಾತ್ರ ಮಹಿಳೆ ಎನ್ನುವ ಪದಕ್ಕೆ ಕೊಡುವ ಗೌರವವಿರುತ್ತದೆ. ಭೂಮಿಯನ್ನು ಭೂತಾಯಿಯೆಂದು ಗೌರವಿಸುವುದಕ್ಕೂ ಅರ್ಥ ಬರುತ್ತದೆ.
You’ve gotten very good info here.
You’ve got superb info right here.