Literature (ಸಾಹಿತ್ಯ)

ವಿಶ್ವ ವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

ಭಾರತದ ಚಾರ್ ಧಾಮಗಳಲ್ಲಿ ಒಂದಾದ, ಶ್ರದ್ದಾ ಭಕ್ತಿಯ ಪವಿತ್ರ ಕ್ಷೇತ್ರ ಒಡಿಶಾದ ವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆ ಕೊರೊನಾ ಮಹಾ ಮಾರಿ ನಿಯಂತ್ರಣದ ಲಾಕ್ ಡೌನ್ ನಡುವೆಯೂ ಇದೆ ಜೂನ್ 23 ರಂದು ‌ನಡಯಲಿದ್ದು ಪತ್ರಿ ವರ್ಷದಂತೆ ಲಕ್ಷಾಂತರ ಜನ ಸೇರದೆ ಕೊರೊನಾ ಮಾರ್ಗ ಸೂಚಿಯ ಅನ್ವಯದಂತೆ ರಥಯಾತ್ರೆ‌ ನಡೆಯಲಿದೆ. ಜಗನ್ನಾಥ, ಬಲಭದ್ರ ಹಾಗೂ ದೇವಿ ಸುಭದ್ರಾ ರಥಗಳು ಲಕ್ಷಾಂತರ ಭಕ್ತರು ಹಗ್ಗದ ಮೂಲಕ ಎಳೆಯುತ್ತಿದ್ದರು. ಆದರೆ ಈ ಬಾರಿ ಜನ ಸೇರುವಂತಿಲ್ಲ ಹಾಗಾಗಿ ಈ ವಿಶೇಷ ರಥವನ್ನು ಆನೆ ಹಾಗೂ ಯಂತ್ರದ ಮೂಲಕ ಎಳೆಯ ಲಾಗುತ್ತದೆ.

ಹಲವಾರು ‌ವರ್ಷಗಳಿಂದ ಭಕ್ತರು ಜಗನ್ನಾಥ ರಥಯಾತ್ರೆಯನ್ನು ಭಕ್ತಿಯಿಂದ ನೋಡಿ ‌ಕಣ್ತುಂಬಿಕೊಳ್ಳುತ್ತಿದ್ದರು ಆದರೆ ಈ‌ ಬಾರಿ ಜನದಟ್ಟಣೆಗೆ ಅವಕಾಶವಿಲ್ಲದೆ ದೇಶ ವಿದೇಶಗಳ ವೆಬ್ ಸೈಟ್ನಲ್ಲಿ ಹಾಗೂ ಟಿವಿ ವಾಹಿನಿಗಳಲ್ಲಿ ಜಗನ್ನಾಥ ರಥಯಾತ್ರೆ ಸಾಗುವ ವೈಭವದ ನೋಟದ‌ ನೇರ ಪ್ರಸಾರದ ವೀಕ್ಷಣೆ ಗೆ ಮಾತ್ರ ಅವಕಾಶ ಎಂದು ಪುರಿ ಜಗನ್ನಾಥ ದೇವಾಲಯದ ಪ್ರಕಟಣೆ ಹೊರ ಬೀಳುತ್ತಲೆ ಕರೋನಾ ವೈರಸ್ ಹರಡುವ‌ ಹಿನ್ನಲೆ ಹಾಗೂ ಈ ಸಂಬಂಧಿತ ರಥ ಯಾತ್ರೆ ನಿರ್ವಹಣೆಯಲ್ಲಿ ಯಂತ್ರ ಹಾಗು ಆನೆಗಳ ಬಳಕೆ ದೇಗುಲದ ಸಂಪ್ರದಾಯ ಮತ್ತು ಕಾಯ್ದೆಗಳಿಗೆ ವಿರುದ್ದ ಎಂದು ಬಿ. ವಿ .ಪಿ ನ್ಯಾಯಲಯದಲ್ಲಿ ವಾದಿಸಿತ್ತು ಭಾರತೀಯ ವಿಕಾಸ್ ಪರಿಷತ್ತು ಸಲ್ಲಿಸಿದ ಅರ್ಜಿ ಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅರ್ಜಿ ದಾರರ‌ವಾದಕ್ಕೆ ಸಹಮತ ವ್ಯಕ್ತಪಡಿಸಿದ ನ್ಯಾಯ ಪೀಠ ಒಡಿಶಾ ಪುರಿ ಜಗನ್ನಾಥ ರಥ ಯಾತ್ರೆಗೆ ತಡೆಯಾಜ್ಞೆ ವಿಧಿಸಿ ತೀರ್ಪು ನೀಡಿ ರಥೋತ್ಸವಕ್ಕೆ ಅನುಮತಿ ನೀಡುವುದಿಲ್ಲ ರಥ ಯಾತ್ರೆ ಹಾಗೂ ಇದಕ್ಕೆ ಸಂಬಂಧ ‌ಪಟ್ಟ ಎಲ್ಲಾ ಧಾರ್ಮಿಕ ಚಟುವಟಿಕೆ ಗಳನ್ನು ರದ್ದು ಗೊಳಿಸಲು ಆಜ್ಞೆ ಹೊರಡಿಸಿದೆ.

