News (ಸುದ್ದಿ)
ಸಾಲು ಮರದ ತಿಮ್ಮಕ್ಕ ಅಸ್ವಸ್ಥ – ಆಸ್ಪತ್ರೆಗೆ ದಾಖಲು: heggaddesamachar.com

ಪರಿಸರವನ್ನೇ ಮಕ್ಕಳೆಂದು ಕಂಡ ಮಮತೆಯ ಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಮರದಾಸರೆಯ ನೆರಳೇ, ಬದುಕಿಗೆ ಭರವಸೆಯನ್ನು ಬಳುವಳಿಯಾಗಿ ನೀಡಿತೇನೋ!
ಗುರುವಾರ ಸಂಜೆ ಸಾಲುಮರದ ತಿಮ್ಮಕ್ಕ ಅವರು ಅತೀವ ಹೊಟ್ಟೆನೋವು ವಾಂತಿ ಭೇಧಿಯಿಂದ ಅಸ್ವಸ್ಥರಾಗಿದ್ದು,
ಲೌಕ್ ಡೌನ್ ಸಮಯ ಆಗಿದ್ದರಿಂದ ದತ್ತುಪುತ್ರ ಬಳ್ಳೂರು ಉಮೇಶ್ ಅವರು ಬೇಲೂರಿನ ತನ್ನೂರಾದ ಬಳ್ಳೂರು ಗ್ರಾಮಕ್ಕೆ ತೆರಳಿ ಎರಡು ತಿಂಗಳಿಂದ ಲಾಕ್ಡೌನ್ನಿಂದ ಹಿಂದಿರುಗಲಾಗದೇ ಅಲ್ಲೇ ಉಳಿದುಕೊಂಡಿದ್ದಾರೆ.
ಈ ತುರ್ತು ಸಂದರ್ಭದಲ್ಲಿ ಇತರರ ನೆರವಿನಿಂದ ತಿಮ್ಮಕ್ಕ ಅವರನ್ನು ಶೀಘ್ರವಾಗಿ ಅಸ್ಪತ್ರೆಗೆ ರವಾನೆ ಮಾಡಿ ಶೀಘ್ರವೇ ಚಿಕಿತ್ಸೆ ನೀಡಿದ್ದರಿಂದ ಈಗ ಚೇತರಿಸಿಕೊಳ್ಳುತ್ತಿದ್ದು, ಸ್ಕ್ಯಾನಿಂಗ್ ರಿಪೋರ್ಟ್ಗಾಗಿ ಕಾಯುತ್ತಾ ಇದ್ದಾರೆ. ರಿಪೋರ್ಟ್ ಲಭ್ಯವಾದ ಬಳಿಕ ಸದ್ಯದ ಸ್ಥಿತಿ ನೋಡಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದೆಂದು ಅಸ್ಪತ್ರೆ ಮೂಲಗಳು ಖಾತರಿಪಡಿಸಿದೆ.