Literature (ಸಾಹಿತ್ಯ)

ಸೌಂದರ್ಯ ಸಾಧನಗಳ ಅಗತ್ಯ ಇದೆಯೇ ಸಹಜತೆಯೆ‌ ಸೌಂದರ್ಯ ಯಾಕಾಗಬಾರದು ? : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

ಸೌಂದರ್ಯ ಸಾಧನಗಳು ಎಲ್ಲರಿಗೂ ಚಿರಪರಿಚಿತ. ಇದನ್ನು ಉಪಯೋಗಿಸಿ ಸುಂದರವಾಗಿ ಕಾಣಿಸಿಕೋಳ್ಳುತ್ತೆನೆಂಬ ಭ್ರಮೆಗೆ ಒಳಗಾಗುವವರಲ್ಲಿ ಕೇವಲ ಮಹಿಳೆಯರು, ಮಕ್ಕಳು ಅಷ್ಟೇ ಅಲ್ಲದೇ ಪುರುಷರು ಕೂಡ ಹಿಂದೆ ಇಲ್ಲ. ಸುಂದರವಾಗಿ ಕಾಣಲು ಯಾರು ತಾನೇ ಇಚ್ಚಿಸುವುದಿಲ್ಲ. ಮೈಕಾಂತಿ, ಕಣ್ಣು, ಮೂಗು, ಹುಬ್ಬು, ತುಟಿ ಎಲ್ಲದರ ಸೌಂದರ್ಯ ಹೆಚ್ಚಿಸಿ ಕೊಳ್ಳುವ ತರಾತುರಿಯಲ್ಲಿ ಸಿಕ್ಕ ಸಿಕ್ಕ ಸೌಂದರ್ಯ ವರ್ಧಕ ಬಳಕೆಗೆ  ಶರಣಾಗುವುದು ಸರಿಅಲ್ಲ. ಸೌಂದರ್ಯ ಸಾಧನಗಳ ಅಗತ್ಯ ಇದೆಯೇ. ಇದ್ದರೆ ಯಾಕೆ ಬೇಕು.  ಸಹಜತೆಯೆ ಸೌಂದರ್ಯ ಯಾಕಾಗಬಾರದು ಎನ್ನುವುದನ್ನು ಯೋಚಿಸಿ. ನಾನು ವಯಕ್ತಿಕವಾಗಿ ಯಾವುದೇ ಸೌಂದರ್ಯ ಸಾಧನಗಳನ್ನು ಬಳಸುತ್ತಿಲ್ಲ, ಬಳಸಿದವಳು ಅಲ್ಲ ಎಂಬ ಕಾರಣಕ್ಕೆ ಇತರರಿಗೆ ಚೌಕಟ್ಟನ್ನು ಹಾಕುವ, ಮೌಲ್ಯವನ್ನು ಹೇರುವ ಉದ್ದೇಶದಿಂದ ಈ ಲೇಖನ ಬರೆದಿಲ್ಲ  ಬದಲಿಗೆ ಸೌಂದರ್ಯ ಸಾಧನಗಳ ಬಳಕೆಯಿಂದ ಆಗುವ  ಅನಾಹುತದತ್ತ ಗಮನ ಹರಿಸಿ ಎಚ್ಚತ್ತುಕೊಳ್ಳಲಿ ಎಂಬುದು ನನ್ನ ಭಾವನೆ.

ಚಿರಸೌಂದರ್ಯ ಹೆಚ್ಚಿಸಿಕೊಳ್ಳಲು ಹಲವಾರು ಉಪಾಯಗಳನ್ನು ಹುಡುಕುವುದರಲ್ಲಿ ನಿರತರಾಗಿ‌ ತನಗೆ  ವಿವೇಚನಾ ಶಕ್ತಿ ಇದೆ ಎಂಬುದನ್ನು ಕೊಚ್ಚಿಕೊಳ್ಳುವ ಮನುಷ್ಯ ಜಾಹೀರಾತುಗಳ ಮಾಯಾ ಜಾಲಕ್ಕೆ ಸಿಲುಕಿ ಫ್ಯಾಷನ್ನ‌ ಹೆಸರಿನಲ್ಲಿ ತನ್ನ ಅಭಿರುಚಿಗಳನ್ನು ಕೆಡಿಸಿಕೊಂಡಿದ್ದಾರೆ.ಕೆಲ ದಿನಗಳ‌ ಹಿಂದೆ‌  ದಿನಪತ್ರಿಕೆ ಯೊಂದರ ವರದಿ ಓದಿ‌ ಬೆರಗಾದೆ.ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ವಿದ್ಯಾರ್ಥಿನಿಗೆ  ಪ್ರತಿಭಾಕಾರಂಜಿಯ ನೃತ್ಯ ದಲ್ಲಿ ಭಾಗವಹಿಸಲು ಮೇಕಪ್‌ಮಾಡಲಾಗಿತ್ತು. ಅಂದಕ್ಕಾಗಿ ಹಚ್ಚಿಕೊಂಡ ಲಿಪ್ಪ್ ಸ್ಟಿಕ್ ಆಕೆಯ ‌ಬದುಕಿನ ಅಂದಕೆಡಿಸಿತು. 10 ವರ್ಷದ ಹುಡುಗಿ 70 ವರ್ಷದ ಮುದುಕಿಯಂತಾದಳು. ತಾಳಲಾರದ ನೋವು, ನರಳಾಟಕ್ಕೆ  ಅವಧಿ ಮುಗಿದ ಲಿಪ್ ಸ್ಟಿಕ್ ನಲ್ಲಿ ತೀವ್ರ ತರದ ರಾಸಾಯನಿಕ ಒಳಗೊಂಡಿರುವುದರ ಅಡ್ಡ ‌ಪರಿಣಾಮವಾಗಿದೆ. ತುಟಿಗೆ ಹಚ್ಚಿದ್ದರಿಂದ ಬೇಗನೆ ರಕ್ತ ದಲ್ಲಿ  ಪರಿಣಾಮ ಬೀರಿದೆ ಎನ್ನುತ್ತಾರೆ ವೈದ್ಯರು. ತುಟಿಗೆ ರಂಗು ಹಚ್ಚುವುದರಿಂದ ತಮ್ಮ ಸೌಂದರ್ಯ ವರ್ಧಿಸುತ್ತದೆ  ಎನ್ನುವುದೂ ಭ್ರಮೆ. ಅತಿಯಾಗಿ ಲಿಪ್ಸ್ ಸ್ಟಿಕ್ ಬಳಸುವುದರಿಂದ ತುಟಿಗಳ ಅಲರ್ಜಿ ಸಮಸ್ಯೆ ಯನ್ನು ಎದುರಿಸಬೇಕಾಗುತ್ತದೆ.ತುಟಿಗಳಿಗೆ ಬಣ್ಣ ಹಚ್ಚುವ ಬದಲು‌ ತುಟಿಗಳಲ್ಲಿ ನಗು ಇದ್ದರೆ ಸಾಲದೆ.

ಸೌಂದರ್ಯ ವಿರುವುದು ವ್ಯಕ್ತಿತ್ವದಲ್ಲಿ ಚರ್ಮದ ಬಣ್ಣ ದಿಂದ ಅಲ್ಲ. ಇಂತಹ ಮನಸ್ಥಿತಿ ಹುಟ್ಟಿ ಕೊಂಡಿದ್ದಾದರೂ ಏಕೆ ಏಲ್ಲಿಂದ . ಸ್ವಲ್ಪ ಆಳವಾಗಿ ಯೋಚಿಸಿದರೆ ಎಷ್ಟೋ ನಿರ್ಬಂಧಿತ ಸೌಂದರ್ಯ ಸಾಧನಗಳು ಹೆಚ್ಚು ಬಳಕೆಯಲ್ಲಿರುವುದು ತಿಳಿಯುತ್ತದೆ. ಲಾಭಿಕೋರ ವ್ಯಾಪಾರಿಗಳು ಹಾಗೂ ಕಂಪೆನಿಗಳ ಮೋಡಿ‌ಮಾಡುವ ಜಾಹೀರಾತುಗಳು ಮತ್ತು ‌ಪ್ರಾಯೋಜಿತ‌ ವರದಿಗಳ‌ ಮೂಲಕ‌ ಸೌಂದರ್ಯ ಸಾಧನಗಳ ಅನೇಕ ಲಾಭಗಳನ್ನು ಹೇಳಿ‌ ಜನರನ್ನು ಜಾಲಕ್ಕೆ ಬೀಳಿಸುವುದರಲ್ಲಿ‌ ಸಫಲರಾಗುತ್ತಿರುವುದು‌‌ ಕಂಡು ಬರುತ್ತದೆ.ಸೌಂದರ್ಯ ವರ್ಧಕ ಉತ್ಪನ್ನ ಗಳನ್ನು ತಯಾರಿಸುವ ಕಂಪನಿ  ಪಾರ್ಲರ್ ಗಳೊಂದಿಗೆ  ಹೊಂದಣಿಕೆ ಮಾಡಿಕೊಂಡು ರಾಸಾಯನಿಕ ಯುಕ್ತ  ಕಾಸ್ಮೆಟಿಕ್ ಗಳನ್ನು ಮರಳುಮಾಡುವ ಜೌಹೀರಾತುಗಳ ಮೂಲಕ ರವಾನಿಸುತ್ತಾರೆ.   ಶೃಂಗರಿಸಿ ಕೊಳ್ಳುವುದು ತಪ್ಪಲ್ಲ ಕೆಲ ದಶಕಗಳ ಹಿಂದೆ ಶೃಂಗರಿಸಿಕೊಳ್ಳುವುದರಲ್ಲಿ  ವೈಜ್ಞಾನಿಕ ನೋಟವಿದ್ದು ಆರೋಗ್ಯದ ಕಾಳಜಿ ಇತ್ತು. ಆದರೆ ಇಂದು ಕಿರುತೆರೆ, ಬೆಳ್ಳಿತೆರೆ ತಾರೆಯರನ್ನು ಅನುಕರಿಸಲು ಹೋಗಿ ಸರಳ ಬದುಕನ್ನು ಬಿಟ್ಟು ಜಾಹೀರಾತು ‌ಹೇಳುವ‌ ಸುಳ್ಳು ಗಳಿಗೆ ವಿದ್ಯಾವಂತರು‌ ಬಲಿಯಾಗುವುದು  ದುರಂತ. ಕೃತಕ ಸೌಂದರ್ಯ ಸಾಧನಗಳ ನಿರಂತರ ಬಳಕೆಯಿಂದ ಅಲರ್ಜಿ, ಚರ್ಮ ರೋಗ ಸಂಭವ ಹೆಚ್ಚು.

