ಸಿಗ್ನಲ್ ಜಂಪ್ ಸೆರೆ- ಟ್ರಾಫಿಕ್ ಪೋಲೀಸ್ ಗೆ ಬಹುಮಾನ: heggaddesamachar

ಸಂಚಾರ ನಿಯಮ ಉಲ್ಲಂಘಿಸಿ ಎಸ್ಕೇಪ್ ಆಗುವ ವಾಹನಗಳ ಫೋಟೋವನ್ನ ಕ್ಷಣಾರ್ಥದಲ್ಲಿ ಸೆರೆಹಿಡಿದ ಟ್ರಾಫಿಕ್ ಪೋಲಿಸ್ ವಿದ್ಯಾಸಾಗರ್ ರವರಿಗೆ ದೇವರಾಜ ಸಂಚಾರ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಮುನಿಯಪ್ಪ ಬಹುಮಾನ ನೀಡಿ ಪ್ರೋತ್ಸಾಹಿಸಿದ್ದಾರೆ.
ಕಳೆದ ವಾರದಲ್ಲಿ ದೇವರಾಜ ಸಂಚಾರ ಪೊಲೀಸ್ ಠಾಣಾ ಸರಹದ್ದು ಕೃಷ್ಣರಾಜ ಒಡೆಯರ್ ವೃತ್ತದ ಉತ್ತರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಎಪ್.ಟಿ.ವಿ.ಆರ್.ಮಾಡಿಸಲು ನೇಮಿಸಿದ ಸಿಬ್ಬಂದಿಗಳಲ್ಲಿ ವಿದ್ಯಾಸಾಗರ್ ಪಿಸಿ-472 ರವರು ಸುಮಾರು 159 ಪ್ರಕರಣಗಳನ್ನು ಪೋಟೊ ತೆಗೆದು ಎಫ್.ಟಿ.ವಿ.ಆರ್. ಮಾಡಿಸಿರುತ್ತಾರೆ. ಆದ್ದರಿಂದ ಅವರಿಗೆ ಬಹುಮಾನ ನೀಡುವುದರ ಮೂಲಕ ಇನ್ಸ್ಪೆಕ್ಟರ್ ಮುನಿಯಪ್ಪ ರವರು ಪ್ರೋತ್ಸಾಹಿಸಿದ್ದಾರೆ.

ಅದೇ ರೀತಿ ಛತ್ರಪತಿ ಪಿಸಿ -106 ಹಾಗೂ ಗುರುಮಲ್ಲಪ್ಪ ಹೆಚ್.ಸಿ.-73 ರವರುಗಳು ಸಹಾ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದು ಅವರಿಗೂ ಸಹಾ ಬಹುಮಾನ ನೀಡಿ ಪ್ರೋತ್ಸಾಹಿಸಿದ್ದಾರೆ.
ಸಿಗ್ನಲ್ ಜಂಪ್ ಮಾಡುವುದು,ಏಕ ಮುಖ ರಸ್ತೆಯಲ್ಲಿ ವಿರುದ್ದವಾಗಿ ವಾಹನ ಚಲಾಯಿಸುವುದು ಸೇರಿದಂತೆ ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿದ ವಾಹನ ಸವಾರರ ಪೋಟೋ ಸೆರೆಯಾಗಿದ್ದು ಅವರಿಗೆ ನೋಟಿಸ್ ಕಳಿಸಲಾಗಿದೆ.
ವಾಹನ ಸವಾರರೇ ತಿಳಿದು ತಿಳಿದು ಸಂಚಾರಿ ನಿಯಮ ಉಲ್ಲಂಘಿಸಿದ್ರೇ ನಿಮ್ಮ ಮನೆನೂ ದಂಡ ಕಟ್ಟುವಂತೆ ನೋಟಿಸ್ ಬರಬಹುದು ಎಚ್ಚರ ….ಎಚ್ಚರ…..ಎಚ್ಚರ…..