News (ಸುದ್ದಿ)

ಸುಧಾಮೂರ್ತಿ ಕಾಲಿಗೆರಗಿದ ಅಮಿತಾಬ್ ಬಚ್ಚನ್: HeggaddeSamachar.com

Spread the love

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಿರೂಪಣೆಯ ಅತೀ ಹೆಚ್ಚು ಟಿ.ಆರ್.ಪಿಯನ್ನ ಇಂದಿಗೂ ತನ್ನ ತೋಳ್ತೆಕ್ಕೆಯಲ್ಲಿ ಇರಿಸಿಕೊಂಡಿರುವ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದ ಒಂದು ಫೋಟೋ ಇದೀಗ ವೈರಲ್ ಆಗಿದೆ.

ಹೌದು..! ‘ಕೌನ್ ಬನೇಗಾ ಕರೋಡ್‌ಪತಿ’ ಸೀಸನ್ ೧೧ ರ ಕೊನೆ ಸಂಚಿಕೆಯಲ್ಲಿ ನಮ್ಮೂರ ಅಮ್ಮ, ನೆಚ್ಚಿನ ಕನ್ನಡತಿ ಖ್ಯಾತ ಲೇಖಕಿ, ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಭಾಗವಹಿಸಿದ್ದರು. ವಿಶೇಷವೆಂದರೆ ಈ ಕಾರ್ಯಕ್ರಮ ಇನ್ನೂ ಪ್ರಸಾರವಾಗಿಲ್ಲ. ಇದೇ ತಿಂಗಳ ೨೯ಕ್ಕೆ ಸೋನಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಹಾಗಾದರೆ ಫೋಟೋ ಸಿಕ್ಕಿದ್ದು ಹೇಗೆ ಎಂದು ನೀವೇನಾರು ಕೇಳೋದಾದರೆ, ಇದು ಸಿಕ್ಕಿದ್ದು ಚಾನೆಲ್ ಬಿಡುಗಡೆ ಮಾಡಿದ ಪ್ರೋಮೋದಿಂದ… ಎಸ್! ಪ್ರೋಮೋದಲ್ಲಿ ಸುಧಾಮೂರ್ತಿ ಪಾದಕ್ಕೆ ಅಮಿತಾಬ್ ಬಚ್ಚನ್ ನಮಸ್ಕರಿಸಿದ್ದಾರೆ. ಅಲ್ಲದೇ ಸುಧಾಮೂರ್ತಿಯವರನ್ನು ಭೇಟಿಯಾಗಿದ್ದು ನನ್ನ ಸೌಬಾಗ್ಯ. ಅವರು ಇರುವ ದೇಶದಲ್ಲಿ ನಾನಿರುವುದು ನನಗೆ ಹೆಮ್ಮೆ ಅವರ ಜನಪರ ಕಾಳಜಿಗಳು ಕೆಲಸಗಳು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ದುರ್ಬಲರಿಗೆ ಅವರು ನೀಡುತ್ತಿರುವ ಸಹಕಾರ ಶ್ಲಾಘನೀಯ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *