ಶ್ರಿಕೃಷ್ಣನಗರಿ ಉಡುಪಿಯಲ್ಲಿ ಗಮನ ಸೆಳೆದ ಕರಕುಶಲ ವಸ್ತುಗಳ ಮೇಳ : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ 

      ಉಡುಪಿ ‌ಶ್ರಿಕೃಷ್ಣ ಮಠದ ದೈವಾರ್ಷಿಕ ಪರ್ಯಾಯ ಪೂಜಾ ಪದ್ಧತಿ  500 ನೇ ವರ್ಷಕ್ಕೆ ಕಾಲಿಡುವ ಸಂದರ್ಭ ಪಂಚ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾದ ಗ್ರಾಮಿಣ ಉತ್ಪನ್ನ ಹಾಗೂ ಕರಕುಶಲ ವಸ್ತುಗಳ ಮೇಳ ಜನವರಿ 16 ರಿಂದ 23 ರ ವರಗೆ ರಾಜಾಂಗಣದಲ್ಲಿ ನಡೆದಿದೆ. ಕಳೆದ ಹಲವು ದಿನಗಳಿಂದ ನಾನು ಉಡುಪಿಯಲ್ಲಿ ಇದ್ದಕಾರಣ  ರಾಜಾಂಗಣದಲ್ಲಿ ನಡೆಯುತ್ತಿರುವ ಕರಕುಶಲ ವಸ್ತುಗಳ ಮೇಳದೊಳಗೊಮ್ಮೆ‌ಹೊಕ್ಕು ಬರೋಣವೆಂದು ಹೊರಟೆ.ಹಿರಿಯ ಕಿರಿಯರ ದಂಡೆ ರಾಜಾಂಗಣದೊಳಗೆ ತುಂಬಿಕೊಂಡಿತ್ತು.ಕರಕುಶಲ ವಸ್ತುಗಳು ಯಾರಿಗೆ ಪ್ರೀತಿಯವಿಲ್ಲ ಹೇಳಿ ಖರೀದಿಸಲು ಆಗದಿದ್ದರು ಒಮ್ಮೆ ಕಣ್ಣ್ ತುಂಬಿ ಕೊಳ್ಳುವಾಸೆ ಇದ್ದೆ ಇರುತ್ತದೆ. ಪ್ರಾಮಾಣಿಕ ವಾಗಿ  ಹೇಳುವುದಾದರೆ ವಸ್ತು ಕೊಳ್ಳುವವರಿಗಿಂತ ನೋಡಲು ಬಂದವರೆ ಹೆಚ್ಚು.ನೋಡಿ ಸಂತಸಗೊಂಡ ವರೆಲ್ಲ ಮೆಚ್ಚುಗೆ ಸುಸುತ್ತಿದ್ದರು. ಮೆಚ್ಚುಗೆಯ ಎರಡು ಮಾತಿಗೆ ಅಲ್ಲಿಗೆ ಬಂದ ಕಲಾಕಾರರು ಪುಳಕಗೊಳ್ಳುತ್ತಿದ್ದು ಇನ್ನೂ ಚನ್ನಾಗಿ ಹೊಸ ಉಲ್ಲಾಸದೊಂದಿಗೆ ವಿವರಿಸುತ್ತಿ ದ್ದರು. ಪ್ರೋತ್ಸಾಹದ ನುಡಿಗಳು  ಅವರ ಮನ ತಣಿಸುತ್ತಿ ತ್ತು. ನಾ ಕಂಡಂತೆ ಕಲಾ ಪ್ರಾತ್ರ್ಯಕ್ಷಿಕೆ ನಡೆಸಲು ಬಂದ ಸಮೂಹದವರ ಮುಖ್ಯ ಉದ್ದೇಶ ಹಾಗೂ ಗುರಿ ನಾಡಿನ ಜನತೆಗೆ ಗ್ರಾಮೀಣ ಕರಕುಶಲ ವಸ್ತುಗಳ ಅರಿವನ್ನು ಮೂಡಿಸುವುದೇ ಆಗಿತ್ತು ಹೊರತು ಇಲ್ಲಿ ವ್ಯಾಪಾರ ಮನೊಭಾವ ಅವರಲ್ಲಿ ಇರಲ್ಲಿಲ್ಲ. ಕಲೆಯ ಬಗ್ಗೆ ಪ್ರೀತಿ, ಗೌರವ ವಿತ್ತೆ ಹೊರತು ಕಲಾಕುಸುರಿಗಳ ಮಾರಾಟದ ಗುರಿ ಒಂದನ್ನೆ ಹೊಂದಿಲ್ಲ. ಆದರೆ ಜೀವನೋಪಾಯಕ್ಕಾ ಗಿ ಪ್ರದರ್ಶನದೊಂದಿಗೆ ಕರಕುಶಲವಸ್ತುಗಳ ಮಾರಾ ಟವು ಬರದಿಂದ ಸಾಗುವುದ ಕಂಡೆ. ಈ ಗ್ರಾಮಿಣ ಹಾಗೂ ಕರಕುಶಲ ಮತ್ತು ಕೈಮಗ್ಗದ ಮಳಿಗೆಯನ್ನು ಬಿ.ಎಸ್ ಯಡಿಯುರಪ್ಪ ಅವರು ಉದ್ಘಾಟಿಸಿ ಪೋತ್ಸಾಹದ ನುಡಿಗಳನಾಡಿದ್ದು ಸರಕಾರ ಸದಾ ಬೆಂಬಲಿಸುವ ಭರವಸೆ ಇತ್ತಿರುವುದು ಅಲ್ಲಿನ ಶ್ರಮಜೀವಿ ಕುಶಲ ಕರ್ಮಿಗಳ ಮೊಗದಲ್ಲಿ ಸಂತಸ ಮೂಡಿದೆ.

      ರಾಜಾಂಗಣ ಸಭಾಭವನದಲ್ಲಿ ಕಾಲಿರಿಸುತ್ತಲೇ  ನಮ್ಮ ಗಮನ ಸೆಳೆವ ವಿವಿಧ ಕಲಾ ಪ್ರಕಾರಗಳು ಅದರಲ್ಲೂ ಮುಖ್ಯವಾಗಿ  ಪ್ರಕೃತಿ ಜನ್ಯ ಮೂಲಗಳಿಂದ ಸಿದ್ದಗೊಳಿಸಿದ ಪಶ್ಚಿಮ ಬಂಗಾಲ, ಒಡಿಶಾ, ತೆಲಂಗಾಣ, ಛತ್ತಿಸ್ ಗಡ್, ಆಂದ್ರಪ್ರದೇಶ, ಮಹಾರಾಷ್ಟ್ರ  ಮಧ್ಯಪ್ರದೇಶ, ಬಿಹಾರದ ವಿವಿಧ ಕಲಾಪ್ರಕಾರಗಳನ್ನು ಆಕರ್ಷಕವಾಗಿ ಸಾಲು ಸಾಲಾಗಿರಿಸಲಾಗಿದೆ. ಗುಡಿಕೈಗಾ ರಿಕೆಯನ್ನು ಬೆಳೆಸಲು ಉತ್ಪನ್ನಗಳಿಗೆ ಸಂಬಂಧಿಸಿದ ಪ್ರಾತ್ಯಕ್ಷಿಕೆಯನ್ನು ತೋರಿಸಲಾಗಿದೆ. ಜಾಗತೀಕರಣದ ಪ್ರಬಲ ಪೈಪೋಟಿಯ ನಡುವೆಯು ಕರಕುಶಲ ವಸ್ತುಗಳು ತನ್ನ ತನ ಉಳಿಸಿಕೊಂಡಿದೆ ಎನ್ನುವ ವಿಚಾರ ಸಮಾಧಾನ ಕರವಾದರು ಸಂಪ್ರದಾಯ ಕಲೆಗಳ ಉತ್ತೇಜಿಸುವ ಅವಶ್ಯಕತೆ ಇದೆ.


