ಸರ್ವಾಧಿಕಾರಿ ಧೋರಣೆ-ಸೆಂಟ್ ನೋಬಾರ್ಟ್ ಶಾಲೆ ವಿರುದ್ದ ದೂರು: heggaddesamachar

ತಿ.ನರಸೀಪುರ. ಜೂ.27:- ಸರ್ಕಾರದ ಆದೇಶವನ್ನು ದಿಕ್ಕರಿಸಿ, ಸರ್ವಾಧಿಕಾರಿ ಧೋರಣೆಯನ್ನು ಮೇರೆಯುವ ಮೂಲಕ ಶಾಲಾ ಶುಲ್ಕ ವಸುಲಾತಿಗೆ ನಿಂತಿರುವ ಸೆಂಟ್ ನೋಬಾರ್ಟ್ ಶಾಲೆ ಮುಖ್ಯಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವಂತ್ತೆ ಮಾಜಿ ಮೃಗಾಲಯ ನಿರ್ದೇಶಕ ಅಮ್ಮಜಾದ್ ಖಾನ್ ಗಂಭೀರ ಆರೋಪ ಮಾಡಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೆಂಟ್ ನೋಬಾರ್ಟ್ ಶಾಲೆ ವಿರುದ್ದು ದೂರು ನೀಡದ ನಂತರ ದೂರಿನ ಪ್ರತಿಯೊಂದಿಗೆ ಶಿಕ್ಷಣಾಧಿಕಾರಿಗಳ ಕಛೇರಿ ಬಳಿಯಲ್ಲಿ ಪತ್ರಿಕಾ ಹೇಳಿಕೆ ನೀಡಿ ಮತನಾಡಿದರು. ಕೋವಿಡ್ 19 ಹೆಮ್ಮಾರಿ ನಮ್ಮ ರಾಜ್ಯದಲ್ಲೂ ವ್ಯಾಪಿಸಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಇರುವ ಎಲ್ಲಾ ಖಾಸಗಿ ಶಾಲೆಗಳು ಪೋಷಕರಿಗೆ ತಮ್ಮ ಮಕ್ಕಳ ಬಾಕಿ ಇರುವ ಶಾಲಾ ಶುಲ್ಕವನ್ನು ಕಟ್ಟುವಂತ್ತೆ ಒತ್ತಡ ಹಾಕುವಂತ್ತಿಲ್ಲ ಹಾಗೂ ಸರ್ಕಾರ ಆದೇಶ ನೀಡುವವರೆಗೂ ಆನ್ ಲೈನ್ ಕ್ಲಾಸ್ ನೆಡೆಸುವಂತ್ತಿಲ್ಲ ಎಂಬ ಆದೇಶ ನೀಡಿದ್ದರು ಸರ್ಕಾರದ ಆದೇಶಕ್ಕೆ ಗೌವರ ಕೂಡದೆ ಸರ್ಕಾರಕ್ಕೆ ಸೆಡ್ಡು ಹೊಡೆದು ಸರ್ಕಾರದ ಆದೇಶವನ್ನು ದಿಕ್ಕರಿಸಿ ಶಾಲಾ ಶುಲ್ಕ ವಸುಲಿ ಮಾಡುವ ಮೂಲಕ ಸಂಸ್ಥೆಯ ಮುಖ್ಯಸ್ಥರು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಆನ್ ಲೈನ್ ಕ್ಲಾಸ್ ಮಾಡುವಂತ್ತೆ ನಿರ್ದೇಶನ ನೀಡದಿದ್ಮತುಗಳನ್ನಾಡುತ್ತಿದ್ದಾರೆ ನ್ ಲೈನ್ ಕ್ಲಾಸ್ ಪ್ರಾರಂಭಿಸಿ ಪೋಷಕರು ಬಾಕಿ ಉಳಿಸಿಕೊಂಡಿರುವ ಶುಲ್ಕಹಾಗೂ ಈ ವರ್ಷದ ಶಾಲಾ ಶುಲ್ಕ ಪಾವತಿಸಿ ಬೇಕು ಇಲ್ಲದಿದ್ದರೆ ನಿಮ್ಮ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ನೀಡುವುದಿಲ್ಲ ಎಂದು ಶಾಲಾ ಮುಖ್ಯಸ್ಥರು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಇದರ ಬಗ್ಗೆ ಪ್ರಶ್ನೆ ಮಾಡಿದರೆ ನಾವು ನಿಗದಿ ಪಡಿಸಿದ್ದ ವೇಳೆಗೆ ಶುಲ್ಕ ಪಾವತಿಸಲೇ ಬೇಕು ಇದರಲ್ಲಿ ಯಾವುದೇ ರಾಜಿ ಇಲ್ಲಾ ನೀವು ಯಾರಿಗಾದರೂ ದೂರು ನೀಡಿ ನಮಗೇನು ಭಯವಿಲ್ಲ ಎಂದು ಬೆದರಿಕೆಯ ಮತುಗಳನ್ನಾಡುತ್ತಿದ್ದಾರೆ ಎಂದರು.