ವಿಶ್ವ ವಿಖ್ಯಾತ ಒಡಿಶಾ ಪುರಿ ಜಗನ್ನಾಥ ರಥಯಾತ್ರೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು 284 ವರ್ಷಗಳ ನಂತರ ಈ‌ಬಾರಿ ರಥಯಾತ್ರೆ ರದ್ದು‌ಗೊಂಡಿದೆ. ಜಗತ್ತ್ ಪ್ರಸಿದ್ಧ ಪುರಿ ಜಗನ್ನಾಥ ರಥ ಯಾತ್ರೆ ನಡಸುವ ಬಗ್ಗೆ ಉಂಟಾದ ಸಂದಿಗ್ಧತೆ ನಿವಾರಣೆಯಾಗಿದ್ದು ಕೊರೊನಾ ವೈರಸ್ ಹರಡುವ ಹಿನ್ನಲೆಯಲ್ಲಿ ರಥಯಾತ್ರೆ ನಡೆಸಲು ಅನುಮತಿ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿ. ಸಾರ್ವಜನಿಕ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಅವಕಾಶ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ. ಲಾಕ್ ಡೌನ್ ನಿರ್ಬಂಧನೆ ಹಾಗೂ ಸರಕಾರದ ಆದೇಶ ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ. ಆದ್ದರಿಂದ ವಿಶ್ವ ವಿಖ್ಯಾತ ಪುರಿ ಜಗನ್ನಾಥ ರಥ ಯಾತ್ರೆ ಈ ವರ್ಷವಿಲ್ಲ.ಅಲ್ಲಿನ ವಿಶೇಷತೆಯನ್ನು, ಈ ಮೊದಲು ನಡೆದ ರಥೋತ್ಸವದ ಪರಿಯನ್ನು ಓದುಗರ ಎದುರು ಸಂಭ್ರಮದಿಂದ ಹರವಿಟ್ಟೆ.

ಪುರಿ ಜಗನ್ನಾಥ ಮಂದಿರ :
ಪುರಿ ಜಗನ್ನಾಥ ದೇವಾಲಯ 10 ಎಕರೆ ವಿಶಾಲವಾದ ಸ್ಥಳ ದಲ್ಲಿ ನಿರ್ಮಿಸಲಾಗಿದ್ದು ಗೋಪುರದ ಎತ್ತರ ಸುಮಾರು 214 ಅಡಿಗಳು . ದೇವಾಲಯದ ‌ಸುತ್ತಾ ಮೇಘನಾದ‌ಪ್ರಕಾರ ಮತ್ತು ಕೂರ್ಮ‌ಪ್ರಕಾರ‌ ಎಂಬ‌ ಎರಡು ರಕ್ಷಣಾ ಗೋಡೆಗಳಿವೆ. ಪುರಿ ಜಗನ್ನಾಥ‌ದೇವಾಲಯಕ್ಕೆ ಮೋಕ್ಷ ಪ್ರಾಪ್ತಿಯ ಕ್ಷೇತ್ರ ಎಂಬ ಹೆಗ್ಗಳಿಕೆ ಇದ್ದು. ಇಲ್ಲಿನ ರಥ ಯಾತ್ರೆ ಯಂತು ವಿಶ್ವ ಪ್ರಸಿದ್ಧ. ಒಡಿಶಾದ ಪುರಿ ಜಗನ್ನಾಥ ಮಂದಿರ ಗರ್ಭಗುಡಿಯಲ್ಲಿ ಮರದಿಂದ ತಯಾರಿಸಲ್ಪಟ್ಟ ಜಗನ್ನಾಥನ ಮೂರ್ತಿಯನ್ನು ಕಣ್ತಂಬಿ ಕೊಳ್ಳುವುದೆ ಒಂದು ಸೊಬಗು .ಇಕ್ಕೆಲಗಳಲ್ಲಿ ಬಲಭದ್ರ ಮತ್ತು ಸುಭದ್ರೆಯರ ಮೂರ್ತಿಗಳಿದ್ದು ಈ ಎಲ್ಲಾ ಮೂರ್ತಿ ಗಳಿಗೆ ಕಿವಿ, ಕಾಲುಗಳಿಲ್ಲ ಮುರಿದ ಕೈಗಳು,‌ಮರದಿಂದ‌ಮಾಡಿದ ಕಿವಿ, ಕಣ್ಣಿನ ಜಾಗದಲ್ಲಿ ಡೊಡ್ಡ ವರ್ತುಲವಿದೆ. ಕಾಲಿಲ್ಲದಿದ್ದರು ಜನರ ಕರೆಗೆ‌ ಓಗೊಟ್ಟು ಓಡಿಬರುವವ. ಕಿವಿಯಿಲ್ಲದಿದ್ದರು ಭಕ್ತ ರ ಮರುಕ ಆಲಿಸುವವ. ಕೈಗಳು ಮುರಿದಿದ್ದರು ಅಭಯ ನೀಡುವ ದೇವರು ಎಂಬ ನಂಬಿಕೆ ‌ಇದೆ. ಈ ದೇವಳದ ಧಾರ್ಮಿಕ, ಸಂಪ್ರದಾಯಕ ಆಚರಣೆಗಳು ಅತಿ ವಿಶಿಷ್ಠವಾಗಿದ್ದು. ಶ್ರೀ ಕೃಷ್ಣ ಜಗನ್ನಾಥನ ರೂಪದಲ್ಲಿ ಪುರಿ ಯಲ್ಲಿ ‌ಕುಳಿತಿದ್ದು ಗರ್ಭಗುಡಿಯಲ್ಲಿ ಸುದರ್ಶನ ಚಕ್ರಕ್ಕೆ ವಿಶೇಷ ‌ಸ್ಥಾನ ವಿದೆ. ಇಲ್ಲಿನ ದೇವರುಗಳಿಗೆ ಪ್ರತಿದಿನ 8 ಬಾರಿ ಬಟ್ಟೆಗಳನ್ನು ಬದಲಿಸಲಾಗುತ್ತದೆ…

