Cinema (ಸಿನಿಮಾ)

ವಿಶೇಷ ದಿನದಂದು ರಾಬರ್ಟ್ ರಿಲೀಸ್ – ದರ್ಶನ್ ಅಭಿಮಾನಿಗಳಿಗ ಸಿಹಿ ಸುದ್ದಿ: heggaddesamachar.com

Spread the love

ಚಾಲೆಂಜಿಂಗ್ ಸ್ಟಾರ್ ದರ್ಶನ್ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ತಾರೆ ಅಂದ್ರೆ ಅದರ ಖದರ್, ಅದರಲ್ಲಿರುವ ಸ್ಟೈಲ್ ಎಲ್ಲರಿಗಿಂತ ಭಿನ್ನ ವಿಭಿನ್ನವಾಗಿ ಇರುತ್ತೆ.
ಆಕ್ಟಿಂಗ್ ಅಂದ್ರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯೋದೇನು! ಡೈಲಾಗ್ ನ ಸುರಿಮಳೆ ಸುರಿಸೋದು; ಅದು “ಫಸ್ಟ್ ಡೇ ಫಸ್ಟ್ ಶೋ” ಅಂದ್ರೇ ಹೇಳಲು ಮಾತುಗಳೇ ಇರಲ್ಲ.
ಈಗ ಕೊರೋನಾದಿಂದಾಗಿ ಈಗಾಗಲೇ ತೆರೆಕಾಣಬೇಕಾಗಿದ್ದ “ರಾಬರ್ಟ್” ಸಿನಿಮಾ ಲಾಕ್ ಡೌನ್ ನಿಂದಾಗಿ ಮುಂದೆ ಹೋಗ್ತಾನೆ ಇರೋದ್ ಅಭಿಮಾನಿಗಳಿಗೆ ಇನ್ಯಾವಾಗ ಬರುತ್ತೆ ಅನ್ನೋ ಕಾತುರ ಹೆಚ್ಚೇ ಇದೆ.

ಬಹುನಿರೀಕ್ಷಿತರಾದ ಪ್ರೇಕ್ಷಕರ ದಂಡು ಆಸೆ ಈಡೇರುತ್ತಾ ಅಥವಾ ಲಾಕ್ಡೌನ್ ನಿಂದ ನಿರಾಸೆ ಆಗುತ್ತಾ ಗೊತ್ತಿಲ್ಲ, ಅದ್ರೆ ಒಂದು ವಿಶೇಷ ದಿನದಂದು ರಾಬರ್ಟ್ ಸಿನಿಮಾ ತೆರೆಕಾಣುವ ಲಕ್ಷಣಗಳು ಗೋಚರಿಸ್ತಾ ಇದೆ.

ಕಾರ್ಮಿಕ ದಿನದಂದು ದರ್ಶನ್ ರಾಬರ್ಟ್ ಸಿನಿಮಾ ಸೆರೆಹಿಡಿಯುವುದಕ್ಕೆ ಕಾರಣರಾದ ಕ್ಯಾಮೆರಾ ಮೆನ್ಗಳಿಗೆ ಕಾರ್ಮಿಕ ದಿನಾಚರಣೆಯ ಶುಭ ಕೋರುತ್ತಾ ಗೌರವ ಸೂಚಿಸಿದ ರಾಬರ್ಟ್ ತಂಡ,
ರಾಬರ್ಟ್ ಸಿನಿಮಾ ಅಗಸ್ಟ್ 15 ಕ್ಕೆ ರಿಲೀಸ್ ಅಗಲಿದೆ ಎಂಬ ಪಿಸುಮಾತು ಕೇಳ್ತಿರೋದು ಅಂತು ನಿಜ.

ಆಗಸ್ಟ್ ವಿಶೇಷ ದಿನ ಅಂದರೆ ಸ್ವಾತಂತ್ರೋತ್ಸವ ಅಗಸ್ಟ್ 15ಕ್ಕೆ, ಹಾಗಾದರೆ ಸಿನಿಮಾ ಕೂಡ ಅಗಸ್ಟ್ 15ಕ್ಕೆ ತೆರೆಕಾಣಲಿದೆ ಎಂಬುದನ್ನು ರಾಬರ್ಟ್ ಚಿತ್ರ ತಂಡ ಎಲ್ಲೂ ಬಹಿರಂಗಪಡಿಸಿಲ್ಲ. ಒಂದು ಕಡೆಯಲ್ಲಿ ಅಭಿಮಾನಿಗಳಿಗೆ ದರ್ಶನ್ ಅವರನ್ನು ತೆರೆ ಮೇಲೆ ಕಾಣುವ ಹುಮ್ಮಸ್ಸು ಹೆಚ್ಚಾದಂತೆ, ಇನ್ನೊಂದು ಕಡೆಯಲ್ಲಿ ನಿರಾಸೆಯೂ ಆಗ್ತಾನೇ ಇದೆ, ಮುಂಬರುವ ಅಗಸ್ಟ್ 15ಕ್ಕೆ ಬಿಡುಗಡೆಗೊಳ್ಳಲಿದೆ ಸಿನಿಮಾ ಎಂಬ ಪಿಸುಮಾತು ನಿಜವಾಗುತ್ತಾ, ಪ್ಲಾನ್ ಪ್ರಕಾರ ಎಲ್ಲವೂ ನಡೆಯುತ್ತಾ ಕಾದುನೋಡಬೇಕಿದೆ…

ರಿ: ಹೆಗ್ಗದ್ದೆ ಸಮಾಚಾರ್.ಕಾಮ್

Leave a Reply

Your email address will not be published. Required fields are marked *