ಮುಂದುವರೆದು ಮತನಾಡಿದ ಅವರು ಶಾಲಾ ಮುಖ್ಯಸ್ಥರಿಗಿಂತ್ತ ನಾವೇನು ಕಮ್ಮಿ ಇಲ್ಲ ಎಂಬಂತ್ತೆ ಶಿಕ್ಷಕರು ಕೂಡ ವರ್ತಿಸುತ್ತಾರೆ ಆನ್ ಲೈನ್ ಕ್ಲಾಸ್ ಮುಖಾಂತರ ಬೋಧನೆ ಮಾಡಿರುವ ಪಠ್ಯವನ್ನು ಮತ್ತೊಮ್ಮೆ ಬೋಧಿಸುವುದಿಲ್ಲ ಆದರಿಂದ ಪೋಷಕರು ತಮ್ಮ ಮಕ್ಕಳ ಶುಲ್ಕ ಕಟ್ಟಿ ಇಲ್ಲದಿದ್ದರೆ ನಿಮ್ಮ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ಬೋಧನೆ ನಿಲ್ಲಿಸುತ್ತೇವೆ ಹಾಗೂ ಶಾಲೆ ಪ್ರಾರಂಭವಾದಗಲು ಸಹ ಈಗ ಮಾಡಿರುವ ಪಠ್ಯವನ್ನು ಮತ್ತೊಮ್ಮೆ ಮಾಡುವುದಿಲ್ಲ ಎಂದು ಬೆದರಿಸುತ್ತಿದ್ದರೆ ಅಲ್ಲದೆ ಶುಲ್ಕ ಪಾವತಿಸದ ಮಕ್ಕಳಿಗೆ ಆನ್ ಲೈನ್ ಬೋದನೆಯನ್ನು ನಿಲ್ಲಿಸಿದ್ದಾರೆ ಶಾಲೆಯವರ ಈ ಕ್ರಮದಿಂದ ಪೋಷಕರು ಕಂಗಾಲದರೆ ಮಕ್ಕಳು ಮಾನಸಿಕವಾಗಿ ಕುಗ್ಗುವಂತ್ತೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಸೆಂಟ್ ನೋಬಾರ್ಟ್ ಶಾಲೆಯವರ ಹಠಮಾರಿ ದೋರಣೆ ಬಗ್ಗೆ ಶಿಕ್ಷಣಾಧಿಕಾರಿ ಸ್ವಾಮಿ ರವರಿಗೆ ದೂರು ನೀಡಿದ್ದೇನೆ ಆದರೆ ಶಿಕ್ಷಣಾಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದರಲ್ಲದೆ ಶಿಕ್ಷಣಾಧಿಕಾರಿಗಳ ಮೃದು ದೋರಣೆಯೇ ಖಾಸಗಿ ಶಾಲೆಗಳು ಪೋಷಕರ ಮೇಲೆ ದಬ್ಬಾಳಿಕೆಗೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು ಹಾಗೂ ಕೂಡಲೇ ಶಿಕ್ಷಣಾಧಿಕಾರಿಗಳು ನನ್ನ ದೂರಿಗೆ ನ್ಯಾಯ ಕೂಡಿಸದಿದ್ದರೆ ಶಿಕ್ಷಣ ಕಛೇರಿ ಮುಂದೆ ಪ್ರತಿಭಟನೆ ನೆಡಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಂಗಸ್ವಾಮಿ ಹಾಜರಿದ್ದರು .