ಮೈಲಂಗಿ,ತಡಪ್ ಮತ್ತು ಉತ್ತರಿಯ ಎಂಬ ರಾಜ ಪೋಷಾಕು ಉಡಿಸಲಾಗುತ್ತದೆ. ದೇವಾಲಯದ ಶಿಖರದಲ್ಲಿ 36 ಅಡಿ ವ್ಯಾಸದ ಅಷ್ಟಧಾತುವಿನ ನೀಲ ಚಕ್ರ ಸ್ಥಾಪನೆ ಮಾಡಲಾಗಿದೆ. ಬ್ರಹತ್ ಗೋಪುರ ವನ್ನು ಹತ್ತಿ ಪ್ರತಿ ದಿನ ಧ್ವಜ ಬದಲಾಯಿಸಲಾಗುವುದು. ಒಂದು ದಿನ ಧ್ವಜ ಬದಲಾಯಿಸದ್ದಿದ್ದರೆ ಈ‌ ದೇವಸ್ಥಾನ 18 ವರ್ಷ ಗಳಕಾಲ ಸ್ವಯಂ ಬಾಗಿಲು ಮುಚ್ಚಿಕೊಳ್ಳುತ್ತದೆ ಎಂಬ ಬಲವಾದ‌ ನಂಬಿಕೆ ಇದೆ . ನಾಲ್ಕು ದಿಕ್ಕಿನಲ್ಲಿ ಪ್ರವೇಶ ದ್ವಾರವಿದ್ದು ಇಲ್ಲಿನ ಅರ್ಚಕರು ಯಾವುದೇ ಯಂತ್ರ ದ ಸಹಾಯ ವಿಲ್ಲದೆ ಎತ್ತರದ ಶಿಖರದಂತ ದೇವಾಲಯವನ್ನು ಬರಿಕೈನೆರವಿನಿಂದ ಹತ್ತಿ ಧ್ವಜ ಬದಲಾಯಿಸಿ ಸರಸರನೆ ಇಳಿಯುತ್ತಾರೆ. ದೇವಾಲಯ ಪ್ರವೇಶಕ್ಕೆ ನಾಲ್ಕು ದ್ವಾರಗಳಿದ್ದು ಪೂರ್ವದಿಕ್ಕಿನ ಪ್ರವೇಶ ದ್ವಾರ ಸಿಂಹದ್ವಾರ, ಉತ್ತರ ದಿಕ್ಕಿನಪ್ರವೇಶ ದ್ವಾರ ಗಜದ್ವಾರ, ದಕ್ಷಿಣ ಕ್ಕೆ ವ್ಯಾಘದ್ವಾರ ಮತ್ತು ಪಶ್ಚಿಮ ದಿಕ್ಕಿಗೆ ಅಶ್ವದ್ವಾರ ವೆಂದು ಕರೆಯಲಾಗುತ್ತದೆ.