ದೈಹಿಕ ಮಾನಸಿಕ,ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದಲ್ಲಿ ಸಂಪೂರ್ಣ ಸೌಂದರ್ಯ ವಂತರಾಗಬಹುದು.ಹಾಗಾದರೆ ಸೌಂದರ್ಯ ಸಾಧನಗಳು, ಬ್ಯೂಟಿ ಪರ್ಲರ್ ಗಳ ಅಗತ್ಯ ‌ನಿಮಗಿದೆಯೆ.  ಸುಂದರವಾಗಿ ಕಾಣುವಂತೆ‌ ಮಾಡುತ್ತದೆ ಎಂದು ಘೋಷಣೆ ಮಾಡುವ ಸೌಂದರ್ಯ ವರ್ಧಕಗಳಿಗೆ ಮಾರುಕಟ್ಟೆಯಲ್ಲಿ ಇನ್ನಿಲ್ಲದ ‌ಬೇಡಿಕೆ. ಕಳಪೆ ಗುಣಮಟ್ಟದ ‌ರಾಸಾಯನಿಕಗಳಿಂದ‌ ಕೂಡಿದ ಸೌಂದರ್ಯ ಸಾಧನಗಳ ಅಡ್ಡ ಪರಿಣಾಮಗಳು ಹೆಚ್ಚು . ಚಂದ ಅಥವಾ ಸೌಂದರ್ಯ ‌ಅರ್ಥವೇ ಬದಲಾಗಿದೆ. ತೆಳ್ಳಗೆ‌ ಬೆಳ್ಳಗೆ ಕಾಣುವುದು ಮಾತ್ರ ಸೌಂದರ್ಯ ವಲ್ಲ .ಸೌಂದರ್ಯ ಸ್ಪರ್ಧೆಯಲ್ಲಿಯೂ  ಸೌಂದರ್ಯ ದೊಂದಿಗೆ  ಕೇಳಿದ  ಪ್ರಶ್ನೆ ಗೆ ನೀಡಿದ ಉತ್ತರಕ್ಕೆ ತಕ್ಕಂತೆ ಆಯ್ಕೆ ‌ಆಗುತ್ತದೆ.

ಚನ್ನಾಗಿ ಕಾಣ ಬೇಕೆನ್ನುವ ತುಡಿತ ಇಟ್ಟು ಕೊಂಡವರ ಆಡಿಯಿಂದ ‌ಮುಡಿ ತನಕವೂ ಕೃತಕ ಸೌಂದರ್ಯ ‌ಸಾಧನಗಳಿಂದ ಶೃಂಗಾರವೇ ತುಂಬಿರುತ್ತದೆ. ಪಾದರಕ್ಷೆ ಯಿಂದ ಕೇಶರಾಶಿಯವರೆಗೂ ಆಧುನಿಕತೆ ತುಂಬಿಕೊಂಡು ಸುಂದರವಾಗಿ‌ಕಾಣುತ್ತೇನೆ ಎನ್ನುವ ಹುಚ್ಚು ಭ್ರಮೆಯೋ ಒಟ್ಟಿನಲ್ಲಿ ಚನ್ನಾಗಿ ಕಾಣುವ ಉದ್ದೇಶ ವೋ, ಆಧುನಿಕ ಜೀವನ ಶೈಲಿಯೋ ..ದುರಾದೃಷ್ಟ ವೆಂದರೆ ‌ಇಂದು ಬಹುತೇಕ ಮಹಿಳೆಯರು ಪಾಶ್ಚಾತ್ಯ ಜೀವನ ಶೈಲಿ ಆಕರ್ಷಣೆಯ  ಸೊಬಗಿಗೆ ಮಾರುಹೋಗಿ  ರಾಸಾಯನಿಕ ‌ಕಲಬೆರಕೆಯ ಸೌಂದರ್ಯ ಸಾಧನಗಳನ್ನು ಇತಿಮಿತಿ‌ ಇಲ್ಲದೆ ಬಳಸುವುದು‌ ಸಮಂಜಸವಲ್ಲ.

