Cinema (ಸಿನಿಮಾ)

ಸುದೀಪ್ ಮತ್ತೆ ವಿಲನ್: heggaddesamachar.com

Spread the love

ಕಿಚ್ಚ ಸುದೀಪ್ ದಬಾಂಗ್ ೩ ಚಿತ್ರದಲ್ಲಿ ವಿಲನ್ ಆದ ಮೇಲೆ ಅವರ ಮಾರ್ಕೆಟ್ ಇನ್ನೂ ಜಾಸ್ತಿ ವಿಸ್ತರಣೆ ಕಂಡಿದೆ ಎನ್ನಬಹುದು. ಇದೀಗ ಅವರು ಮತ್ತೊಂದು ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿರುವ ಸುದ್ದಿಯೂ ಹೊರಬಿದ್ದಿದ್ದು ಅಭಿಮಾನಿಗಳಲ್ಲಿ ಪುಳಕ ಹೆಚ್ಚಾಗಿದೆ.

ಎಸ್… ಶಿಂಬು ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಮಾನಡು ಚಿತ್ರದಲ್ಲಿ ಸುದೀಪ್ ವಿಲನ್ ಆಗಿ ಕಾಣಿಸಿಕೊಳ್ಳುವುದು ಬಹುತೇಕ ಪಕ್ಕಾ ಆಗಿದೆ…

ಮಾನಡು ಚಿತ್ರ ೨೦೧೮ ರಲ್ಲೆ ಸೆಟ್ಟೇರಬೇಕಿತ್ತು ಆದರೆ ಶಿಂಬು ಮತ್ತು ಸುರೇಶ್ ಕಾಮಟ್ಟಿಯವರ ಒಳ ಜಗಳದಿಂದ ಚಿತ್ರ ಸೆಟ್ಟೇರದೆ ನಿಂತಿತ್ತು. ಇದೀಗ ಶಿಂಬು ತಂದೆ, ನಿರ್ದೇಶಕ ಟಿ. ರಾಜೇಂದರ್ ಅವರ ಮುತ್ಸದ್ದಿ ತನದಿಂದ ಈ ಚಿತ್ರ ಮತ್ತೆ ಸೇಟ್ಟೇರುತ್ತಿದ್ದು, ಜನವರಿಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ

Leave a Reply

Your email address will not be published. Required fields are marked *