ರಥೋತ್ಸವದ ವಿಶೇಷ : ಪುರಿ ಜಗನ್ನಾಥ ರಥೋತ್ಸವ ಅತ್ಯಂತ ಪ್ರಾಚೀನ ರಥೋತ್ಸವ ದಲ್ಲಿ ಒಂದು ಇದು ಪುರಿಯ ಬಹು ದೊಡ್ಡ ಉತ್ಸವ, ಜಗತ್ತಿನ ನಾನಾ ಕಡೆಗಳಿಂದ ಭಕ್ತಾದಿಗಳ ದಂಡು ರಥೋತ್ಸವದಲ್ಲಿ ಪಾಲ್ಗೊಳ್ಳಲು ಬರುತ್ತಾರೆ. ಜಗನ್ನಾಥ, ಬಲಭದ್ರ ಹಾಗೂ ಸುಭದ್ರಾ ರಥಗಳನ್ನು ಪ್ರತಿ ವರ್ಷ ಹೊಸತಾಗಿಯೇ ಸಿದ್ಧಗೊಳಿಸಲಾಗುತ್ತದೆ. ಬಡಗಿ ಹಾಗೂ ಶಿಲ್ಪಿ ಗಳ ಶ್ರಮದ ಪ್ರತೀಕವಾಗಿ ಈ ರಥ ರೂಪಗೊಳ್ಳುತ್ತದೆ. ಜಗನ್ನಾಥ ದೇವಾಲಯ ದಿಂದ ಗುಂಡಿಚ ದೇಗುಲದ ವರೇಗೆ ಅಂದರೆ 2.5 ಕಿಲೋಮೀಟರ್ ದೂರ ರಥಸಾಗುತ್ತದೆ. ಮಾರ್ಗ ಮಧ್ಯದಲ್ಲಿ ಮಾಸಿಮಾ ದೇಗುಲಕ್ಕೆ ರಥಗಳು ಭೇಟಿ ನೀಡುವ ಕ್ರಮವಿದೆ. ಅಂದರೆ ದೇವರು ‌ತನ್ನ ಚಿಕ್ಕಮ್ಮನ ‌ಮನೆಗೆ ಸಹೋದರ, ಸಹೋದರಿಯ ಜೊತೆಗೆ ಹೋಗಿ ಬರುವುದು. ಈ ರಥ ತಯಾರಿಗೆ 13 ಸಾವಿರ ಕ್ಯೂಬ್ ಅಡಿ ಉದ್ದದ ಕಟ್ಟಿಗೆ ಬಳಸಲಾಗುತ್ತದೆ. ಈ ರಥೋತ್ಸವದ ವರ್ಣನೆ ಬ್ರಹ್ಮ ಪುರಾಣ, ಪದ್ಮಪುರಾಣ, ಸಂದ್ಕಪುರಾಣ ಮತ್ತು ಕಪಿಲ ಸಂಹಿತೆಯಲ್ಲಿದೆ. ಜಗನ್ನಾಥ ರಥ ಯಾತ್ರೆ ವೇಳೆ ಪಹಂಡಿ‌ ಎಂಬ ಬ್ರಹತ್ ಧಾರ್ಮಿಕ ಕಾರ್ಯ ಕ್ರಮ‌ನಡೆಯಲಿದ್ದು ಈ ವರ್ಷ ಸಾಮಾಜಿಕ ಅಂತರ ಕಾಯ್ದುಕೊಳ್ಳವ‌ ನೀಟ್ಟಿನಲ್ಲಿ ಸುಪ್ರೀಂ ಕೋರ್ಟ್ನ ಆಜ್ಞೆಯಂತೆ ಈ ಧಾರ್ಮಿಕ ಕಾರ್ಯ ಹಾಗೂ ಎಲ್ಲಾ ವಿದಿವಿಧಾನ ರದ್ದು ಗೊಂಡಿದೆ.

ರಥಯಾತ್ರೆಗೆ 15 ದಿನ ಮೊದಲು ಜಗನ್ನಾಥ ನಿಗೆ ನವಯೌವನ ವೇಷ ಮತ್ತು ತಹಿಯಾಲಗಿ ವೇಷಭೂಷಣದಲ್ಲಿ ಅಲಂಕಾರ ಮಾಡಲಾಗುತ್ತದೆ. ಜಗನ್ನಾಥ ರಥೋತ್ಸವಕ್ಕೆ ಗುಂಡಿಬಾ ಯಾತ್ರೆ, ಘೋಷಯಾತ್ರೆ,‌ ದಶವಾತಾರ ಮತ್ತು ನವದಿಪಯಾತ್ರೆ ಎಂತಲೂ ಕರೆಯುತ್ತಾರೆ. ರಥಯಾತ್ರೆಯ ದಿನ ಗರ್ಭಗುಡಿಯ ಲ್ಲಿರುವ ದೇವತೆಗಳನ್ನು ಸುಂದರವಾಗಿ ನಿರ್ಮಿಸಿದ ರಥದಲ್ಲಿ ಇರಿಸಿ ಸಿಂಗಾರಗೊಂಡಿರುವ ಪುರಿಯ ಬೀದಿಗಳಲ್ಲಿ, ಮಂತ್ರ ಘೋಷಣೆ, ಸಾಂಪ್ರದಾಯಿಕ ಮೆರವಣಿಗೆ, ಹಾಡು, ಭಕ್ತರ ಜೈಕಾರ ದೊಂದಿಗೆ ಗುಂಡಿಬಾ ದೇವಾಲಯದ ವರೆಗೆ ಸಾಗುತ್ತದೆ. ಪುರಿ ಜಗನ್ನಾಥ ದೇವಾಲಯದಲ್ಲಿ ಪರಿವಾರ ದೇವರಾದ‌ ಮದನ ಮೋಹನನಿದ್ದು 45.6 ಅಡಿ ಎತ್ತರದ ರಥಕ್ಕೆ 16 ಚಕ್ರಗಳು ಇದೆ. ರಥದ ಮೇಲಿನ ಭಾಗ ಕೆಂಪು ಮತ್ತು ಹಳದಿ ಬಣ್ಣದಿಂದ ವಿರಾಜಿಸುತ್ತದೆ. ಬಲಭದ್ರ 45 ಅಡಿ ಎತ್ತರದ 14 ಚಕ್ರ ಗಳು ರಥ ಕೆಂಪು ಹಸಿರು ಬಣ್ಣದಿಂದ ಅಲಂಕೃತವಾಗಿರುತ್ತದೆ. ಸುಭದ್ರಾ ರಥ 44.6 ಅಡಿ 12 ಚಕ್ರ ಗಳು ರಥದ ಮೇಲಿರುವ ಭಾಗ ಕೆಂಪು ಬಣ್ಣದಿಂದ ಶೊಭಾಯಮಾನವಾಗಿರುತ್ತದೆ. ರಥ ಯಾತ್ರೆಗೆ ಮುನ್ನ ವಿಗ್ರಹ ಗಳಿಗೆ 109 ಕಳಶ ನೀರಿನಿಂದ ಗಂಗಾ ಸ್ನಾನ ನಂತರ ರಥದಲ್ಲಿ ‌ಪ್ರತಿಷ್ಠಾಪಿಸಲಾಗುತ್ತದೆ. ಈ ಕ್ರಮಕ್ಕೆ ಅನ್ನಾರ ಎನ್ನುತ್ತಾರೆ. ವಿಜೃಂಭಣೆಯಿಂದಿ ನಡೆಯುವ ಪುರಿ ಜಗನ್ನಾಥ ರಥಯಾತ್ರೆಯ ಸೊಬಗು ನೋಡಿಯೆ ಆನಂದಿಸ ಬೇಕು . ಪುರಿ ಜಗನ್ನಾಥ ಮಂದಿರ ನೋಡುವ ನನ್ನ ಬಯಕೆ ಕಳೆದ ವರ್ಷ ‌ನೇರವೇರಿದಾಗ ಅಲ್ಲಿನ ಹಲವು ಕುತೂಹಲ ವನ್ನು ಕಂಡು ಬೆರಗಾದೆ.

