News (ಸುದ್ದಿ)

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೆಕ್ಕೆ ಒಕ್ಕೂಟದ 15ನೇ ವರ್ಷದ ವಾರ್ಷಿಕ ಸಮಾರಂಭ : heggaddesamachar.com

Spread the love

ಕುಂದಾಪುರ: ದಿನಾಂಕ 08/12/2019 ಆದಿತ್ಯವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೆಕ್ಕೆ ಒಕ್ಕೂಟದ 15 ನೇ ವರ್ಷದ ವಾರ್ಷಿಕ ಸಮಾರಂಭ ಸ.ಕಿ‌.ಪ್ರಾ.ಶಾಲೆ ಮೆಕ್ಕೆ ಶಾಲೆಯಲ್ಲಿ ಜರುಗಿತು.

ಇದರ ಅಧ್ಯಕ್ಷತೆಯನ್ನು ಮೆಕ್ಕೆ ಒಕ್ಕೂಟದ ಅದ್ಯಕ್ಷರಾದ ಎಮ್.ಜೆ. ಬೇಬಿಯವರು ವಹಿಸಿದ್ದರು. ಬೈಂದೂರು ತಾಲ್ಲೂಕಿನ ಯೋಜನಾಧಿಕಾರಿಗಳು ಕಾರ್ಯಕ್ರಮ ಉದ್ಘಾಟಿಸಿದರು.

ಕೊಲ್ಲೂರು ವಲಯಾದ್ಯಕ್ಷರು ಮಂಜುನಾಥ ಪೂಜಾರಿ, ಜನಜಾಗ್ರತಿ ವೇದಿಕೆಯ ಸದಸ್ಯರಾದ ಮಹಾಬಲ ಪೂಜಾರಿಯವರು, ಶಾಲಾ ಮೂಖ್ಯಶಿಕ್ಷಕಿ ಶ್ರೀಮತಿ ನೇತ್ರಾ, ನಾರಾಯಣ ಪೂಜಾರಿ, ದುಡ್ಡಿನಗುಳಿ ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಸವಿತಾ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿ ಕಾರ್ಯಕ್ರಮಗಳು ಒಂದು ಬಗೆಯಲ್ಲಿ ವಿಶೇಷ ಮತ್ತು ವಿಭಿನ್ನವಾಗಿರುತ್ತವೆ. ಅದರಂತೆ ಈ ಕಾರ್ಯಕ್ರಮವೂ ಕೂಡ ಭಿನ್ನತೆಯಲ್ಲಿ ಎದ್ದುಕಂಡಿದ್ದು, ಕಾರ್ಯಕ್ರಮದ ವೇದಿಕೆ ಎಲ್ಲರ ಗಮನ ಸೆಳೆಯಿತು. ತೆಂಗಿನ ಗರಿಗಳ ನೇಯ್ಗೆಯಲ್ಲಿ ಇಡೀ ವೇದಿಕೆ ಸಿದ್ಧವಾಗಿದ್ದು ಊರ ಜನರು, ಸಂಘದ ಸದಸ್ಯರೇ ಸ್ವತಃ ಕೈಯಿಂದ ಮಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿದ ಸ್ಥಳೀಯ ಒಕ್ಕೂಟದ ಸೇವ ಪ್ರತಿನಿಧಿಯಾಗಿರುವ ರಾಮ್ ಶೆಟ್ಟಿ ಅತ್ತಿಕಾರ್, ಊರ ಜನರ ಇಂತಹ ಕೆಲಸಗಳು, ಕರಕುಶಲತೆಯ ನೇಯ್ಗೆಗಳು ಇಂದಿಗೂ ಮುಂದುವರಿಯುತ್ತಿರುವುದು ಧರ್ಮಸ್ಥಳ ಸಂಘದಿಂದ ಹೊರತು ಬೇರ್ಯಾವುದರಿಂದಲೂ ಅಲ್ಲ ಎಂದು ಹೇಳುತ್ತಾರೆ.

ಇನ್ನೂ ಕಾರ್ಯಕ್ರಮದ ಸ್ವಾಗತ ವಿದ್ಯಾವತಿ ಕೃಷ್ಣ ಕನ್ನಂತ ಮಾಡಿ ವಿದ್ಯಾ ದಿನೇಶ್ ಬಹುಮಾನ ಪಟ್ಟಿ ಓದಿ, ವಲಯ ಮೇಲ್ವಿಚಾರಕರಾದ ರವಿಶಂಕರ್ ವಂದಿಸಿದರು. ಒಕ್ಕೂಟದ ಸೇವಾಪ್ರತಿನಿಧಿ ರಾಮ ಶೆಟ್ಟಿ ಅತ್ತಿಕಾರ್ ಕಾರ್ಯಕ್ರಮ ನಿರೂಪಿಸಿದರು…

ರೀ. ಹೆಗ್ಗದ್ದೆ ಸಮಾಚಾರ್ ಬೆಂಗಳೂರು

Leave a Reply

Your email address will not be published. Required fields are marked *