News (ಸುದ್ದಿ)

ಸಾರಿಗೆಯನ್ನು ಬಳಸಿಕೊಳ್ಳುವ ಮುನ್ನ ಕೊರೋನಾ ನಿಯಂತ್ರಣ ನಿಯಮವನ್ನು ಪಾಲಿಸಿ – ನೇಸರ: heggaddesamachar.com

Spread the love

ಮೈಸೂರು ನಗರದಲ್ಲಿ ಜನಸಾಮನ್ಯರ ಒಳಿತಿಗಾಗಿ ಪ್ರಾರಂಭವಾಗಿರುವ ಕೆ.ಎಸ್.ಆರ್.ಟಿ.ಸಿ ಬಸ್ ಸಾರಿಗೆಯನ್ನು ಬಳಸಿಕೊಳ್ಳುವ ಮುನ್ನ ಕೊರೋನಾ ನಿಯಂತ್ರಣ ನಿಯಮವನ್ನು ಪಾಲಿಸಬೇಕೆಂದು ನೇಸರ ಸಂಸ್ಥೆಯ ವತಿಯಿಂದ ನಗರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಉಚಿತವಾಗಿ 200 ಮಾಸ್ಕ್ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ನಂತರ ಮಾತನಾಡಿದ ನೇಸರ ಸೇವಾ ಸಂಸ್ಥೆ ಅಧ್ಯಕ್ಷರಾದ ರವಿತೇಜ ಅವರು ಲಾಕ್ ಡೌನ್ ತೆರೆದ ಪ್ರತಿ ನಗರ ಹಾಗೂ ಜಿಲ್ಲೆಗಳಲ್ಲಿ ಹೆಚ್ಚಾಗಿ ಜನಸಂದಣಿ ಹೆಚ್ಚಿರುವುದರಿಂದ ಜನರಿಗೆ ಕೋರನ ಬಗ್ಗೆ ಜಾಗೃತಿ ಮೂಡದೇ ಇರುವ ಕಾರಣ ಮಾಸ್ಕ್‌ ಧರಿಸದೇ ಸ್ಯಾನಿಟೈಸರ್ ಉಪಯೋಗಿಸದೆ ನಗರದಾದ್ಯಂತ ಕೋರನ ಸಂಖ್ಯೆ ಹೆಚ್ಚಾಗುವ ಸಂಭವವಿದ್ದು ಮೈಸೂರು ನಗರ ಇನ್ನೂ ಕೋರನ ಮುಕ್ತ ನಗರ ವಾಗಿಲ್ಲ ಸುಮಾರು ಸಾವಿರಾರು ಜನಸಂಖ್ಯೆಯಲ್ಲಿ ಕ್ವಾರಂಟೈನ್ ನಲ್ಲಿ ಇನ್ನೂ ವಾಸಿಸುತ್ತಿದ್ದು ಈ ಸಂದರ್ಭದಲ್ಲಿ ಮಾಸ್ಕ್ ಗಳನ್ನು ಸರಕಾರ ಕಡ್ಡಾಯ ಮಾಡಿದ್ದು ಪ್ರಯಾಣಿಕರಿಗೆ ಅನುಕೂಲವಾಗಲೆಂದು ಮಾಸ್ಕ್ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .

www.heggaddesamachar.com

ನಗರ ಬಸ್ ನಿಲ್ದಾಣದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಬಂದವರಿಗೆ ಮಾತ್ರ ಬಸ್ ನಿಲ್ದಾಣಕ್ಕೆ ಪ್ರವೇಶ ನೀಡಿರುವುದಕ್ಕೆ ಶ್ಲಾಘನೀಯ ಆದರೂ ಕೆಲವು ಜನ ಮಾಸ್ಕ್ ಧರಿಸದೇ ಬಂದಂಥ ಜನರಿಗೆ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಲಾಯಿತು
ಇದೇ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡರಾದ ಮಧು ಎನ್ ಪೂಜಾರ್, ಸುಚೀಂದ್ರ, ಚಕ್ರಪಾಣಿ ,ಹರೀಶ್ ನಾಯ್ಡು, ಮೋಹನ್, ಯೋಗೀಶ್, ಹಾಗೂ ಇನ್ನಿತರರು ಹಾಜರಿದ್ದರು

Leave a Reply

Your email address will not be published. Required fields are marked *