News (ಸುದ್ದಿ)

ವಿಶ್ವ ಪರಿಸರ ದಿನದ ಅಂಗವಾಗಿ ಮೈಸೂರಿನ ವಿದ್ಯಾರಣ್ಯಪುರಂ ಕೇಂದ್ರ ರೇಷ್ಮೆ ಮಂಡಳಿಯ ಕಛೇರಿಯ ಆವರಣದಲ್ಲಿ ಶ್ಲಾಘನೀಯ ಕೆಲಸ: heggaddesamachar

Spread the love

ವಿಶ್ವ ಪರಿಸರ ದಿನದ ಅಂಗವಾಗಿ ಮೈಸೂರಿನ ವಿದ್ಯಾರಣ್ಯಪುರಂ ಕೇಂದ್ರ ರೇಷ್ಮೆ ಮಂಡಳಿಯ ಕಛೇರಿಯ ಆವರಣದಲ್ಲಿ ಇಲಾಖೆಯಲ್ಲಿ ಎಲ್ಲರಿಗೂ ಪರಿಸರ ಸಂರಕ್ಷಣೆಯ ಜಾಗೃತಿಗಾಗಿ ಸುಮಾರು 224 ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ಅವರು ಚಾಲನೆ ನೀಡಿದರು.

ತೆಂಗಿನ ಗಿಡ-7,
ಜಾಮುನ್ ಗಿಡ -32,
ಸೀಬೆ -6,
ಹುಣಸೆ-20, ತೇಗ- 50,
ಬೇವು -20,
ಸಿಲ್ವರ್ ಓಕ್-20,
ಕಾಡು ಬಾದಾಮಿ-20,
ದಾಳಿಂಬೆ-10,
ಕರಿಬೇವು-5,
ನುಗ್ಗೆಕಾಯಿ-20,
ನೆಲ್ಲಿಕಾಯಿ-04,
ಸಪೋಟ-10
ಹೀಗೆ ಹಲವು ಬಗೆಯ ಹಣ್ಣಿನ ಹಾಗೂ ವಿವಿಧ ಬಗೆಯ ಜಾತಿಯ ಗಿಡಗಳನ್ನು ನೆಟ್ಟು ಸಂಸ್ಥೆಯ ನೌಕರರು ಅದನ್ನು ಪೋಷಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತರು. ಈ ಸಂದರ್ಭದಲ್ಲಿ ಮೈಸೂರಿನ ನಗರಪಾಲಿಕೆ ಸದಸ್ಯರಾದ ಮ.ವಿ ರಾಮಪ್ರಸಾದ್, ಮಾನ್ಯ ನಿರ್ದೇಶಕರಾದ ಡಾ.ಪಂಕಜ್ ತಿವಾರಿ, ಕೇಂದ್ರ ರೇಷ್ಮೆ ಮಂಡಳಿಯ ನಿವೃತ್ತ ತಾಂತ್ರಿಕ ಅಧಿಕಾರಿ ಕೆ.ಆರ್.ಗಣೇಶ್, ವಿಜ್ಞಾನಿ ಮಲ್ಲಿಕಾರ್ಜುನ್, ಹಿರಿಯ ವಿಜ್ಞಾನಿ ಮಂದಿರಮೂರ್ತಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *