News (ಸುದ್ದಿ)

ಸೇಡಿಗೆ ಸೇಡು – ಮೊನ್ನೆ ಆತ ಒಬ್ಬನನ್ನ ಕೊಂದ, ನಿನ್ನೆ ಈತನನ್ನ ಇನ್ನೊಬ್ಬ ಕೊಂದ : heggaddesamachar.com

Spread the love

ಕ್ಯಾತಮಾರನಹಳ್ಳಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಅಮಲಿನಲ್ಲಿದ್ದ ಸ್ನೇಹಿತರು ಸತೀಶ್ ಎಂಬಾತನನ್ನು ಕೊಲೆ ಮಾಡಿದ್ರು. ಆ ಘಟನೆ ಮಾಸುವ ಮುನ್ನವೇ ಆರೋಪಿಯ ಸಹೋದರ ಅಭಿಷೇಕ್ ನನ್ನು ಕೊಲೆ ಮಾಡಿ ಸೇಡಿಗೆ ಸೇಡು ತೀರಿಸಿಕೊಂಡಿದ್ದಾರೆ.

ಕೊಲೆಯಾದ ಯುವಕ ಅಭಿಷೇಕ್ (೨೨).ಗಾಯತ್ರಿಪುರಂ ಚರ್ಚ್ ರಸ್ತೆಯಲ್ಲಿ ಆರೋಪಿ ಕಿರಣ್ ಸೋದರ ಅಭಿಷೇಕ್ ನನ್ನು ಮೃತನಾದ ಸತೀಶ್ ಸಂಬಂಧಿಕ ಮಹೇಂದ್ರ ಅಲಿಯಾಸ್ ಬೆಂಕಿ ಮಹೇಂದ್ರ ಕೊಲೆ ಮಾಡಿದ್ದಾನೆ.ನಂತರ ಆರೋಪಿಯೇ ಪೋಲಿಸರಿಗೆ ಕರೆ ಮಾಡಿ ಕೊಲೆ ಮಾಡಿ ದ್ವೇಷ ತೀರಿಸಿಕೊಂಡೆ ಎಂದು ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.

ಘಟನೆ ವಿವರ:- ಮೇ 5 ರಂದು ಕೊಲೆಯಾಗಿದ್ದ ಸತೀಶ್
ಮೈಸೂರಿನ ಕ್ಯಾತಮಾರನಹಳ್ಳಿ ದಲಿತ ಕಾಲೋನಿಯ ಸತೀಶ್(24) ಮೇ 5 ರಂದು ಕೊಲೆಯಾಗಿದ್ದ.
ಸ್ನೇಹಿತರು ಕುಡಿದ ಅಮಲಿನಲ್ಲಿ
ಸತೀಶನ ಪ್ರೇಯಸಿಯ ವಿಚಾರಕ್ಕೆ ಕಿರಣ್ ಮತ್ತು ಮಧು ಸತೀಶನ ಜೊತೆ
ಮಾತಿನ ಚಕಮಕಿ ನಡೆಸಿದ್ದೇ ಕೊಲೆಗೆ ಕಾರಣವಾಗಿತ್ತು.ಈ ಸಂಬಂಧ ಉದಯಗಿರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Leave a Reply

Your email address will not be published. Required fields are marked *