News (ಸುದ್ದಿ)

ವೈಯಕ್ತಿಕ‌ ದ್ವೇಷಕ್ಕೆ ನಾಲ್ವರ ಕೊಲೆ: heggaddesamachar

Spread the love

ಗುಂಡ್ಲುಪೇಟೆ: ಪಟ್ಟಣದ ಜಾಕೀರ್ ಹುಸೇನ್ ನಗರದಲ್ಲಿ ಮಂಗಳವಾರ ರಾತ್ರಿ ನಡೆದ ಮುಸ್ಲಿಂ‌ ಕುಟುಂಬಗಳ ನಡುವಿನ ಜಗಳದಲ್ಲಿ ನಾಲ್ವರ ಮರ್ಡರ್ ಮೂಲಕ ಅಂತ್ಯ ಕಂಡಿದೆ.

ಜಾಕೀರ್ ಹುಸೇನ್ ನಗರದ ಜಕಾವುಲ್ಲಾ (30), ಇದ್ರೀಶ್,(30), ಕೈಸರ್(29)ಮತ್ತು ನಸ್ರುಲ್ಲಾಖಾನ್(೪೦) ಕೊಲೆಯಾದವರು. ತೀವ್ರ ಗಾಯಗೊಂಡಿರುವ ನಸರುಲ್ಲಾ (30) ಅನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪಟ್ಟಣದ ನೂರುಲ್ಲಾ ಖಾನ್ ಮತ್ತು ಇನಾಯತ್ ವುಲ್ಲಾ ಖಾನ್(ಇನ್ನಾ) ಎರಡು ಗುಂಪುಗಳ ಮೊದಲಿನಿಂದಲೂ ಪರಸ್ಪರ ದ್ವೇಷ ಇದ್ದ ಕುಟುಂಬಗಳಾಗಿದ್ದು ಅವರು ಮಾಡುವ ವ್ಯವಹಾರಗಳಲ್ಲಿ ಪರಸ್ಪರ ಅಡ್ಡಿ ಮಾಡುವ ಕೆಲಸಗಳು ನಡೆಯುತ್ತಿದ್ದವು. ಇನಾಯತ್ ಉಲ್ಲಾ ಖಾನ್ ಅಲಿಯಾಸ್ ಇನ್ನಾ ಎಂಬಾತ ದನದ ವ್ಯಾಪಾರ ಮಾಡುತ್ತಿದ್ದು ಈತ ಕೇರಳಾ ಮತ್ತು ತಮಿಳುನಾಡಿಗೆ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಇದನ್ನು ಇವರ ಅಪೋಸಿಟ್ ಗುಂಪಿನ ನೂರುಲ್ಲಾ ಖಾನ್ ಕಡೆಯವ್ರು ಪೋಲಿಸರಿಗೆ ಮಾಹಿತಿ ನೀಡಿ, ಮಾಧ್ಯಮಗಳಲ್ಲಿ ಸುದ್ದಿ ಬರುವಂತೆ ಮಾಡಿ ರೈಡ್ ಮಾಡಿಸಿದ್ರು.

ಇದರ ದ್ವೇಷ ಮತ್ತು ಹಳೆಯ ದ್ವೇಷದ ನಡುವೆ ರಾತ್ರಿ ಗಲಾಟೆ ಆರಂಭವಾಗಿದೆ ನೂರುಲ್ಲಾ ಮತ್ತು ಇನಾಯತುಲ್ಲಾ ಅಕ್ಕಪಕ್ಕದ ಮನೆಯವರೇ ಆಗಿದ್ದು ಗಲಾಟೆ ಆರಂಭವಾಗುತ್ತಿದ್ದಂತೆ ಇನಾಯತ್ ಗುಂಪಿನವರು ಮಚ್ಚು,ಲಾಂಗುಗಳೊಂದಿಗೆ ದಾಳಿಗಿಳಿದು ಮನೆ ಬಾಗಿಲಿನಲ್ಲೇ ಪರಸ್ಪರ ಹೊಡೆದಾಟ ನಡೆದು ಸ್ಥಳದಲ್ಲೇ ಮೂವರು ಸಾವನ್ನಪ್ಪಿದರೆ ,ತೀವ್ರವಾಗಿ ಗಾಯಗೊಂಡ ನಸ್ರುಲ್ಲಾ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತ ದೇಹಗಳು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದ್ದು ಗುಂಡ್ಲುಪೇಟೆ ಪಟ್ಟಣ ಬೂದಿ ಮುಚ್ಚಿದ ಕೆಂಡದಂತಿದ್ದು ಹೆಚ್ಚಿನ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಕೊರೊನಾ ಹಸಿರು ವಲಯದಲ್ಲಿ ಚೆಲ್ಲಿದ ನೆತ್ತರು…. ಎರಡು ಗುಂಪುಗಳ ನಡುವೆ ಗಲಾಟೆ ನಾಲ್ವರ ಮರ್ಡರ್…. ಮೂವರ ಸ್ಥಿತಿ ಗಂಭೀರ…. ಗುಂಡ್ಲುಪೇಟೆ ಪಟ್ಟಣದ ಜಾಕೀರ್ ಹುಸೇನ್ ನಗರದಲ್ಲಿ ಘಟನೆ….. ಜಕಾವುಲ್ಲಾ ಖಾನ್(೩೨), ಇದ್ರಿಶ್(೩೪) ಖೈಸರ್(೨೯) ನಸ್ರುಲ್ಲಾ(೪೦) ಮೃತರು…. ನಸ್ರುಲ್ಲಾ ಆಸ್ಪತ್ರೆ ಗೆ ತೆರಳುವಾಗ ಮತ್ತೋರ್ವನ ಸಾವು….ಗಾಯಾಳು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ….

