News (ಸುದ್ದಿ)

ಸೋನಿಯಾ ವಿರುದ್ಧದ ಏಫ್.ಐ.ಆರ್ ದಾಖಲು ದುರುಪಯೋಗದ ಕೆಲಸ – ಎಂ ಲಕ್ಷ್ಮಣ್: heggaddesamachar

Spread the love

ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ವಿರುದ್ಧ ಎಫ್.ಐ.ಆರ್ ದಾಖಲಿಸಿರುವ ವಿಚಾರದಲ್ಲಿ ಗೃಹ ಸಚಿವರು ಪೊಲೀಸ್ ಇಲಾಖೆಯನ್ನು ದುರುಪಯೋಗ ಮಾಡಿ ಕೊಂಡಿದ್ದಾರೆ. ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿಕೆ.

ಸೋನಿಯಾಗಾಂಧಿ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಕೆ. ವಿ. ಪ್ರವೀಣ್ ಆರ್.ಎಸ್.ಎಸ್ ಕಾರ್ಯಕರ್ತನಾಗಿದ್ದು ಬಿಜೆಪಿಯಲ್ಲಿ ಗುರ್ತಿಸಿಕೊಂಡಿರುವ ವ್ಯಕ್ತಿ. ಪೊಲೀಸರ ಮೇಲೆ ಒತ್ತಡ ಹಾಕಿ ಎಫ್.ಐ.ಆರ್ ದಾಖಲು ಮಾಡಲಾಗಿದೆ. ಆರ್.ಎಸ್.ಎಸ್ ನ ಪ್ರಮುಖರಾಗಿರುವ ಅಪ್ಪು ನಾರಾಯಣ ಅವರ ನಿರ್ದೇಶನದಂತೆ ಎಫ್.ಐ.ಆರ್ ದಾಖಲಾಗಿದೆ.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಪ್ರಭಾವೀ ಮುಖಂಡರು ಉನ್ನತ ಪೊಲೀಸ್ ಅಧಿಕಾರಿಗೆ ಸೂಚನೆ ನೀಡಿ ಮುಖ್ಯಮಂತ್ರಿ ಹಾಗು ಗೃಹ ಸಚಿವರ ಅನುಮತಿ ಪಡೆದು ಸೋನಿಯಾಗಾಂಧಿ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ. ಅಷ್ಟಕ್ಕೂ ಪಿಎಂ ಕೇರ್ ಫಂಡ್ ಬಗ್ಗೆ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ. ಟ್ವಿಟರ್ ನ್ನು ಕಾಂಗ್ರೆಸ್ ಪಕ್ಷ ನಿರ್ವಹಿಸುತ್ತಿದೆ. ಇದರಲ್ಲಿ ಸೋನಿಯಾಗಾಂಧಿ ಅವರ ಪಾತ್ರವೇನು ಇಲ್ಲ. ಈ ವಿಚಾರದಲ್ಲಿ ಕೂಲಂಕುಷ ತನಿಖೆಯಾಗಬೇಕು.

ಸೋನಿಯಾಗಾಂಧಿ ವಿರುದ್ಧ ದಾಖಲಾಗಿರುವ ಎಫ್.ಐ.ಆರ್ ನ್ನು ಕೂಡಲೇ ರದ್ದು ಮಾಡಬೇಕು. ಬೇಜವಾಬ್ದಾರಿಯುತವಾಗಿ ನಡೆದುಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿದರು. ಅಲ್ಲದೇ, ಕೊರೊನಾ ಕೈ ಯಿಂದ ಹರಡುತ್ತದೆ, ಕಮಲದ ಹೂವಿನಿಂದ ಅಲ್ಲ ಎಂದು ಸಾಗರ ಪೊಲೀಸ್ ಠಾಣೆಯ ಎ.ಎಸ್.ಐ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ. ಸಾಗರ ಪೊಲೀಸ್ ಠಾಣೆಯ ಎ.ಎಸ್.ಐ ಮೀರಾಬಾಯಿ ಈ ರೀತಿ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರವನ್ನು ಬಳಸಿಕೊಂಡು ಎ.ಎಸ್.ಐ ಮೀರಾಬಾಯಿ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ. ಹಾಗಾಗಿ ಮೀರಾಬಾಯಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿದರು. ಅಂತೆಯೇ, ಪತ್ರಿಕೆಗಳಲ್ಲಿ ಕೊರೊನಾ ವಾರಿಯರ್ಸ್ ಫೋಟೋ ಹಾಕಲಿ. ಅಧಿಕಾರಿಗಳ ಜೊತೆ ಪ್ರತಾಪ್ ಸಿಂಹ ಫೋಟೋ ಹಾಕಿಸ್ತಾರೆ. ಪ್ರತಾಪ್ ಸಿಂಹ ಯಾವ ಕೊರೊನಾ ವಾರಿಯರ್ಸ್. ಪ್ರತಾಪ್ ಸಿಂಹ ಕೊರೊನಾ ವಿರುದ್ಧ ಎಲ್ಲಿ ಹೋರಾಟ ನಡೆಸಿದ್ರು. ಮೈಸೂರು ಭಾಗದಲ್ಲಿ ಪ್ರತಾಪ್ ಸಿಂಹ ಏನ್ ಮಾಡಿದ್ದಾರೆ.

ದುಡ್ಡು ಕೊಟ್ಟಿ ಜಾಹೀರಾತು ಹಾಕಿಸಿಕೊಳ್ತಾರೆ. ಬಿಜೆಪಿಯವರಿಗೆ ಬುದ್ದಿ ಇಲ್ಲ. ರಾಮದಾಸ್ ಅವರು ಕೊರೊನಾ ವಿರುದ್ದ ಏನ್ ಕೆಲಸ ಮಾಡಿದ್ದಾರೆ. ಪ್ರತಾಪ್ ಸಿಂಹ,ರಾಮದಾಸ್ ಇಬ್ಬರು ಮಾಡಿರೋ ಕೆಲಸದ ಬಗ್ಗೆ ಮಾಹಿತಿ ಕೊಡಲಿ. ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಸಂಸದ, ಶಾಸಕರ ವಿರುದ್ದ ಆಕ್ರೋಶ.

Leave a Reply

Your email address will not be published. Required fields are marked *