ತರ್ಕಕ್ಕೆ ನಿಲುಕದ ಪವಾಡಗಳು : ವಿಜ್ಞಾನಕ್ಕೆ ಸವಾಲಾಗಿರುವ ಜಗನ್ನಾಥ ದೇವಾಲಯದ ವಿಶೇಷಗಳು ಅನೇಕ. ಧಾರ್ಮಿಕ ಮತ್ತು ಶದ್ದಾ ಭಕ್ತ ಯ ಕೇಂದ್ರ ವಾಗಿ ಭಕ್ತರಮನದಲ್ಲಿ ನೆಲೆಯೂರಿ ದಂತೆ ವಿಜ್ಞಾನ ಕ್ಕೂ ನಿಲುಕದ,ಸಂಶೊಧನೆಗೂ ಸಿಗದ ಕುತೂಹಲಕಾರಿ ಅನೇಕ ಘಟನೆ ಗಳು ಇಲ್ಲಿ ನಡೆಯುವುದನ್ನು ವಿಜ್ಞಾನಿಗಳು ತಿಂಗಳು ಗಟ್ಟಲೆ ಸಂಶೋಧನೆ ಮಾಡಿ ಇದು ನಮ್ಮ ವಾದಕ್ಕೆ‌ನಿಲುಕದ ಪ್ರಾಮಾಣಿಕರಿಸಲಾಗದ ಅಚ್ಚರಿಗಳು ಎಂದು ಆಶ್ಚರ್ಯ ಪಟ್ಟ ಸತ್ಯ ಘಟನೆ ಗಳಿವೆ.ಅದರಲ್ಲಿ ಮುಖ್ಯ ವಾಗಿ
1.ಬಹುದೂರದಿಂದಲೆ ಗೋಪುರದ ತುದಿಯಲ್ಲಿ ಕಾಣಿಸುವ ಎಂಟು ಬಗೆಯ ಲೋಹ ಗಳಿಂದ ತಯಾರಿಸಿದ ತ್ರಿಶೂಲ ಶ್ರೀ ಚಕ್ರ ಅಥವಾ ನೀಲಚಕ್ರವನ್ನು ಪುರಿಯ ಯಾವದಿಕ್ಕಿನಲ್ಲಿ ನಿಂತು‌ ನೋಡಿ ದರು ಅದು ನಮ್ಮ ಕಡೆಗೆ‌ ತಿರುಗಿ ದಂತೆ‌ಗೊಚರಿಸುತ್ತದೆ.ಈ ನೀಲ‌ಚಕ್ರದ‌ ಮೇಲೆ ಪ್ರತಿದಿನವೂ ಪವಿತ್ರ “ಪತಿತ ಪಾವನ” ಧ್ವಜ ವನ್ನು ಹಾರಿಸಲಾಗುತ್ತದೆ. 2. ದೇವಳದ ಗೋಪುರದ ಮೇಲೆ ಇರುವ ದ್ವಜ ಸ್ತಂಭದಲ್ಲಿ ನೆಟ್ಟಿರುವ ಧ್ವಜ ಗಾಳಿಯ ಚಲನೆಯ‌ ದಿಕ್ಕಿಗೆ ಹಾರದೆ ವಿರುದ್ಧ ದಿಕ್ಕಿನಲ್ಲಿ ಹಾರುವುದು. ಇದರ ಕಾರಣ ಇಂದಿಗೂ ಕಂಡು ಹಿಡಿಯಲು ಆಗಲಿಲ್ಲ. ವೈಜ್ಞಾನಿಕ ಯುಗದಲ್ಲಿ ಇದು ಅಚ್ಚರಿ ಹಾಗೂ ಯಕ್ಷ‌ಪ್ರಶ್ನೆಯಾಗಿ ಉಳಿದಿದೆ 3.ಜಗನ್ನಾಥ ದೇವಾಲಯದ ಆವರಣದಲ್ಲಿ ಯಾವುದೇ ದಿನ, ಯಾವುದೇ ಹೊತ್ತಿನಲ್ಲಿ, ಯಾವ ದಿಕ್ಕಿನಲ್ಲಿ ಯೂ ದೇವಾಲಯದ ಹಾಗೂ ಗೋಪುರದ ನೇರಳು ಬೀಳುವುದೆ ಇಲ್ಲ. ಇದು ಇಲ್ಲಿನ ವಸ್ತು ಶಿಲ್ಪದ ಮಹಿಮೆಯೊ ದೇವರ ಶಕ್ತಿಯೋ ಉತ್ತರ ಇಂದಿಗೂ ದೊರೆತಿಲ್ಲ. ಬೃಹತ್ ದೇವಾಲಯ ವಾಗಿದ್ದರು ಇಡಿ ಆಲಯದ‌ನೇರಳು ಎಲ್ಲಿಯು ಬೀಳದಂತೆ ಸೂಕ್ಷ್ಮ ವಿನ್ಯಾಸವನ್ನು ಹೊಂದಿದೆ ಇಲ್ಲಿನ ವಾಸ್ತುಶಿಲ್ಪ.

