News (ಸುದ್ದಿ)
ಸಲೋಮಿ ಸೆರಾಮಿಕ್ಸ್ ಫ್ಯಾಕ್ಟರು ಸ್ಫೋಟ: 18 ಭಾರತೀಯರ ಸಾವು-HeggaddeSamachar

ಸೂಡಾನ್: ಖಾರ್ಟೌನ್ ನಲ್ಲಿ ಸಲೋಮಿ ಸೆರಾಮಿಕ್ಸ್ ಫ್ಯಾಕ್ಟರಿ ಸ್ಫೋಟಗೊಂಡ ಪರಿಣಾಮ ೧೮ ಭಾರತೀಯರು ಸೇರಿ ೨೩ ಮಂದಿ ಸಾವನ್ನಪ್ಪಿದ್ದಾರೆ.
ಫ್ಯಾಕ್ಟರಿಯ ಬಳಿ ಎಲ್ಪಿಜಿ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಘಟನೆಯಲ್ಲಿ ೧೩೦ ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಇವರಲ್ಲಿ ಆರೇಳು ಮಂದಿ ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ ಎಂದು ಸ್ಥಳಿಯ ಮೂಲಗಳು ತಿಳಿಸಿವೆ.
ದುರಂತ ನಡೆದ ಸ್ಥಳದಲ್ಲಿ ಅಗ್ನಿ ಸುರಕ್ಷತಾ ಕ್ರಮ ಇರದಿದ್ದ ಕಾರಣ ಮತ್ತು ಬೆಂಕಿ ಹತ್ತಿಕೊಳ್ಳುವ ವಸ್ತುಗಳನ್ನು ಸುರಕ್ಷತೆ ಇಲ್ಲದೆ ಸಂಗ್ರಹಿಸಿಟ್ಟ ಕಾರಣ ಈ ದುರಂತ ಇಷ್ಟು ದೊಡ್ಡ ಮಟ್ಟದಲ್ಲಿ ಸಂಭವಿಸಿದೆ ಎನ್ನಲಾಗಿದೆ.