ಸಸಿ ನೆಟ್ಟು ಸಚ್ಚಿದಾನಂದ ಸ್ವಾಮಿಗಳ ಹುಟ್ಟುಹಬ್ಬದಾಚರಣೆ: heggaddesamachar

ಶ್ರೀ ಶ್ರೀ ಪರಮ ಪೂಜನೀಯ ಗಣಪತಿ ಸಚಿದಾನಂದ ಸ್ವಾಮಿಗಳ 78ನೇ ಹುಟ್ಟು ಹಬ್ಬವನ್ನು, ಜನ ಮನ ವೇದಿಕೆಯಿಂದ ನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ರವರ ನೇತೃತ್ವದಲ್ಲಿ ಬಸವೇಶ್ವರ ರಸ್ತೆಯ ಹತ್ತಿರ ಸಸಿ ನೆಟ್ಟು ಆಚರಿಸಲಾಯಿತು .
ನಂತರ ಮಾತನಾಡಿದ ಮ ವಿ ರಾಮಪ್ರಸಾದ್ ಪೂಜನೀಯ ಗಣಪತಿ ಸಚಿದಾನಂದ ಸ್ವಾಮಿಗಳ ಆರೋಗ್ಯದ ಬಗ್ಗೆ, ಪರಿಸರ, ವೇದ, ಸುಕವನದ ಮೂಕಾಂತರ ಪಕ್ಷಿಗಳ ಸಂರಕ್ಷಣೆ ಸೇರಿದಂತೆ ಎಲೆ ಮರೆ ಕಾಯಿಯಂತೆ ದೇಶದಂತ್ಯಾ ಸಮಾಜ ಮುಖಿ ಕೆಲಸಗಳನ್ನು ಆಶ್ರಮದ ಮುಕಾಂತರ ಮಾಡುತ್ತಿದ್ದಾರೆ.
ಇವರು ನಮ್ಮ ಸಮಾಜಕ್ಕೆ ಒಂದು ಶಕ್ತಿಯಾಗಿದ್ದರೆ. ಇವರ ಹುಟ್ಟು ಹಬ್ಬದ ಪ್ರಯುಕ್ತ 78 ಸಸಿಗಳನ್ನು ನೆಡಲಾಗುತ್ತಿದೆ ಎಂದು ತಿಳಿಸಿದರು. ಅದಲ್ಲದೆ ಕರೋನ ದಿಂದ ಬಳಲುತ್ತಿರುವ ಸಾವಿರಾರು ಕುಟುಂಬ ಗಳಿಗೆ ಆಸರೆಯಾಗಿ ಸ್ವಾಮೀಜಿ ನಿಂತಿದ್ದಾರೆ, ಪ್ರತಿ ವರ್ಷ ಮಹಿಳೆಯರಿಗೆ ಹೋಲಿಗೆ ಯಂತ್ರ, ಅಂಗವಿಕಲರಿಗೆ ವೀಲ್ ಚೇರ್ ಗಳು, ಉಚಿತ ಕಣ್ಣಿನ ತಪಾಸಣೆ ಶಸ್ತ್ರಚಿಕಿತ್ಸೆ ಮಾಡಿ ಕನ್ನಡಕ ಕೊಡುವುದು, ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿರುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮ ದಲ್ಲಿ ಆಶ್ರಮದ ಕಡೆಯಿಂದ ವಿನಯ್ ಬಾಬು, ದೇವ ರಾವ್, ದ್ವಾರಿಕಿ, ಸುರಭಿ ಸ್ಟೀಲ್ ನ ಮಾಲೀಕರಾದ ಸುಬುತ್ ಕುಮಾರ್, ಮುಖಂಡರಾದ ಸಿ ಸಂದೀಪ್, ವಿಕ್ರಂ, ಅಜಯ್ ಶಾಸ್ತ್ರೀ, ಧರ್ಮೇಂದ್ರ, ಪಾಪಣ್ಣ, ಶಿವು ಇದ್ದರು