ವೈಯಕ್ತಿಕ ದ್ವೇಷದ ಹಿನ್ನೆಲೆ ಗಲಾಟೆ… ನಿನ್ನೆ ರಾತ್ರಿ ಗುಂಡ್ಲುಪೇಟೆಯ ಜಾಕೀರ್ ಹುಸೇನ್ ನಗರದಲ್ಲಿ ನಡೆದ ಘಟನೆ…. ಗುಂಡ್ಲುಪೇಟೆಯಲ್ಲಿ ಹೆಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ ಗೋ ಸಾಗಾಣಿಕೆ…. ಗುಂಡ್ಲುಪೇಟೆಯಿಂದ ಕೇರಳಾ,ತಮಿಳುನಾಡಿಗೆ ಸಾಗಣೆಯಾಗುತ್ತಿದ್ದ ಗೋವು… ಕಳೆದ ಕೆಲವು ತಿಂಗಳ ಹಿಂದೆ ಇದಕ್ಕೆ ಸಾಗಣೆಗೆ ಬ್ರೇಕ್ ಹಾಕಿದ್ದ ಪೊಲೀಸರು…. ಇನಾಯಿತ್ ಮತ್ತು ನೂರುಲ್ಲಾ ಎರಡು ಕುಟುಂಬಗಳ ನಡುವೆ ಗಲಾಟೆ…. ಇನಾಯಿತ್ ಅಂಡ್ ಟೀಂ ಕೇರಳಾ ತಮಿಳುನಾಡಿಗೆ ಗೋ ಸಾಗಣೆ ಮಾಡುವ ಕಸುಬು ನಡೆಸುತ್ತಿದ್ದರು… ನೂರುಲ್ಲಾ ಕಡೆಯವರು ಪೊಲೀಸರಿಗೆ ಮಾಹಿತಿ ನೀಡಿ ಗೋ ಸಾಗಣೆಗೆ ಸ್ಥಗಿತಗೊಳಿಸಿದ್ದರು…

ಇದರಿಂದ ಕೋಪಗೊಂಡಿದ್ದ ಇನಾಯತ್ ಕಡೆಯವರು ನೂರುಲ್ಲಾ ಅಂಡ್ ಟೀಂ ಜೊತೆ ಜಗಳವಾಡುತ್ತಿದ್ದರು… ನಿನ್ನೆ ಜಗಳ ತಾರಕಕ್ಕೇರಿ ನಾಲ್ವರ ಕೊಲೆಯಲ್ಲಿ ಅಂತ್ಯಗೊಂಡಿದೆ.. ಚಾಮರಾಜನಗರ ಎಸ್ಪಿ ಗುಂಡ್ಲುಪೇಟೆಯಲ್ಲಿ ಮೊಕ್ಕಾಂ…. ಘಟನೆಗೆ ಸಂಬಂಧಿಸಿದ ನಾಲ್ವರ ಬಂಧನ… ಉಳಿದ ಆರೋಪಿಗಳ ಸೆರೆಗೆ ವಿಶೇಷ ತಂಡ ರಚನೆ… ಗುಂಡ್ಲುಪೇಟೆ ಶವಗಾರದಲ್ಲಿ ಮೃತ ದೇಹಗಳು…. ಪಟ್ಟಣದಲ್ಲಿ ಬಿಗುವಿನ ವಾತಾವರಣ…ಗುಂಡ್ಲುಪೇಟೆ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು…

Leave a Reply

Your email address will not be published. Required fields are marked *