          ಜನಸಾಮಾನ್ಯರಿಂದ ಶ್ರೀ ಮಂತರವರೆಗೆ ಎಲ್ಲರ ಮನಗೆದ್ದ ಈ ಪ್ರದರ್ಶನದಲ್ಲಿ ಮಧುಬನಿ,ಮಿಥಿಲಾ ಚಿತ್ರ, ಮಂಜೂಷಾ ಚಿತ್ರ, ಗೋದ್ನಚಿತ್ರ,ಕಾಲಿಘಟ್ ಪೈಂಟಿಂಗ್, ಪಟಚಿತ್ರ, ವಿಶೇಷ ಶೈಲಿಯಲ್ಲಿ ಲೋಹ ಶಿಲ್ಪ, ಗೊಂಕುಕ ಲಾಕೃತಿ. ವಿವಿಧ ಕಲಾಪ್ರಕಾರದ  ಗುಡಿ ಕೈಗಾರಿಕೆಯ ಮಣ್ಣಿನ ಕಲಾಕೃತಿಗಳ ರಚನೆಯು ನೋಡಸಿಕ್ಕಿತು. ಸ್ಥಳೀಯವಾಗಿ ಉತ್ಪಾದನೆಯಾಗುವ ವಸ್ತುಗಳಿಗೆ ಹೆಚ್ಚಿನ ಒತ್ತು ನೀಡುವ ಕಾರ್ಯವಿದು ಸ್ವಾವಲಂಬನೆ ಬದುಕು ನಡೆಸುತ್ತಿರುವ ಕರಕುಶಲ ಕರ್ಮಿಗಳು ಉತ್ಪಾದಿಸುವ ವಸ್ತುಗಳನ್ನು ಖರೀದಿಸುವ ಮೂಲಕ ಬೆಂಬಲ ನೀಡಲೊ ಸುಗ ಕುಂದಾಪುರದ ಆಲೂರಿನ ರಘುರಾಮ ಕುಲಾರರ ಮಣ್ಣಿನ ಸಾಮಗ್ರಿಗಳಲ್ಲಿ , ದೊಸೆ ಓಡು (ತವಾ), ಚಾಕುಡಿಯುವ ಕಪ್ಪು, ಅಳಗೆ ಹಾಗೂ ಬಗೆ ಬಗೆಯ ಪಾತ್ರೆಗಳಿರುವ ಸ್ಥಳದಲ್ಲಿ ಮಹಿಳಾ ಮಣಿಗಳೆ ತುಂಬಿದ್ದು ಇಲ್ಲಿ ಪ್ಯಾಪಾರ ಬರದಲ್ಲಿ ನಡೆಯುತ್ತಿತ್ತು ಇತ್ತೀಚೆಗೆ ಜನರು ಆರೋಗ್ಯದ ಬಗ್ಗೆ ಗಮನ ಹರಿಸುತ್ತಾ ತಾವು ಅಡಿಗೆ ತಯಾರಿಸುವ ಪಾತ್ರೆ ಪಗಡಿಗಳಿಗೆ ಮಹತ್ವ ನೀಡಿ ಮಣ್ಣಿನ ಪಾತ್ರೆಯ ಒಳಿತಿನ ಅರಿವಾಗಿದೆ.  ಪಾರಂಪರಿಕ  ಶೈಲಿಯ ಮಣ್ಣಿನ ಪಾತ್ರೆಗಳು ಆಧುನಿಕತೆಯ ಹೊಡೆತಕ್ಕೆ ಸಿಕ್ಕು ಮರೆಯಾಗದೆ ರಾಜಾಂಗಣದಲ್ಲಿ ಮೆರೆಯುತ್ತಿರುವುದು ಶ್ಲಾಘನೀಯ. ಭತ್ತದ ಕಾಳು, ಒಣಹುಲ್ಲುಗಳಿಂದ ಸುಂದರ ಕಲಾಕೃತಿಗಳನ್ನಾಗಿಸ‌ಬಹುದು ಎನ್ನುವುದಕ್ಕೆ ಇಲ್ಲಿ ನೋಡ ಸಿಕ್ಕ ತುಳುನಾಡಿನ ಹೆಮ್ಮೆಯ ಹುಲ್ಲಿನ ತಿರಿ, ಅಕ್ಕಿ ಮುಡಿ, ಭತ್ತದ ತೆನೆಯ ಗೂಡು ತೋರಣ, ಹುಲ್ಲಿನ ಕಲಾಕೃತಿಗಳನ್ನು ಚಿಕ್ಕ ಮಕ್ಕಳು ಕುತೂಹಲದಿಂದ ವಿಕ್ಷಿಸುತ್ತಿದ್ದರು. ಇದನ್ನೆಲ್ಲ ನಮ್ಮ ಸಂಸ್ಕೃತಿ ಎಂಬ ಗೌರವ ದೊಂದಿಗೆ ಮಕ್ಕಳಿಗೆ ಪರಿಚಯಿಸ ಬೇಕು.