4. ಯಾವುದೇ ಜೌತಿಯ‌ಚಿಕ್ಕ‌ಹಾಗೂ ದೊಡ್ಡ ಹಕ್ಕಿಗಳು ಪುರಿ ಜಗನ್ನಾಥ‌ ಮಂದಿರದ ಮೇಲೆ ಆವರಣದಲ್ಲಿ ಹಾರುವುದಿಲ್ಲ.5. ಜಗನ್ನಾಥ ಮಂದಿರದ ಪೂರ್ವ ದಿಕ್ಕಿನ ಸಿಂಹ ದ್ವಾರದ ದೇವಾಲಯದ ಪ್ರಮುಖ ಪ್ರವೇಶ ದ್ವಾರದ ಮೂಲಕ ದೇಗುಲದ ಒಳ ಪ್ರವೇಶಿಸಿಸುತ್ತಿದ್ದಂತೆ ಕಡಲ ಅಲೆಗಳ‌ ಭೊರ್ಗರೆತವಾಗಲಿ, ಹೊರಗಿನ ವಾಹನದ ಶಬ್ದ,ಯಾತ್ರಿಗಳ ಗೌಜು ಗದ್ದಲದ ಯಾವೊಂದು ಶಬ್ದ ಕೇಳದೆ ಇಲ್ಲಿನ ವಾತಾವರಣ ಪ್ರಶಾಂತತೆ ಯಿಂದ ಕೂಡಿರುತ್ತದೆ. ದೇವಾಲಯ ಸಮುದ್ರ ತೀರದಲ್ಲಿ ಇದ್ದರು ಆಲಯದೊಳಗೆ ಸಮುದ್ರದ ಅಲೆಗಳ ಭೋರ್ಗರೆತ ಕೇಳದಂತ ವಾಸ್ತುಶಿಲ್ಪದಿಂದ‌ ಮಂದಿರ‌ ನಿರ್ಮಿಸಿಲಾಗಿದೆ. ಅದೇ ಉಳಿದ ಮೂರು ದ್ವಾರದ ಮೂಲಕ ಪ್ರವೇಶಿಸಿದರೆ ಸಮುದ್ರ ದ ಅಲೆಗಳ‌ ಶಬ್ದ ದೊಂದಿಗೆ ಸುತ್ತಮುತ್ತಲಿನ ಎಲ್ಲಾ ಶಬ್ದ ಗಳು ‌ಕೇಳಿಸುತ್ತದೆ. ಈ ವಿಸ್ಮಯದ ರಹಸ್ಯ ಬಯಲು ಮಾಡಲು ಭೂಗರ್ಭ ಶಾಸ್ತ್ರ ತಜ್ಞರು ಸೋತಿದ್ದಾರೆ.6. ಸಮಾನ್ಯವಾಗಿ ಭಾರತದ ಎಲ್ಲಾ ಕಡೆ ಹಗಲಿನಲ್ಲಿ ಗಾಳಿಸಮುದ್ರದಿಂದ ನೆಲದ ಕಡೆಗೆ ಬೀಸುತ್ತದೆ.ಸಂಜೆ ವೇಳೆ ನೆಲದಿಂದ ಸಮುದ್ರ ದ ಕಡೆ‌ಬೀಸುತ್ತದೆ. ಆದರೆ ಪುರಿ ಯಲ್ಲಿ ಇದರ‌ವಿರುದ್ದವಾಗಿ ಗಾಳಿ ಬೀಸುತ್ತದೆ. ಈ ವಿದ್ಯಾಮಾನ ಸ್ವತಃ ವಿಜ್ಞಾನಿಗಳಿಗೆ ಅಚ್ಚರಿಯ ವಿಚಾರ.ಪುರಿ ಜಗನ್ನಾಥ ದೇವಸ್ಥಾನದಲ್ಲಿ ಅಚ್ಚರಿ ಯ ರೂಪದಲ್ಲಿ ಇರುವ ಚಮತ್ಕಾರ ವನ್ನು ತಿಳಿದು‌ಕೊಳ್ಳಲು ಈಗಿನ‌ ಮುಂದುವರಿದ ವಿಜ್ಞಾನ ಕ್ಕೂ ಸಾಧ್ಯ ವಾಗಲ್ಲಿಲ್ಲ.

