ಶಿಕ್ಷಕರ ವೇತನ ಬಿಕ್ಕಟ್ಟು – ಜೂನ್ ೨೫ ರಾಜ್ಯವ್ಯಾಪಿ ಪ್ರತಿಭಟನೆ: heggaddesamachar

ಉಪನ್ಯಾಸಕರ, ಶಿಕ್ಷಕರ ವೇತನ ಬಿಕ್ಕಟ್ಟನ್ನು ಪರಿಹರಿಸಬೇಕು ಮತ್ತು ವಿಶೇಷ ಪರಿಹಾರ ಪ್ಯಾಕೇಜ್ಗಾಗಿ ಆಗ್ರಹಿಸಿ ಜೂನ್ 25 ರಂದು ರಾಜ್ಯವ್ಯಾಪಿ ಪ್ರತಿಭಟನೆಯನ್ನು ಎಐಡಿವೈಓ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಸುನೀಲ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅತಿಥಿ ಉಪನ್ಯಾಸಕರ ಮತ್ತು ಅತಿಥಿ ಶಿಕ್ಷಕರ ಸಮಸ್ಯೆಗಳನ್ನು ಸರ್ಕಾರವು ಸಂಪೂರ್ಣವಾಗಿ ನಿರ್ಲಕ್ಷಿಸಿದೆ .

ನಮ್ಮ ರಾಜ್ಯದಲ್ಲಿರುವ 413 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ದುಡಿಯುತ್ತಿದ್ದಾರೆ.
2019 ರ ಜುಲೈನಲ್ಲಿ , 10 ಮತ್ತು 12 ನೇ ತರಗತಿಗಳಿಗೆ ಪಾಠ ಮಾಡಲು 22,150 ಅತಿಥಿ ಶಿಕ್ಷಕರ ಅಗತ್ಯವನ್ನು ತೋರಿಸಿ , ನೇಮಕಾತಿ ಮಾಡಿಕೊಳ್ಳಲಾಗಿತ್ತು .

ಇನ್ನು ನಿರ್ದಿಷ್ಟವಾಗಿ ವಿವಿಧ ಹಂತಗಳ ಶಿಕ್ಷಣದಲ್ಲಿ ಎಷ್ಟೆಷ್ಟು ಮಂದಿ ‘ ಅತಿಥಿ ‘ ಶಿಕ್ಷಕರಾಗಿ ದುಡಿಯುತ್ತಿದ್ದಾರೆ ಎಂಬ ನಿಖರವಾದ ಮಾಹಿತಿ ಲಭ್ಯವಿಲ್ಲ .
ಒಟ್ಟಿನಲ್ಲಿ ಸಾವಿರಾರು ಅತಿಥಿ ಉಪನ್ಯಾಸಕರು ಮತ್ತು ಅತಿಥಿ ಶಿಕ್ಷಕರು ರಾಜ್ಯದೆಲ್ಲೆಡೆ ದುಡಿಯುತ್ತಿದ್ದಾರೆ . ಈ ಕೂಡಲೇ ರಾಜ್ಯ ಸರ್ಕಾರವು ವಿಶೇಷ ಅನುದಾನವನ್ನು ಘೋಷಿಸಬೇಕು ಹಾಗೂ ಬಾಕಿರುವ ಹಣವನ್ನು ಒಂದೇ ಬಾರಿಗೆ ಈ ಕೂಡಲೇ ಪಾವತಿಸಬೇಕು ಎಂದು ಎಐಡಿವೈಓ ಕರ್ನಾಟಕ ರಾಜ್ಯ ಸಮಿತಿಯು ಜೂನ್ 25 ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಹರೀಶ್ ಹೆಚ್ ಎಸ್ , ಕಲಾವತಿ ಉಪಸ್ಥಿತರಿದ್ದರು.