News (ಸುದ್ದಿ)

ಶಾಸಕ ರಾಮದಾಸ್ ಜನರ ದಿಕ್ಕು ತಪ್ಪಿಸುತ್ತಿದ್ದಾರೆ – ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪ: heggaddesamachar

Spread the love

ಮೈಸೂರಿನ ಕುರುಬಾರಹಳ್ಳಿ ಸರ್ವೆ ನಂಬರ್ 4 ವಿಚಾರದಲ್ಲಿ ಶಾಸಕ ರಾಮದಾಸ್ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮೈಸೂರಿನಲ್ಲಿ ಆರೋಪ.

ನಿನ್ನೆ ರಾಮದಾಸ್ ನೀಡಿರುವ ಹೇಳಿಕೆಗೆ ತಕ್ಕಂತೆ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ. ಕುರುಬಾರಹಳ್ಳಿಯ ಸರ್ವೆ ನಂಬರ್ 4 ಕ್ಕೆ ಸಂಬಂಧಿಸಿದ ಕಡತವನ್ನು ಮುಂದಿನ ಕ್ರಮಕ್ಕಾಗಿ ಟಿಪ್ಪಣಿ ಮೂಲಕ ಸಲ್ಲಿಸಲಾಗಿದೆ.

ಅದೂ ಅನಧಿಕೃತ ಟಿಪ್ಪಣಿಯಾಗಿದೆ. ಈ ಸಂಬಂಧ ಕ್ಯಾಬಿನೆಟ್ ನಲ್ಲಿ ತೆಗೆದುಕೊಂಡಿರುವ ನಿರ್ಧಾರಕ್ಕೆ ವಿರುದ್ಧವಾಗಿ ಶಾಸಕ ರಾಮದಾಸ್ ತದ್ವಿರುದ್ಧವಾದ ಹೇಳಿಕೆ ನೀಡಿದ್ದಾರೆ.

ರಾಮದಾಸ್ ನೀಡಿರುವ ಹೇಳಿಕೆ ಕ್ರಿಮಿನಲ್ ಆಗಿದೆ. ಇದರಲ್ಲಿ ಸಚಿವ ಆರ್. ಅಶೋಕ್ ಪಾತ್ರವೂ ಇದೆ. ಸರ್ವೇ ನಂಬರ್ 4ರಲ್ಲಿ ಶಾಸಕ ರಾಮದಾಸ್ ಸಹೋದರನಿಗೆ ಜಮೀನು ಇದೆ.

ಸಹೋದರನ ಆಸ್ತಿ ರಕ್ಷಣೆಗಾಗಿ ರಾಮದಾಸ್ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಈ ಮೊದಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಅಚಾತುರ್ಯ ಇದು.

ಆಗ ಈಶ್ವರಪ್ಪ ಕಂದಾಯ ಸಚಿವರಾಗಿದ್ದರು, ರಾಮದಾಸ್ ಕೂಡ ಆಗ ಸಚಿವರಾಗಿದ್ದರು.ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ತಪ್ಪನ್ನು ಈಗಿನ ಬಿಜೆಪಿ ಸರ್ಕಾರ ಸರಿಪಡಿಸಬೇಕು. ಈ ಬಗ್ಗೆ ತಿಂಗಳಾನುಗಟ್ಟಲೇ ಧನಿ ಎತ್ತಿದ್ದ ಬಿಜೆಪಿ ವಕ್ತಾರ ಗೋ. ಮಧುಸೂಧನ್ ಎಂಟು ತಿಂಗಳಿಂದ ಕಾಣಿಸುತ್ತಿಲ್ಲ, ಅವರು ಕಾಣೆಯಾಗಿದ್ದಾರೆ.ಅವರು ಗುಜರಾತ್ ನಲ್ಲಿ ಕ್ವಾರಂಟೈನ್ ನಲ್ಲಿ ಇದ್ದಾರೆಂದು ಮಾಹಿತಿ ಲಭ್ಯವಾಗಿದೆ.

ಕುರುಬಾರಹಳ್ಳಿ ಸರ್ವೆ ನಂಬರ್ 4 ವಿಚಾರದಲ್ಲಿ ಗೋ. ಮಧುಸೂಧನ್ ಈಗ ಸೈಲೆಂಟಾಗಿದ್ದಾರೆ. ಮಧುಸೂದನ್ ಇನ್ನು ಮುಂದಾದರೂ ಜನರಿಗೆ ಸತ್ಯಾಂಶ ತಿಳಿಸಬೇಕು. ಈ ವಿಚಾರದಲ್ಲಿ ಬಹಿರಂಗ ಚರ್ಚೆಯಾಗಬೇಕಿದೆ.

ಇದಕ್ಕೆ ಕಾಂಗ್ರೆಸ್ ಒಂದು ತಿಂಗಳ ಸಮಯ ನೀಡಲಿದೆ. ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿಕೆ.

Leave a Reply

Your email address will not be published. Required fields are marked *