           ಕರ್ನಾಟಕದ ಬೇರೆ ಬೇರೆ ಪ್ರಾಂತ್ಯಗಳಾದ ಬೆಳಗಾವಿ,ಹುಬ್ಬಳ್ಳಿ, ಬಿಜಾಪುರ, ಧಾರವಾಡ, ಶಿರಸಿ, ಕುಂದಾಪುರ, ಬೆಂಗಳೂರು, ಹಾಗೂ ಉಡುಪಿಯ  ಕೈಮಗ್ಗದ ಸೀರೆಗಳು  ಮಾರಾಟಕ್ಕೆ  ಇತ್ತು.ಇಳಕಲ್ ಸೀರೆ ಹಾಗೂ ಪಟ್ಟದ ಸೀರೆಗಳಿಗೆ ಲಂಬಾಣಿ ಕಸೂತಿಯಲ್ಲಿ ಮಾಡಿದ  ಹಳೆಯ ಮಾದರಿ ಸೀರೆಗೆ ಹೊಸ ಬಗೆಯ ಕಸೂತಿ ಸೇರಿಸಿ ಹಿರಿಯರು ಕಿರಿಯರ ಮನಗೆಲ್ಲುವ ತವಕದಲ್ಲಿ ಲಂಬಾಣಿ ಕಲಾಕಾರರು ಹಾಗೂ ಹೊರ ರಾಜ್ಯದಿಂದ ಬಂದವರು ಭಾಷಾತೊಡಕಿನ ನಡುವೆಯು ಕಲಾಕಸೂತಿಯ ಎತ್ತರ ಬಿತ್ತರವನ್ನು ವಿವರಿಸುತ್ತಿದ್ದರು. ಕರ್ನಾಟಕದ ಕೈಮಗ್ಗ ಹಾಗೂ ಗುಡಿಕೈಗಾರಿಕೆಯ ವೈಭವಯುತ ಪರಂಪರೆ, ವಿಶಿಷ್ಟತೆ, ಉತ್ಕೃಷ್ಟ ಗುಣಮಟ್ಟದ ವೈವಿಧ್ಯತೆಗಳಿಗೆ ಭಾರತೀಯ ನೇಕಾರರು,ಕುಂಬಾರರು,  ದೇಶಿ ಸಂಸ್ಕೃತಿಯ   ಸಂಪ್ರದಾಯಗಳೊಂದಿಗೆ ಬದುಕು ಕಟ್ಟಿಕೊಂಡ ಎಲ್ಲಾ ವರ್ಗಕ್ಕೆ ಪ್ರೋತ್ಸಾಹ ಅಗತ್ಯವಾಗಿ ಸಿಗಲೇಂದೆ ಈ ಮೇಳವನ್ನು ಆಯೋಜಿಸಲಾಗಿದೆ.


