News (ಸುದ್ದಿ)

ವಿಶ್ವ ರಕ್ತ ದಾನಿಗಳ ದಿನ – ಇಂದಾದರೂ ಇದರ ಮೌಲ್ಯ ತಿಳಿಯಿರಿ : heggaddesamachar

Spread the love

ಹುಟ್ಟಿನಿಂದ ಸಾಯೋತನಕ, ಜೀವನ ಆಧಾರದ ಅತೀ ಅಮೂಲ್ಯ ಮತ್ತು ಮೌಲ್ಯಯುತವಾದ ಶಕ್ತಿಯ ಬಿಂಬಕ ರಕ್ತ.
ರಕ್ತವನ್ನು ಮನುಷ್ಯರಿಂದ ಮನುಷ್ಯರಿಗೆ, ಪ್ರಾಣಿಗಳಿಂದ ಪ್ರಾಣಿಗಳಿಗೆ ಮಾತ್ರ ನೀಡಬಹುದು,
ಮನುಷ್ಯರಿಂದ ಪ್ರಾಣಿಗಳಿಗೆ ಅಥವಾ ಪ್ರಾಣಿಗಳಿಂದ ಮನುಷ್ಯರಿಗೆ ಖಂಡಿತ ಸಾಧ್ಯವಿಲ್ಲ.
ಮನುಷ್ಯ-ಮನುಷ್ಯರ ನಡುವೆ ಅದೆಷ್ಟೊ ಕಂದಕಗಳು ನಿರ್ಮಾಣಗೊಂಡು, ಲೆಕ್ಕಕಿಲ್ಲದಷ್ಟು ರಕ್ತಪಾತ ಬೀದಿಬೀದಿಗಳಲ್ಲಿ ಹರಿದು ಹೋದ ಘಟನೆಗಳು ಲೆಕ್ಕಕ್ಕೆ ಸಿಗದಷ್ಟು…
ಇನ್ನು ಕೆಲವೊಂದಿಷ್ಟು ಅಪಘಾತಕ್ಕೆ ಒಳಗಾಗಿ, ಅತೀ ಹೆಚ್ಚು ರಕ್ತಸ್ರಾವವಾಗಿ, ಪ್ರಾಣ ಪಕ್ಷಿ ಹಾರಿ ಹೋದ ಮನಕಲಕುವ ಘಟನೆಗಳು, ಸನ್ನಿವೇಶಗಳೂ ಇವೆ.
ರಕ್ತಕ್ಕೆ ಸಂಬಂಧಿಸಿದಂತೆ ಬಹುಮುಖ್ಯ ವೇದಿಕೆಯಾಗಿರುವುದು ಆಸ್ಪತ್ರೆಗಳು.
ಇಲ್ಲಿ ರಕ್ತ ಹಲವಾರು ರೀತಿಯಲ್ಲಿ ಅವಶ್ಯಕತೆಯನ್ನು ಪಡೆದಿರುತ್ತದೆ.


ಒಬ್ಬ ವ್ಯಕ್ತಿ ಶುಶ್ರೂಷೆಗೆ ಒಳಗಾದಾಗ ಶುಶ್ರೂಷೆಯ ಮಟ್ಟ ಅಥವಾ ಆಯಕಟ್ಟಿನ ಆಧಾರದಲ್ಲಿ ರಕ್ತದ ಅವಶ್ಯಕತೆ ಇದ್ದೇ ಇರುತ್ತದೆ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಒಬ್ಬ ವ್ಯಕ್ತಿಯ ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇದ್ದಾಗಲೂ ರಕ್ತದ ಅವಶ್ಯಕತೆ ಇದ್ದೇ ಇರುತ್ತದೆ.
ಇದಲ್ಲದೆ ಆಸ್ಪತ್ರೆಗಳಲ್ಲಿ ರಕ್ತ ಕೆಲವು ಹಂತಗಳಲ್ಲಿ ಅದನ್ನು ಪರಿಷ್ಕರಿಸಿ ಸಂಗ್ರಹಿಸಿ ಆಯಾಯ ಅನುಕೂಲಕ್ಕೆ ತಕ್ಕಂತೆ ಅದನ್ನು ಕ್ರೋಡೀಕರಿಸಿ, ರೋಗಿಗೆ ರಕ್ತದ ಅಂಶವನ್ನು ಒಳಗೊಂಡ ವಿಧಗಳಾಗಿ ವಿಂಗಡಿಸಿ ಕೂಡ ನೀಡಲಾಗುತ್ತದೆ.
ರಕ್ತದಲ್ಲೇ ರಕ್ತ ಅಥವಾ ಕೆಂಪು ರಕ್ತ ಕಣ ಎಂದು ಕರೆಯಲ್ಪಡುವ ರಕ್ತವು ಒಂದು ಅಂಶವಾದರೆ, ರಕ್ತದಿಂದ: ಪ್ಲಾಸ್ಮಾ, ಬಿಳಿರಕ್ತ ಕಣ, ಪ್ಲೇಟ್ಲೆಟ್ ಎಂದು ವಿಭಾಗಗಳಾಗಿ ಮಾಡಿ ವಿಂಗಡಿಸಿರುತ್ತಾರೆ. (ಅಂಟಿಜೀನಾ ಅಂತ ಕೂಡಾ ಹೇಳುವ ಮಾದರಿಯು ಇರುತ್ತದೆ)


