Literature (ಸಾಹಿತ್ಯ)

ಸಂಸ್ಕಾರಗಳ ಕೊಲೆ : heggaddesamachar

Spread the love

ಜಗ್ಗು ದೇವಾಡಿಗ, ಮೇಲ್ಮನೆ ಉಪ್ಪುಂದ
jaggudj73@gmail.com

ಜಗದೆಲ್ಲೆಡೆ ಆವರಿಸಿದೆ ಮೊಬೈಲ್ ಎನ್ನುವ ಮಾಯೆ. ತಂದೆ, ತಾಯಿ ಮತ್ತು ಮಕ್ಕಳ ನಡುವಿನ ಅವಿನಾಭಾವ ಸಂಬಂಧದ ಕೊಂಡಿಯನ್ನು ಕಳಚಿದೆ. ತಂದೆಯಾದವನು ದಿನವಿಡೀ ವೃತ್ತಿಯಲ್ಲಿ ನಿರತರಾಗಿ ಸಂಜೆಯಾದರೆ ಮನೆಯ ಕಡೆಗೆ ಪ್ರಯಾಣ ಬೆಳೆಸಿ ಮೊಬೈಲ್ ಎನ್ನುವ ಜಾಲದೊಳಗೆ ಮುಳುಗಿ ರಾತ್ರಿ ಹನ್ನೊಂದು ಗಂಟೆಗಳ ತನಕ ತಲ್ಲೀನರಾಗಿರುತ್ತಾನೆ.

ಹೀಗಿರುವಾಗ ಎಲ್ಲಿದೆ ಮಕ್ಕಳ ವಿಚಾರಣೆ…?
ಮಡದಿಯ ಪ್ರೀತಿಯ ಮಮಕಾರದ ಭಾವನೆಯ ಬೆಲೆ ಸದ್ದಿಲ್ಲದೆ ಸಮಯವನ್ನೆಲ್ಲಾ ಕಸಿದುಕೊಂಡಿದೆ ಹಾಳು ಮೊಬೈಲ್ ನ ಗೀಳು.
ತಾಯಿಯಾದವಳು ತನ್ನ ದಿನನಿತ್ಯದ ಕೆಲಸವನ್ನು ಬಲು ಬೇಗನೆ ಮುಗಿಸಿ ಒಂದಿಷ್ಟು ಹೊತ್ತು ಮೊಬೈಲ್ ಮುತ್ತೊಂದಿಷ್ಟು ಬಿಡುವಿನ ವೇಳೆಯಲ್ಲಿ ಧಾರವಾಹಿಯ ವೀಕ್ಷಣೆಯಲ್ಲಿ ಮಗ್ನಳಾಗಿ ಹೇಗೋ ರಾತ್ರಿ ಗಂಟೆ ಹತ್ತರ ಹೊತ್ತಿಗೆ ಊಟದ ಸಮಯವನ್ನು ಕಾದು, ಊಟ ಮುಗಿಸಿ ಘೋರ ನಿದ್ರೆಗೆ ಜಾರುತ್ತಾಳೆ.

ನಿಜವಾಗಿಯೂ ಪರಿಣಾಮ ಬೀರುವುದು ಮನೆಯಲ್ಲಿನ ಚಿಕ್ಕ ಪುಟ್ಟ ಮಕ್ಕಳ ಮೇಲೆ. ಆ ಮಗು ಶಾಲೆಯಲ್ಲಿ ಕೂರುತ್ತಾ ಕುಳಿತು ಕಷ್ಟಪಟ್ಟು ಕಲಿತ ಒಂದಿಷ್ಟು ಅಕ್ಷರದ ಜ್ಞಾನ ಮತ್ತು ಪಾಠಗಳನ್ನು ಮನೆಗೆ ಬರುವುದರಲ್ಲಿ ಅರ್ಧದಷ್ಟು ಮರೆತಿರುತ್ತದೆ. ಸರಿಯಾಗಿ ಸ್ವಲ್ಪವಾದರೂ ಅಕ್ಷರ ಜ್ಞಾನದ ಅಥವಾ ಪಾಠದ ಬಗ್ಗೆ ಮಾಹಿತಿಗಳನ್ನು ಮಕ್ಕಳಿಗೆ ಕಲಿಸಲು ಪೋಷಕ ವರ್ಗದವರಿಬ್ಬರಿಗೂ ಸಮಯದ ಜೊತೆಗೆ ಪರಿಜ್ಞಾನವು ಇಲ್ಲ. ಕಲಿತು ಬೆಳೆಯುವ ಮಗುವಿನ ಪರಿಪಾಲನೆ ಪೋಷಕರ ಜವಾಬ್ದಾರಿ, ಆದರೆ ವಾಸ್ತವವಾಗಿ ಊಟೋಪಚಾರ ಮತ್ತು ಮಲಗಲು ಮಾತ್ರ ಇಂದಿನ ಮಕ್ಕಳಿಗೆ ಕೆಲವೊಂದು ಮನೆ ಸೀಮಿತ. ಕೆಲವೊಮ್ಮೆ ಮಕ್ಕಳಿಗೆ ಸಮಯ ಕಳೆಯಲು ಮೊಬೈಲ್ ಉಪಯೋಗಿಸುವ ಕೊಟ್ಟು ತಂದೆ ತಾಯಿಗಳು ತಮ್ಮ ಕೆಲಸದಲ್ಲಿ ತೊಡಗಿ ಮಕ್ಕಳ ಬಗ್ಗೆ ಅರಿವು ಕೂಡಾ ಇರುವುದಿಲ್ಲ.

