ಸುಶಾಂತ್ ರಜಪೂತ್ ಸಿಂಗ್ “ಎಂಎಸ್ ಧೋನಿ ದಿ ಅನ್ ಟೋಲ್ಡ್ ಸ್ಟೋರಿ”ಯ ಖ್ಯಾತ ನಟ ಆತ್ಮಹತ್ಯಗೆ ಶರಣು: heggaddesamachar

ಎಂಎಸ್ ಧೋನಿ ಜೀವನಚರಿತ್ರೆಯನ್ನು ಒಳಗೊಂಡ: ಎಂಎಸ್ ಧೋನಿ ದಿ ಅನ್ ಟೋಲ್ಡ್ ಸ್ಟೋರಿ ಖ್ಯಾತಿಯ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈನಲ್ಲಿ ತನ್ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಎಪ್ರಿಲ್ ತಿಂಗಳಲ್ಲಿ ಬಾಲಿವುಡ್ 2 ನಕ್ಷತ್ರಗಳನ್ನು ಕಳೆದುಕೊಂಡಿದ್ದು, ಈಗ ಇವರ ಅಗಲುವಿಕೆ ಬಾಲಿವುಡ್ ಗೆ ನೋವುಂಟು ಮಾಡುವ ಸಂಗತಿ ಎಂದರೆ ತಪ್ಪಾಗಲಾರದು.
1986 ಜನವರಿ 21ರಂದು ಜನಿಸಿದ ಸುಶಾಂತ್ ಸಿಂಗ್ ರಜಪೂತ್ ಭಾರತೀಯ ಚಿತ್ರರಂಗದಲ್ಲಿ ಅದರಲ್ಲೂ ಬಾಲಿವುಡ್ ನಲ್ಲಿ ಉತ್ತಮ ನಟನೆಯ ಮೂಲಕ ಮನ ಸೆಳೆದಿದ್ದರು.
ಧಾರಾವಾಹಿಗಳ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಸುಶಾಂತ್ ಅವರು ಮೊದಲ ಬಾರಿಗೆ ಸ್ಟಾರ್ ಪ್ಲಸ್ ಅಲ್ಲಿ ಪ್ರಸಾರವಾಗುತ್ತಿದ್ದ, ರೋಮ್ಯಾಂಟಿಕ್ ನಾಟಕ ಕಿಸ್ ದೇಶ್ ಮೇ ಹೈ ಮೆರಾ ದಿಲ್ ನಲ್ಲಿ ನಟರಾಗಿ ಕಿರುಪರದೆಯ ಮೂಲಕ ಕಾಣಿಸಿಕೊಂಡರು.
ರಜಪೂತ್ ಕೈ ಪೋ ಸಚೆ ಎಂಬ ಸ್ನೇಹಿತ ನಾಟಕಕ್ಕೆ ಅತ್ಯುತ್ತಮ ಚೊಚ್ಚಲ ಚಿತ್ರಕ್ಕಾಗಿ ಫಿಲ್ಮ್ ಫೇರ್ಪ್ರಶಸ್ತಿಗೂ ಪಾತ್ರರಾದರು. ಅತ್ಯುತ್ತಮ ನಟ ಎಂಬ ಫಿಲ್ಮ್ಫೇರ್ ಅವರಿಗೆ ಅವಾರ್ಡ್ ಗೆ ಭಾಜನಾರಾಗಿದ್ದ ಹೆಗ್ಗಳಿಕೆ ಇವರದ್ದು.

ಎಂಎಸ್ ಧೋನಿ ದಿ ಅನ್ ಟೋಲ್ಡ್ ಸ್ಟೋರಿ ಜೀವನ ಚರಿತ್ರೆಯಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡು ಹೆಚ್ಚು ಪ್ರಸಿದ್ಧಿ ಪಡೆದ ಹೆಗ್ಗಳಿಕೆ ಇವರದ್ದು.