ಒಬ್ಬ ರಕ್ತದಾನಿಯು ರಕ್ತ ನೀಡುವುದಾದರೆ ಒಂದು ಯೂನಿಟ್ ನಷ್ಟು (450ml) ರಕ್ತ ರೋಗಿಗೆ ನೀಡಬಹುದು.
ಕೆಲವೊಂದು ಅಪರೂಪ ಸಮಯದಲ್ಲಿ ರಕ್ತದಾನಿ ದೇಹದಿಂದ ನೇರವಾಗಿ ರೋಗಿಯ ದೇಹಕ್ಕೆ ಅತಿ ತುರ್ತು ಸಂದರ್ಭದಲ್ಲಿ ಅಥವಾ ಅತಿ ಅವಶ್ಯಕತೆ ಬಿದ್ದಾಗ ಮಾತ್ರ ಈ ರೀತಿಯಲ್ಲಿ ರಕ್ತ ನೀಡಲಾಗುತ್ತದೆ.
ಉಳಿದಂತೆ ರಕ್ತ ಕೇಂದ್ರಗಳಿಗೆ ರಕ್ತದಾನಿಯು ತೆರಳಿ, ಅಲ್ಲಿ ನಿಯಮಾನುಸಾರ, ಮಾಹಿತಿ ಫಾರ್ಮ್ನಲ್ಲಿ ತುಂಬುವ ಮೂಲಕ, ರಕ್ತ ದಾನಿಯನ್ನು ಪರೀಕ್ಷೆಗೆ ಒಳಪಡಿಸಿ ನಂತರ ರಕ್ತದಾನಿಯಿಂದ ರಕ್ತವನ್ನು ಪಡೆದು, ಸಂಗ್ರಹಿಸಿದ ರಕ್ತವನ್ನು ಪರೀಕ್ಷೆಗೆ ಒಳಪಡಿಸಿ, ರೋಗಿಗೆ ರಕ್ತದ ರೂಪದಲ್ಲಿ ಅಥವಾ ಪ್ಲಾಸ್ಮಾ, ಪ್ಲೇಟ್ಲೆಟ್, ಬಿಳಿರಕ್ತಕಣ ರೂಪದಲ್ಲೂ ರೋಗಿಯ ದೇಹಕ್ಕೆ ರಕ್ತವನ್ನು ನೀಡುತ್ತಾರೆ.