ಆದರೆ ಆ ಮಗು ಸ್ಮಾರ್ಟ್ ಫೋನ್ ಪರಿಣಾಮದಿಂದ ತಂದೆ ತಾಯಿಯ ಮೇಲಿರುವ ಪ್ರೀತಿಯನ್ನು ಸಂಪೂರ್ಣವಾಗಿ ಮರೆಯುತ್ತಾ ಬಂದು, ಕಾಲಕ್ರಮೇಣವಾಗಿ ಶಾಲೆಗೆ ಹೋಗಿ ಬಂದ ತಕ್ಷಣವೇ ಆ ಮಗು ತನ್ನ ತಂದೆ ಅಥವಾ ತಾಯಿಯ ಮೊಬೈಲ್ ಹುಡುಕಲು ಆರಂಭಿಸಿ ಕಲಿಕೆಯಲ್ಲಿ ಹಿಂದೇಟು ಹಾಕಿ, ಮೊಬೈಲ್ ನಲ್ಲಿ ಕ್ಯಾಂಡಿಕ್ರಷ್, ಪಬ್ಜಿಯಂತಹ ಗೇಮ್ ಗಳನ್ನು ಆಡುವ ಮೂಲಕ ಸಮಯ ವ್ಯರ್ಥ ಮಾಡುತ್ತದೆ. ದಿನಾಲು ಶಾಲೆಯಿಂದ ಮನೆಗೆ ಬರುವಾಗ ಆ ಮಗುವಿನ ಆಲೋಚನೆ ಒಂದೇ ಮನೆಗೆ ಹೋಗಿ ನಾನು ಯಾವ ಗೇಮ್ ಆಡೋದು ಎನ್ನುವುದರ ಕುರಿತು ಚಿಂತಿಸುವಲ್ಲಿ ತೊಡಗುತ್ತವೆ.

ಮುಗ್ಧ ಮಕ್ಕಳ ಮನಸ್ಸನ್ನು ಹಾಳು ಮಾಡಲು ಪೋಷಕರಾದ ನೀವೆ ಕಾರಣೀಕರ್ತರು. ಕಷ್ಟ ಪಟ್ಟು ಕಲಿತ ನಾಲ್ಕು ಅಕ್ಷರವು ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಆ ಕಾರಣದಿಂದ ದಯವಿಟ್ಟು ತಂದೆ ತಾಯಿಯರಲ್ಲಿ ವಿನಂತಿ ಆದಷ್ಟೂ ನಿಮ್ಮ ಮಕ್ಕಳನ್ನು ಮೊಬೈಲ್ ನಿಂದ ದೂರವಿಟ್ಟು ಒಳ್ಳೆಯ ಸಂಸ್ಕಾರಗಳನ್ನು ಕಲಿಸಿದರೆ ಮುಂದೊಂದು ದಿನ ಆ ಮಕ್ಕಳು ಕಲಿತು ಉತ್ತಮ ವ್ಯಕ್ತಿಯಾಗಿ ನಿಮ್ಮ ವೃದ್ಧಾಪ್ಯದ ಕಾಲದಲ್ಲಿ ಒಂದು ತುತ್ತು ಅನ್ನವನ್ನು ನಿಮ್ಮ ಸ್ವಂತ ಮನೆಯಲ್ಲಿಯೇ ಹಾಕುತ್ತಾರೆ, ಇಲ್ಲವಾದರೆ ಮಕ್ಕಳ ಮೇಲೆ ಪರಿಣಾಮ ಬೀರಿ ನೀವು ವೃದ್ಧಾಪ್ಯದ ಸಮಯದಲ್ಲಿ ವೃದ್ಧಾಶ್ರಮದ ಅತಿಥಿಯಾಗಿ ಬಂಧನಕ್ಕೆ ಒಳಗಾಗುತ್ತಿರಿ. ಯಾವುದು ಬೇಕು ನೀವೆ ಆಲೋಚಿಸಿ..!!!!

Leave a Reply

Your email address will not be published. Required fields are marked *