ಸಿದ್ಧಾಪುರದಲ್ಲಿ ಅಭೂತಪೂರ್ವ ಯಶಸ್ಸು ಕಂಡಿತು ನಾಲ್ಕರ ಯಕ್ಷ ಸಂಕಲ್ಪ – HeggaddeSamachar

ಕುಂದಾಪುರ: ಜನ್ಸಾಲೆ ರಾಘವೇಂದ್ರ ಆಚಾರ್ಯ ಅಭಿಮಾನಿ ಬಳಗ ಸಿದ್ದಾಪುರ ಇವರ ಸಂಯೋಜನೆಯಲ್ಲಿ ನಡೆದ ಯಕ್ಷ ಸಂಕಲ್ಪ ನಾಲ್ಕರ ಕಾರ್ಯಕ್ರಮ ಇತ್ತೀಚೆಗೆ ಸಿದ್ದಾಪುರದ ಹೈಸ್ಕೂಲ್ ಮೈದಾನದಲ್ಲಿ ಅಭೂತಪೂರ್ವ ಯಶಸ್ಸಿನೊಂದಿಗೆ ಸಂಪನ್ನಗೊಂಡಿತು ಹಾಗೆ ರಂಗರತ್ನ ಐರಬೈಲು ಆನಂದ ಶೆಟ್ಟಿ ಯವರಿಗೆ ಪೆರ್ಡೂರು ಮೇಳದ ರಂಗವೇದಿಕೆಯಲ್ಲಿ ಯಕ್ಷ ಸಾಮ್ರಾಟ್ ಬಿರುದನ್ನು ಸಮರ್ಪಿಸಿ ಹುಟ್ಟೂರು ಅಭಿನಂದನೆಯನ್ನು ನೀಡಲಾಯಿತು.

ಕಿಕ್ಕಿರಿದ ಕಲಾಭಿಮಾನಿಗಳ ಮಧ್ಯೆ ಮಾನಸ ಗಂಗಾ ಕಥಾ ಪ್ರಸಂಗ ಯಶಸ್ವಿಯಾಗಿ ಪ್ರದರ್ಶನಗೊಂಡಿತು.
ಈ ಅಭೂತಪೂರ್ವ ಕಾರ್ಯಕ್ರಮವನ್ನು ಅಮೃತ್ ರಾಜ್ ಶೆಟ್ಟಿ, ಸುದರ್ಶನ್ ಶೆಟ್ಟಿ, ಹರ್ಷ ಸಿದ್ದಾಪುರ ಹಾಗೂ ಜನ್ಸಲೆ ರಾಘವೇಂದ್ರ ಆಚಾರಿ ಅಭಿಮಾನಿ ಬಳಗ ಸಿದ್ದಾಪುರ… ಇವರು ಸಂಯೋಜಿಸಿದ್ದರು.

ಕಾರ್ಯಕ್ರಮದ ಬಗ್ಗೆ ಮಾತನಾಡಿದ ಸಂಯೋಜಕ ವೃಂದ ಈ ಎಲ್ಲಾ ಕಾರ್ಯಕ್ರಮ ಸ್ಥಳೀಯರ ಸಹಕಾರದಿಂದ ಯಶಸ್ವಿಯಾಯಿತು. ಸಹಕರಿಸಿದ ಕಲಾಭಿಮಾನಿಗಳಿಗೆ , ಎಲ್ಲಾ ಮುಖ್ಯ ಅತಿಥಿಗಳು,ಧನ ಸಹಾಯವನ್ನಿತ್ತ ದಾನಿಗಳಿಗೆ ,ವಾಟ್ಸಾಪ್ ಫೇಸ್ ಬುಕ್ ಮೂಲಕ ಪ್ರಚಾರವನ್ನು ನೀಡಿದ ಆತ್ಮೀಯರಿಗೆ ,ದೃಶ್ಯ ಮಾಧ್ಯಮ ಮತ್ತು ಪತ್ರಿಕಾ ಮಾಧ್ಯಮದವರಿಗೆ ,ಸ್ಥಳಾವಕಾಶವನ್ನು ಕಲ್ಪಿಸಿಕೊಟ್ಟ ಪ್ರೌಢ ಶಾಲಾ ಮುಖ್ಯೋಪಾಧ್ಯಯರು, ಶಿಕ್ಷಕರು ,ಹಾಗೂ ಶಾಲಾಭಿವೃದ್ಧಿ ಸಮಿತಿ ಇವರಿಗೂ ,ಆರಕ್ಷಕ ಠಾಣೆ ಶಂಕರ ನಾರಾಯಣ ಅವರಿಗೂ ,ಗ್ರಾಮ ಪಂಚಾಯತ್ ಸಿದ್ದಾಪುರ,ಆಟೋ ಮಾಲಕರು ಚಾಲಕರ ಸಂಘ,ಟ್ಯಾಕ್ಸಿ ಮಾಲಕರು ಚಾಲಕರ ಸಂಘ,ಗೂಡ್ಸ್ ವಾಹನ ಮಾಲಕರು ಚಾಲಕರ ಸಂಘ ಸಿದ್ದಾಪುರ, ಸರ್ವ ಕಲಾವಿದರು ಪೆರ್ಡೂರು ಮೇಳ ಅವರಿಗೂ ಕೂಡ ಹಾಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೂಡ ಹೃದಯಾಂತರಾಳದ ವಂದನೆಗಳು ಎಂದರು.

ಕರಾವಳಿಯ ಗಂಡು ಯಕ್ಷಗಾನ ದಿನದಿಂದ ದಿನಕ್ಕೆ ಹೊಸ ಹೊಸ ರೂಪಗಳನ್ನು, ಪ್ರೋತ್ಸಾಹಗಳನ್ನು, ವಿಭಿನ್ನ ಪ್ರಯತ್ನಗಳನ್ನು ಪಡೆಯುತ್ತಿದ್ದು, ಈ ರೀತಿಯ ಯಕ್ಷ ಸಂಕಲ್ಪ ಸಂಯೋಜನೆಗಳು ಕಲೆ ಬಾಳಿ ಬದುಕಲು ಸ್ಫೂರ್ತಿ ಮತ್ತು ಮುಂದಿನ ಪೀಳಿಗೆಗೆ ಮಾದರಿ ಎನ್ನಬಹುದು.
ರೀ: ಹೆಗ್ಗದ್ದೆ ಸಮಾಚಾರ ಬೆಂಗಳೂರು