ರಕ್ತದಾನಿ ಆದರೆ ನಿಯಮಗಳು ಹಾಗೂ ಸದೃಢ ಆರೋಗ್ಯವನ್ನು ಹೊಂದಿರುವವರು ರಕ್ತದಾನಿಗಳಾಗಬಹುದು.
ಆರೋಗ್ಯ ಸ್ಥಿತಿ ಉತ್ತಮವಾಗಿರಬೇಕು ಅಂದರೆ ಜ್ವರ ಅಥವಾ ಇತರ ಖಾಯಿಗೆ ತುತ್ತಾಗಿರಬಾರದು. ರಕ್ತ ಕೊಡುವ ಸಮಯ ಅದಕ್ಕೆ ಹತ್ತಿರದ ಸಮಯದಲ್ಲಿ ಮಾತ್ರೆಗಳನ್ನು ತೆಗೆದುಕೊಂಡು ಇರಬಾರದು, ಮಧ್ಯಪಾನ ಧೂಮಪಾನ ಮಾಡಿದವರು ರಕ್ತದಾನ ಮಾಡುವಂತಿಲ್ಲ.
ಅಲ್ಲದೆ ವ್ಯಕ್ತಿಯ ತೂಕದ ಮಟ್ಟದ ಆಧಾರವು ಪ್ರಮುಖ ಪಾತ್ರ ವಹಿಸುತ್ತದೆ.
ರಕ್ತದಾನಿಯಾಗಿ ರಕ್ತ ನೀಡುವುದು ಒಂದು ಅತ್ಯುತ್ತಮವಾದ ಮೌಲ್ಯವನ್ನು ಅದು ಪಡೆಯುತ್ತದೆ.
ರಕ್ತ ನೀಡುವವರ ಸಂಖ್ಯೆ ಹೆಚ್ಚು ಇದ್ದರೂ ಅತೀ ತುರ್ತು ಸಂದರ್ಭದಲ್ಲಿ, ಸಮಯ ಅಥವಾ ಕೆಲಸದ ಒತ್ತಡದಿಂದಾಗಿ ಕೆಲವೊಮ್ಮೆ ಸಮಯ ಕಾಯುವಿಕೆಯಲ್ಲಿಯೇ ಮುಂದುಡಲ್ಪಡುತ್ತದೆ.
ಕೆಲವೊಂದು ರಕ್ತದ ಗುಂಪುಗಳು ಅಂದರೆ ಹೇಳುವುದಾದರೆ ಓ ನೆಗೆಟಿವ್ ಮತ್ತು ಬಾಂಬೆ ರಕ್ತದ ಮಾದರಿ ಸಕಾಲದಲ್ಲಿ ದೊರೆಯುವುದು ಅತೀ ಕಷ್ಟಕರ.


ಕೆಲವೊಂದು ಸಮಯದಲ್ಲಿ ಅಸ್ಪತ್ರೆಯ ರಕ್ತನಿಧಿಗಳಲ್ಲೂ ರಕ್ತದ ಲಭ್ಯತೆ ಕಡಿಮೆ ಇರುವುದು, ರೋಗಿಯ ರಕ್ತಕ್ಕಾಗಿ ಪರದಾಡುವ ಸ್ಥಿತಿಯು ಶೋಚನೀಯವಾಗಿರುತ್ತದೆ.
ಇತ್ತೀಚೆಗೆ ರಕ್ತದಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸ್ವ ಇಚ್ಛೆಯಿಂದ ರಕ್ತದಾನ ಮಾಡುವವರನ್ನು ಸಮಯದ ಅಭಾವದ ನಡುವೆಯು ರಕ್ತದಾನಿಗಳಾಗಿ , ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ನೋಡಿದ ತಕ್ಷಣ ರಕ್ತದಾನಕ್ಕೆ ಮುಂದಾಗುತ್ತಾರೆ.
ಇಂತಹ ಸಹೃದಯಿಗಳಿಗೆ ಈ ದಿನ ವಂದನಾರ್ಪಣೆ ಗಳೊಂದಿಗೆ, ಮತ್ತು ರಕ್ತದ ಅವಶ್ಯಕತೆ ಇದ್ದವರು ತಿಳಿದುಕೊಳ್ಳಲೇ ಬೇಕಾದ ಅಂಶವೆಂದರೆ, ಯಾವುದೇ ಗುಂಪಿನ ರಕ್ತವಾದರೂ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಿಯಬಿಟ್ಟ ತಕ್ಷಣ ರಕ್ತ ಸಂಗ್ರಹವಾಗುತ್ತದೆ ಎಂಬ ತಪ್ಪು ಕಲ್ಪನೆ ಖಂಡಿತ ಬೇಡ.
ಯಾಕಂದ್ರೆ ಎಲ್ಲರೂ ರಕ್ತದಾನಿ ಯಾಗಿ ತಮ್ಮ ಕೆಲಸ ಸಮಯವನ್ನು ಬಿಟ್ಟು ರಕ್ತದ ಅವಶ್ಯಕತೆ ಎಲ್ಲಿದೆ ಎಲ್ಲಿದೆ ಅಂತ ಯಾರು ಕಾಯ್ತಾ ಇರೋದಿಲ್ಲ. ಅವರಿಗೆ ಅವರದೇ ಆದ ಕೆಲಸಗಳು ಜವಾಬ್ದಾರಿಗಳು ಕಂಡಿತ ಇದ್ದೇ ಇರುತ್ತದೆ.
ಅಲ್ಲದೆ ಕೆಲವೊಂದು ರಕ್ತದಾನಿಗಳ ಗುಂಪು ಇದ್ದರೂ ಅಲ್ಲಿ ಒಂದಷ್ಟು ಒತ್ತಡಗಳು ಅಥವಾ ಈಗಾಗಲೇ ಒಂದೆರಡು ತಿಂಗಳ ಅವಧಿಯಲ್ಲಿ ರಕ್ತದಾನ ಮಾಡಿ ಇದ್ದರೆ ಅವರು ತಕ್ಷಣ ರಕ್ತದಾನ ಮಾಡಲು ಆಗುವುದಿಲ್ಲ ಅನ್ನುವುದನ್ನು ಕೂಡ ಅವಶ್ಯಕತೆ ಇದ್ದವರು ತಿಳಿದಿರಬೇಕು. ಆರೋಗ್ಯವಂತ ರಕ್ತದಾನಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.