           ಟೇಬಲ್ ಮೇಲೆ ಇಡುವ ಮ್ಯಾಟ್, ಬಟ್ಟೆ ಯಿಂದಲೇ ತಯಾರಿಸಿದ ಬುಟ್ಟಿ, ಗದಗ ಜಿಲ್ಲೆಯಿಂದ ಬಂದ ಲೆದರ್ ಬ್ಯಾಗ್ ಅಲ್ಲಿನ ವಿವಿಧ ಮಾದರಿಯ ಲೆದರ್ ವಸ್ತುಗಳು ತುಸು ದುಬಾರಿ ಎನಿಸಿದರು ಸಹಜ ಲೆದರ್ ಎನ್ನುವುದು ಸಮಾಧಾನದ ವಿಚಾರ .ಯುವ ಸಮೂಹವನ್ನು ಹೆಚ್ಚು ಆಕರ್ಷಿಸುತ್ತಿತು ಲೆದರ್ ವಸ್ತು ಗಳನ್ನು ಇರಿಸಿದ ಮೇಳದ ಆಯಾಮಗಳು. ಮಹಾರಾಷ್ಟ್ರದ ಕಸೂತಿಯಿಂದ ಕೂಡಿದ  ಸೋಫಾ ಕವರ್ ಬೆಡ್ ಸಿಟ್ ನ ವಿನ್ಯಾಸ ಸುಂದರವಾಗಿ ಕಾಣಿಸುತ್ತಿತ್ತು.ಹೆಚ್ಚಿನ ಗಮನ ಸೇಳೆದ ವಸ್ತುಗಳಲ್ಲಿ ಹಿಡಿಕಡ್ಡಿಯಲ್ಲಿ ಮಾಡಲಾದ ಸಣ್ಣ ದೊಡ್ಡ ಬುಟ್ಟಿಗಳು ಗಟ್ಟಿ ಮುಟ್ಡಾಗಿದ್ದದ್ದು  ಬೇರೆ ಬೇರೆ ತರಹದ ಬುಟ್ಟಿ ನೋಡಿದ್ದೆ  ಹಿಡಿಕಡ್ಡಿಯ ಬುಟ್ಟಿ ನೋಡಿದ್ದು ಇದೆ ಮೊದಲ ಬಾರಿಗೆ ಆದ ಕಾರಣವೋ ಆಶ್ಚರ್ಯ ಹಾಗೂ ಕುತೂಹಲ ವಾಯಿತು.  ಅಷ್ಟೇ ಅಲ್ಲದೇ ಬೆಳಗಾವಿಯಿಂದ ಬಂದ ಸಣ್ಣ ದೊಡ್ಡ ಹಾಗೂ ವಿವಿಧ ಆಕಾರದ ಜೋಂಡು ಹುಲ್ಲಿನ ಬುಟ್ಟಿ ಉದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಇರಿಸಲಾಗಿದೆ. ಸಂಪ್ರದಾಯಿಕ ಕಲೆಗೊಂ ದು ಆಧುನಿಕ ಸ್ಪರ್ಶ ನೀಡಿದ ಪರಿಕಗಳ ಸಾಲು ಸಾಲೆ ಇತ್ತು.

