
ಕೊರೋನಾದಿಂದ ಸಾವಿನ ಕದ ತಟ್ಟುತ್ತಿರುವ ಕರಾಳದಿನಗಳಲ್ಲೂ ತನ್ನ ಕನಸಗೋಪುರದ ಮಹಾದಾಸೆಯನ್ನು ಕೈಚೆಲ್ಲಿ, ಕೊರೋನಾ ಪೀಡಿತರಿಗೆ ಸೇವೆ ನೀಡಿ ಜೀವ ಉಳಿಸುತ್ತಿರುವ ಸೇವಾ ಕಾರ್ಯಕರ್ತರು, ವೈದ್ಯಲೋಕ, ದಾದಿಯರ ಶುಶ್ರೂಷೆಯಲ್ಲಿ ಸಹೃದಯತೆ ಪದಗಳಿಗೆ ಎಟುಕದ, ಅಳತೆಗೆ ನಿಲುಕದ ಸಾವಿನ ದವಡೆಯಲ್ಲಿ ನಿಂತು ಧೃತಿಗೇಡದೆ ಮಾನವೀಯತೆ ನೆಲೆಗೊಂಡ ನೆಲಕ್ಕೆ ಸಾಕ್ಷಿಯಂತೆ ತೋರುತ್ತಿದೆ.
ತಮ್ಮ ಅಪ್ತರಿಂದ ಅಪಾರ ದೂರನಿಂತು, ರಾತ್ರಿ ಹಗಲೆನ್ನದೆ ದುಡಿದು ದಣಿದು, ಬಿಡುವಿಲ್ಲದಂತೆ ಬೆವರ ಹನಿಗೂ ದುಃಖವಾಗುವ ಮಟ್ಟಕ್ಕೆ, ನಿಮ್ಮ ಶ್ರಮಕ್ಕೆ ಸಾಟಿ ಏನಿದೆ!
ವಾಯುನೆಲೆಯಿಂದ ನಿಮಗಿದೋ ಪುಷ್ಪ ನಮನ.

Post Views:
268