ಸಮಾಜಮುಖಿ ಅಥವಾ ಸಾಮಾಜಿಕ ಜಾಲತಾಣದಲ್ಲಿ ರಕ್ತದಾನಿಗಳ ಗುಂಪು ಇದ್ದರೂ ಅಸಡ್ಡೆ ಅಥವಾ ದೂರಪ್ರಯಾಣ ಆದರೂ ರಕ್ತ ಹೊಂದಾಣಿಕೆ ರಕ್ತದಾನಿಯನ್ನು ನೀಡುವುದು ಕಷ್ಟ. ಹಾಗಾಗಿ ಪ್ರೋತ್ಸಾಹಕರಾಗಿ ಅಥವಾ ಸಮಯಕ್ಕೆ ಸರಿಯಾಗಿ ರಕ್ತದಾನಿಯನ್ನು ಆಸ್ಪತ್ರೆಗೆ ತಲುಪಿಸುವವರು ಪಾತ್ರವನ್ನು ಪಡೆಯುತ್ತದೆ.
ಅಲ್ಲಿ ರೋಗಿಯ ಮಾಹಿತಿ ಆಸ್ಪತ್ರೆಯ ಮಾಹಿತಿ ಹಾಗೂ ಅಲ್ಲಿ ರಕ್ತದಾನಿಯಾಗಿ ಇದ್ದಾಗ ರಕ್ತದ ಗುಂಪು ಕೂಡಾ ಯೋಚಿಸಬೇಕಾಗುತ್ತದೆ.
ಎಲ್ಲ ಸಮಯದಲ್ಲಿ ಎಲ್ಲರೂ ರಕ್ತ ನೀಡಲಾಗುವುದಿಲ್ಲ.
ರಕ್ತದಾನಿಯಾಗಿ ಜೀವ ರಕ್ಷಕರಾದ ಎಲ್ಲರಿಗೂ ಸಲಾಂ ಎಂದು ಹೇಳುತ್ತಾ, ಸಮಯಕ್ಕೆ ಸರಿಯಾಗಿ ರಕ್ತದಾನವನ್ನು ಆಸ್ಪತ್ರೆಗಳಲ್ಲಿ ಮಾಹಿತಿ ಬಿತ್ತರ ಮಾಡಿ ತುರ್ತು ಸಮಯಕ್ಕೆ ಸ್ಪಂದಿಸುವ ಎಲ್ಲ ಸಹೃದಯ ಗಳಿಗೂ ವಿಶ್ವ ರಕ್ತದಾನಿಗಳ ದಿನದ ಹಾರ್ದಿಕ ಶುಭಾಶಯಗಳು.

Leave a Reply

Your email address will not be published. Required fields are marked *