ಇಷ್ಟೊಂದು ಅಚ್ಚರಿ ‌ಹುಟ್ಟಿಸುವ ವಿಶ್ವವಿಖ್ಯಾತ ದೇವಾಲಯ ‌ವಿರುವ ಊರಿನಲ್ಲಿ ಮಾನವ ನಿರ್ಮಿತ ಗಲಿಜು ಎಲ್ಲೆಂದರಲ್ಲಿ ತೆರೆದಿಟ್ಟ ಪ್ರಸಾದ,ಹರಕು- ಮುರಕು ವಸ್ತುಗಳು, ಹೊಲಸು,ಗಬ್ಬುನಾತ ಬೀರುವಕೊಳಚೆ ಚರಂಡಿ,ತುಂಬಿ ತುಳುಕುವ ಕಸದ‌ಬುಟ್ಟಿ ಸ್ವಚ್ಚತೆಗೆ ಆದ್ಯತೆ ನೀಡದ ದೇವಳದ ಸುತ್ತಮುತ್ತಲಿನ ಪ್ರದೇಶಗಳು ಯಾಕೆ ಇಷ್ಟು ‌ಕೊಳಕ್ಕಾಗಿಸಿ‌ಕೊಂಡಿದ್ದಾರೆ ಅನಿಸಿತು. ಆದರು ಇಷ್ಟೊಂದು‌ ಅಗಾಧ ಪ್ರಮಾಣದಲ್ಲಿ ಜನ ಬರುವುದರಿಂದ ಸ್ವಚ್ಛತೆಯ ಕೊರತೆ ಮಾಮೂಲು ಅಂದುಕೊಂಡೆ. ಇರಲ ಬಿಡಿ ನನ್ನನೊಳಗಿನ ಲೇಖಕಿಗೆ ಭಕ್ತ ಗಿಂತ ತುಸು ಹೆಚ್ಚು ಕುತೂಹಲ ಈ ದೇವಾಲಯದ ಅಚ್ಚರಿಗಳ ಬಗ್ಗೆ ಇತ್ತು.

ಪ್ರಸಾದದ ಮಹತ್ವ=== ದೇವರ ಪ್ರಸಾದ ಎಂದಾಕ್ಷಣ ಮನದೊಳಗೆ ಅದೆಂತಹದೊ ಪವಿತ್ರತೆ ಮೂಡುತ್ತದೆ. ಭಕ್ತಿ ಭಾವ ತಾನಾಗಿಯೇ ಮೇಳೈಸುತದೆ. ಸ್ಕಂದ ಪುರಾಣದ ಪ್ರಕಾರ ಜಗನ್ನಾಥನು ತನ್ನ ‌ಭಕ್ತರಿಗೆ ಅನ್ನ ಬಹ್ಮನ ರೂಪ ದಲ್ಲಿ ಒದಗಿಬರುವುದಾಗಿ ಬರವಸೆನೀಡಿದ್ದು, ಇಲ್ಲಿನ ಆ ಮಹಾಪ್ರಸಾದವನ್ನು ಮಹಾ ಭೊಗವೆಂದು ಕರೆಯಲಾಗುತ್ತದೆ. ಜಗನ್ನಾಥ ದೇವಾಲಯದ ಅಡುಗೆ ಕೋಣೆ ‌ಅಚ್ಚರಿಗಳ ಆಗರ.ಇಲ್ಲಿ ಪ್ರಸಾದ ತಯಾರಿಸುವ ವಿಧಾನ ವು ವಿಶಿಷ್ಟ ಹಾಗು ಕುತೂಹಲಕಾರಿ. ಏಳು ಮಡಿಕೆಗಳಲ್ಲಿ ಪ್ರಸಾದಕ್ಕೆ‌ಬೇಕಾದ ಪದಾರ್ಥಗಳನ್ನು ಇಟ್ಟು ನಂತರ ಒಂದರಮೇಲೊಂದಿಟ್ಟು ಬೇಯಿಸುತ್ತಾರೆ. ಹೀಗೆ ಬೇಯಿಸಿದ ಪ್ರಸಾದಕ್ಕೆ ಭೋಗ ಎನ್ನ ಲಾಗುತ್ತದೆ. ಮಹಾಪ್ರಸಾದ ವನ್ನು ಕೋಟ ಭೋಗ ಹಾಗೂ ಛತ್ರ ಭೋಗ ಎಂದೂ, ಜಗನ್ನಾಥನ ‌ಅಡುಗೆ‌ಮನೆಯಲ್ಲಿ ಉರಿಯುವ ಅಗ್ನಿ ಯನ್ನು ‌ವ್ಯೆಷ್ಣವ ಅಗ್ನಿ ಎಂದು ಕರೆಯತ್ತಾರೆ.

ಇಂದಿಗೂ ಇಲ್ಲಿನ ಪ್ರಸಾದ ಮಣ್ಣಿನ ಮಡಿಕೆ ‌ಹಾಗೂ ಸೌದೆ ಒಲೆಯಲ್ಲಿ ತಯಾರಾಗುತ್ತದೆ. ಒಮ್ಮೆ ಉಪಯೋಗಿಸಿದ ಮಡಿಕೆ ಮತ್ತೆ ಪುನಃ ಉಪಯೋಗಿಸುವಂತಿಲ್ಲ.ಅನ್ನ ಬ್ರಹ್ಮ ನೆಂದೆ‌ ಹೆಸರಾದ ಪುರಿ ಜಗನ್ನಾಥ ಸ್ವಾಮಿಗೆ ನಿತ್ಯ 56ಬಗೆಯ ಖಾದ್ಯ ನೈವೇದ್ಯ ರೂಪದಲ್ಲಿ ವಿವಿಧ ಸಮಯದಲ್ಲಿ ಬಗೆ ಬಗೆಯ ನೈವೇದ್ಯ ವನ್ನು ಅರ್ಪಿಸಿಲಾಗುತ್ತದೆ. ಪ್ರಸಾದ ತಯಾರಿಸುವ ಅಡುಗೆ ಮನೆಯ ನೆಲದ ಮೇಲೆ ಒಂಬತ್ತು ಚಕ್ರ ಯಂತ್ರ ಗಳಿವೆ. ಅದನ್ನು ಪೂಜಿಸಿ ಹೋಮ ಆದನಂತರವೆ ಪ್ರಸಾದದ ಅಡುಗೆ ತಯಾರಿಸಲಾಗುತ್ತದೆ. ಪ್ರಸಾದ ತಯಾರಿಕೆಗೆ ನೀರು ಗಂಗಾ ‌ಮತ್ತು ಜಮುನಾ ಎಂಬ ಭಾವಿಯಿಂದಲೇ ತರಲಾಗುತ್ತದೆ.

