ಸಚಿವ ರಮೇಶ್ ಜಾರಕಿಹೋಳಿ ಎಡವಟ್ಟು – ಕಬಿನಿ ಜಲಾಶಯಕ್ಕೆ ಭೇಟಿ, ಹೋಳಿಗೆಗಾಗಿ ಮುಗಿಬಿದ್ದ ಜನ: heggaddesamachar

ಕಬಿನಿ ಜಲಾಶಯಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಜಲ ಸಂಪನ್ಮೂಲ ಸಚಿವ. ಕಬಿನಿ ಅಣೆಕಟ್ಟಿನ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳ ಜತೆ ಸಮಾಲೋಚನೆ.
ಸುಭಾಷ್ ಪವರ್ ನಿಂದ ನೀರಿನ ದುರ್ಬಳಕೆ ಸಂಬಂಧ ಚರ್ಚೆ. ಅಧಿಕಾರಿಗಳೊಂದಿಗೆ ಶಾಮಿಲಾಗಿ ನೀರಿನ ದುರ್ಬಳಕೆ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಬೆಲ್ ಮೋತ್ ರಿಪೇರಿ ವಿಚಾರದಲ್ಲೂ ನಿಯಮ ಉಲ್ಲಂಘನೆ ಆಗಿದೆ ಎಂಬ ಆರೋಪ ಇದೆ. ನಾನು ಇದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಇದೇ ವಿಚಾರವಾಗಿ ಅಣೆಕಟ್ಟೆ ಅಧಿಕಾರಿಗಳು ಹಾಗೂ ಪವರ್ ಕಾರ್ಪೊರೇಷನ್ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುತ್ತೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು.
ಕಬಿನಿ ಅಣೆಕಟ್ಟೆಯಲ್ಲಿ ಸಚಿವ ರಮೇಶ್ ಜಾರಕಿಹೋಳಿ ಹೇಳಿಕೆ. ಸಚಿವ ರಮೇಶ್ ಜಾರಕಿಹೋಳಿ ಕಬಿನಿ ಪ್ರವಾಸದ ವೇಳೆ ಅದ್ವಾನ. ಜಲ ಸಂಪನ್ಮೂಲ ಸಚಿವರಿಗೆ ಕೊರೊನಾ ಬರೋದಿಲ್ವಾ. ಕರೆದಿದ್ದು ಅಧಿಕಾರಿಗಳ ಸಭೆ, ತುಂಬಿ ತುಳುಕಿದ್ದು ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು. ಕರೊನಾ ಆತಂಕದ ನಡುವೆಯೂ ಜನರ ಅಸಡ್ಡೆ. ಊಟಕ್ಕೆ ಮುಗಿಬಿದ್ದರು, ಹೋಳಿಗೆಗೆ ಕಿತ್ತಾಡಿದರು. ಒಬ್ಬರ ಮೇಲೆ ಒಬ್ಬರು ಬಿದ್ದು ಊಟಕ್ಕೆ ಕಿತ್ತಾಟ. ಒಬ್ಬೊಬ್ಬರ ತಟ್ಟೆಯಲ್ಲಿ ರಾಶಿ ರಾಶಿ ಹೋಳಿಗೆ. ಕರೊನಾ ಬಿಟ್ಟು ಊಟಕ್ಕೆ ಯುದ್ದ ಮಾಡಿದ ಜನ. ಜನರ ನಡವಳಿಕೆ ಕಂಡು ಕಂಗಾಲಾದ ಕರೊನಾ ವಾರಿಯರ್ಸ್.