ಮಣಿನಿಂದ ಹೊನ್ನಿನ ವರೆಗಿನ ವಿವಿಧ ವಸ್ತು ಗಳನ್ನು ಬಳಸಿ ತಯಾರಿಸಲಾಗಿದೆ ಎನ್ನುವ  ಕೆಲ ಸೌಂದರ್ಯ ಸಾಧನಗಳ ತಯಾರಿಕೆಯಲ್ಲಿ ಬಳಸಿರುವ ಮೂಲ ವಸ್ತುಗಳ ವಿವರ ಹಾಗೂ ಯಾವುದೇ ತರದ ಎಚ್ಚರಿಕೆಗಳಿರುವುದಿಲ್ಲ.ತ್ವಚೆಯ ಆರೋಗ್ಯ ಪೂರ್ಣ ನಿರ್ವಹಣೆ ಮತ್ತು ಸೌಂದರ್ಯವನ್ನು ಅತ್ಯುತ್ತಮವಾಗಿ ಉಪಚಾರ‌ಮಾಡುತೇವೆಂಬ‌ ಘೋಷಣೆ ಮಾಡುವ ಎಲ್ಲಾ ‌ತರಹದ ಸೌಂದರ್ಯ ಸಾಧನಗಳ ಆಕರ್ಷಕ ಜಾಹೀರಾತುಗಳು‌ ಕೇವಲ ಸುಳ್ಳು ಪ್ರಚಾರಗಳಿಗೆ ಮರುಳಾಗದೆ ನೈಸರ್ಗಿಕ ಉಪಚಾರ‌ಮಾಡಿದಾಗ  ಉತ್ತಮ ಪರಿಣಾಮ ಸಿಗಲಿದೆ.

ಪಾಶ್ಚಾತ್ಯ ದೇಶದಲ್ಲಿ ಇದ್ದ‌ಮುಖ ಬೆಳ್ಳಗಾಗಿಸುವ, ತಾರುಣ್ಯ ಹೆಚ್ಚಿಸುವ, ಸುಕ್ಕುಗಳನ್ನು ಅಳಿಸಲು ಬಳಸುವ ಆಧುನಿಕ ‌ ಸೌಂದರ್ಯವರ್ಧಕ ಗಳು ಮತ್ತು ‌ಇಂಜೆಕ್ಷನ್ ಗಳ‌ ಪರಿಣಾಮಕಾರಿ‌ ಚಿಕಿತ್ಸೆ ಗಳಿಗೆ‌ ಈಗ ಭಾರತೀಯರು ಮುಗಿ‌ಬೀಳುತ್ತಿದ್ದಾರೆ.ಆದರೆ ‌ವಿದೇಶಿಯರು ನಮ್ಮ ‌ದೇಶಿ‌ಪ್ರಕಾರಗಳನ್ನು ಅನುಸರಿಸಲು  ಪ್ರಾರಂಭಿಸಿದ್ದಾರೆ.ಮಹಾತ್ಮ ಗಾಂಧೀಜಿ ಒಂದೆಡೆ “ಹೃದಯ ಸೌಂದರ್ಯ ದ ಮುಂದೆ ಶರೀರ ಸೌಂದರ್ಯ ವ್ಯರ್ಥ ಎಂದು ಹೇಳಿದ್ದಾರೆ. ಬಾಹ್ಯ ಸೌಂದರ್ಯ ಕಾಲ ಮಾನಕ್ಕನು ಸಾರ ಮಾಸಬಹುದು . ಬಾಹ್ಯ ಸೌಂದರ್ಯ ಕ್ಕಿಂತ ಹೃದಯ ಸೌಂದರ್ಯ ಮತ್ತು ಆರೋಗ್ಯ ಅತೀ ಮುಖ್ಯ ನೆನಪಿರಲಿ. ಅತಿಯಾದ ಮೇಕಪ್  ನಿಂದ ಆಗುವ ಅನಾಹುತಗಳಿಂದ ಎಚ್ಚರವಹಿಸಿ.

Leave a Reply

Your email address will not be published. Required fields are marked *