ಛಪ್ಪನ್ ಭೋಗ ಮಹಾಪ್ರಸಾದಕ್ಕೆ‌ಹೆಚ್ಚಿನ ಮಹತ್ವ‌ವಿದ್ದು ಸಂಕುಡಿ‌ ಹಾಗೂ ಸುಖೀಲಿ ಮಹಾಪ್ರಸಾದದಲ್ಲಿ ಸಿಹಿತಿಂಡಿ, ‌ನೀರು ಸೇರಿಸದೆ ತಯಾರಿಸುವ ನಿರ್ಮಾಲ್ಯಪ್ರಸಾದವನ್ನು‌ಕೈವಲ್ಯ ಪ್ರಸಾದ ಎನ್ನುತ್ತಾರೆ. ಒಟ್ಟಿನಲ್ಲಿ ಹೆಚ್ಚಿನ ಎಲ್ಲಾ ‌ಪ್ರಸಾದ ಅಕ್ಕಿ, ಬೇಳೆ,ತರಕಾರಿಗಳಿಂದ ಮಾಡಲಾಗುತ್ತದೆ. ಪೂಜೆ ಯ‌ನಂತರ ಪ್ರಸಾದವನ್ನು ಭಕ್ತ ರಿಗೆ ಹಂಚುತ್ತಾರೆ. ಈ ಪ್ರಸಾದ‌ ತುಂಬಾ ರುಚಿಯಾಗಿದ್ದು ಅದರಲ್ಲೂ ನಾವು ದೇವಾಲಯದ ಹೊರಾಂಗಣ ದಲ್ಲಿ ಕುಳಿತು ಬಿಸಿ ಬಿಸಿ ಪ್ರಸಾದ ತಿಂದ ರುಚಿ ಇನ್ನೂ ‌ಮರೆತಿಲ್ಲ ಎನ್ನಬಹುದು.

ಪುರಿ ಜಗನ್ನಾಥ ಅಡುಗೆ ‌ಮನೆ ವಿಶ್ವದ ಅತೀ ದೊಡ್ಡ ಅಡುಗೆ ಮನೆ ಎನ್ನಲಾಗುತ್ತದೆ. ಇದನ್ನು ಶ್ರೀ ಮಂದಿರ ಎನ್ನುತ್ತಾರೆ. ಇಲ್ಲಿ ಭೀಮಪಾಕ,ನಳಪಾಕ ,ಸೌರಿಪಾಕ ಎಂಬ ಅಡುಗೆ ತಯಾರಿಕಾ ಕೇಂದ್ರ ಗಳಿವೆ. ಶ್ರೀ ಕ್ರಷ್ಣ ಬೆಳಗಿನ ಸಾನ್ನ ರಾಮೇಶ್ವರ ದಲ್ಲಿ ಮಾಡಿ , ಬಧರಿನಾಥದಲ್ಲಿ ಧ್ಯಾನ ಮಾಡಿ ಪುರಿ ಯಲ್ಲಿ ಉಂಡು ದ್ವಾರಿಕೆಯಲ್ಲಿ ಮಲಗುತ್ತಾನೆ ಎಂಬ ಮಾತಿನಂತೆ.ಭೋಜನ ವೇ ಇಲ್ಲಿನ ವೈಭವ. ಸಾವಿನ ಹೊಸ್ತಿಲಲ್ಲಿದ್ದವರಿಗೆ ಇಲ್ಲಿನ ಕೈವಲ್ಯ ಮಹಾಪ್ರಸಾದ‌ ನೀಡಿದರೆ ಸಾವಿನ ನಂತರ ವೈಕುಂಠಪ್ರಾಪ್ತಿಯಾಗುತ್ತದೆ ಎಂಬ‌ ನಂಬಿಕೆ‌ ಇದೆ.

ಇಷ್ಟು ವರ್ಷ ಗಳ ಕಾಲ ಅದ್ದೂರಿಯಾಗಿ ‌ನಡೆಯುತಿದ್ದ ಜಗನ್ನಾಥ ರಥ ಯಾತ್ರೆ ಸುಪ್ರೀಂ ಕೋರ್ಟ್ ಆಜ್ಞೆ ಪಾಲನೆಯಂತೆ ಸ್ತಬ್ಧಗೊಂಡಿದೆ.

Leave a Reply

Your email address will not be published. Required fields are marked *