        ಛತ್ತೀಸ್ ಗಡದ ಕಬ್ಬಿಣದ ವಿವಿಧ ಆಟಿಕೆಗಳು ಕಲಾಕೃತಿ ಗಳು ಇದರಲ್ಲಿ ಮುಖ್ಯವಾಗಿ ಗಮನ ಸೇಳೆದ ಅಂಶ ಎಂದರೆ  ವೆಲ್ಲಿಂಡಿಗ್ ಇಲ್ಲದೆ ತಯಾರಿಸುವ ಸಂಪ್ರದಾಯ ಕ ರೀತಿಯಲ್ಲಿ ಕಬ್ಬಿಣವನ್ನು ಕಾಯಿಸಿ ಆಟಿಕೆಗಳನ್ನು ತಯಾರಿಸುತ್ತಾರೆ.ಬಂಗಾಳದ ಚಿತ್ರಕಾರ, ಆಶುಕವಿ ಪಶ್ಚಿಮ ಬಂಗಾಳದ ಪ್ರವೀರ್ ಅವರ ಚಿತ್ರಕಲೆಗಳು ಹಾಗೂ ಅದರೊಂದಿಗೆ ಮೂಡಿ ಬರುವ ಸಂಗೀತ ರಾಗ ತಾಳ ಲಯ ಕೇಳುಗರ ಉತ್ಸಾಹ ಹೆಚ್ಚಿಸುತ್ತದೆ. ಕಲೆ, ಸಂಸ್ಕೃತಿಗಳ ಬಿಂಬಿಸುವ ಜನಪದ ಕಲಾ ಪ್ರಕಾರಗಳು ತಮ್ಮದೇ ಆದ ಕೊಡುಗೆ ನೀಡಿದ್ದು ಎದ್ದು ಕಾಣುತ್ತಿತ್ತು. ಪುರಾತನ ಉಪಕರಣಗಳು ಹೆರಳವಾಗಿ ಕಾಣಸಿಕ್ಕಿದ್ದವು ಹಿಂದಿನ ಕಾಲದ ಮನೆಗಳಲ್ಲಿ ಬಳಸುವ ಕೊಡಪಾನ, ಕಲ್ಲುಗುಂಡು,ಲೋಟಗಳು,ಚನ್ನೆಮಣಿ,ಡೋಲು, ಮರದ ಶಾವಿಗೆ ಅಚ್ಚು, ಯಕ್ಷಗಾನ ಮುಖವಾಡಗಳು ಇನ್ನೂ ಅನೇಕ ಕನ್ನಡನಾಡಿನ ಪಾರಂಪರಿಕ ವಸ್ತುಪ್ರದರ್ಶನವೂ ಅನಾವರಣಗೊಂಡಿದೆ.  ಹಳೆಯ ಸಂಪ್ರದಾಯ ಎಂದು ಮುಗು ಮುರಿಯುವ  ಕಾಲ ಬದಲಾಗಿ ಚಿಣ್ಣರಿಂದ ವೃದ್ಧರವರೆಗೂ ಎಲ್ಲರು ಇಷ್ಟಪಟ್ಟು ನೋಡಿಕೋಳ್ಳುತ್ತಿ ದ್ದರು. ನಮ್ಮ ಪೂರ್ವಿಕರು ಹಿರಿಯರು ಬಳಸುತ್ತಿದ್ದ ವಸ್ತುಗಳು ಪರಿಸರ ಸ್ನೇಹಿಯಾಗಿದ್ದವು ಎಂಬುದಕ್ಕೆ ಈ ಪ್ರದರ್ಶನದಲ್ಲಿನ ವಸ್ತುಗಳೆ ಉದಾಹರಣೆ. ಧೀರ್ಘ ಬಾಳಿಕೆಯ ಕಣ್ಮನ ಸೆಳೆಯುವ ಅಪರೂಪದ ಕರಕುಶಲ ವಸ್ತುಗಳು ಸಂಪ್ರದಾಯಕ ಶೈಲಿಯೊಂದಿಗೆ ಹೊಸ ಮಾದರಿಯಲ್ಲೂ ಲಭ್ಯ. ಗ್ರಾಮೀಣ ಶ್ರಮಿಕ ಕುಶಲ ಕರ್ಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ  ಈ ಗ್ರಾಮೀಣ ಉತ್ಪನ್ನ ಹಾಗೂ ಮೇಳಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿದೆ. ನೋಡ್ತಾ.. ನೋಡ್ತಾ…ಬೇರೆ ಜಗತ್ತು ಅಂದರೆ ಉಡುಪಿಯ ರಾಜಾಂಗಣದೊಳಗೆ ಭಾರತದ ವಿವಿಧ ರಾಜ್ಯದೊಳಗೆ ಒಮ್ಮೆಗೆ ಪ್ರವೇಶಿಸಿದ ಅನುಭವವಾಯಿತು.

Leave a Reply

Your email address will not be published. Required fields are marked *