ಸುದೀಪ್ ಗೆ ಅನಾರೋಗ್ಯ – ಬೇರೊಬ್ಬರಿಂದ ಬಿಗ್ ಬಾಸ್ ವಾರದ ಕಥೆ

Spread the love

ಸುದೀಪ್ ಗೆ ಅನಾರೋಗ್ಯ – ಬೇರೊಬ್ಬರಿಂದ ಬಿಗ್ ಬಾಸ್ ವಾರದ ಕಥೆ:

ನಟ, ಬಿಗ್ ಬಾಸ್ ನಿರೂಪಕ ಸುದೀಪ್ ಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಈ ತರುವಾಯ ವಾರಾಂತ್ಯದ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡಲು ಮನೆಗೆ ಹೊಸ ನಿರೂಪಕರೊಬ್ಬರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಚಾನೆಲ್ ನ ಮೂಲಗಳು ತಿಳಿಸಿವೆ.

ಹೊಸ ನಿರೂಪಕರು ಬರದೇ ಇದ್ದಲ್ಲಿ:

ಹೌದು ಹೊಸ ನಿರೂಪಕರು ಬರದೇ ಇದ್ದಲ್ಲಿ ಸ್ಫರ್ದಿಗಳಿಗೆ ಈ ವಾರ ಹೆಚ್ಚಿನ ಆ್ಯಕ್ಟಿವಿಟೀಸ್ ನೀಡುವ ಸಾಧ್ಯತೆ ಇದ್ದು, ಮುಂದಿನವಾರ ಇಬ್ಬರನ್ನು ಎಲಿಮಿನೇಟ್ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಬಿಗ್‌ಬಾಸ್‌ 8ನೇ ಆವೃತ್ತಿ 7ನೇ ವಾರಕ್ಕೆ ಕಾಲಿಟ್ಟಿದ್ದು, ಪ್ರತಿ ವಾರಾಂತ್ಯ ‘ವಾರದ ಕಥೆ ಕಿಚ್ಚನ ಜೊತೆ’ ಹಾಗೂ ‘ಸೂಪರ್‌ ಸಂಡೇ ವಿದ್‌ ಸುದೀಪ್‌’ ಕಾರ್ಯಕ್ರಮಗಳನ್ನು ಸುದೀಪ್‌ ನಡೆಸಿಕೊಡುತ್ತಿದ್ದರು. ಇದರಲ್ಲಿ ಭಾನುವಾರ ಎಲಿಮಿನೇಷನ್‌ ಪ್ರಕ್ರಿಯೆಯೂ ಇರುತ್ತಿತ್ತು. ಪ್ರತಿ ಶನಿವಾರ ಇಡೀ ದಿನ ಎರಡೂ ದಿನಗಳ ಶೂಟಿಂಗ್‌ ನಡೆಯುತ್ತಿತ್ತು. ಈ ವಾರ, ಸುದೀಪ್‌ ಅವರ ಬದಲಾಗಿ, ಮತ್ತೊಬ್ಬ ನಿರೂಪಕರನ್ನು ಆಹ್ವಾನಿಸಲು ಕಲರ್ಸ್‌ ಕನ್ನಡ ಚಿಂತನೆ ನಡೆಸಿದೆ.

ಈ ಕುರಿತು ಚರ್ಚೆ ನಡೆಯುತ್ತಿದೆ. ಹೀಗಾಗಿ ಎಲಿಮಿನೇಷನ್‌ ಇದ್ದೇ ಇರುತ್ತದೆ ಎಂದು ಚಾನೆಲ್‌ ಮೂಲಗಳು ತಿಳಿಸಿವೆ.

ಕೋವಿಡ್ ಟೆಸ್ಟ್ ಮಾಡಿಸಿಯೇ ಮನೆಯೊಳಗೆ ಪ್ರವೇಶ:

ಕೋವಿಡ್‌–19 ಹಿನ್ನೆಲೆಯಲ್ಲಿ ಈ ಬಾರಿ ಬಿಗ್‌ಬಾಸ್‌ ಮನೆ ಪ್ರವೇಶಿಸುವ ಮೊದಲೇ ಎಲ್ಲ ಕೋವಿಡ್‌ ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್‌ನಲ್ಲಿ ಇರಿಸಿ ಮನೆ ಒಳಗೆ ಕಳುಹಿಸಲಾಗಿತ್ತು. ಸುದೀಪ್‌ ಅವರೂ ಸೇರಿದಂತೆ ಪ್ರತಿ ಬಾರಿ ಬಿಗ್‌ಬಾಸ್‌ ಮನೆ ಒಳಗೆ ಪ್ರವೇಶಿಸುವ ಎಲ್ಲರಿಗೂ ಆರ್‌ಟಿಪಿಸಿಆರ್‌ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.

Leave a Reply

Your email address will not be published. Required fields are marked *