Literature (ಸಾಹಿತ್ಯ)

ವಿದ್ಯಾರ್ಥಿಗಳ ಮೇಲೆ ಕೊರೋನಾ ತಂದ ಬಿಕ್ಕಟ್ಟುಗಳು : heggaddesamachar

Spread the love

ಮಹಾಮಾರಿ ಕೊರೋನಾ ಎಲ್ಲಾ ಕ್ಷೇತ್ರಗಳ ಮೇಲೂ ರುದ್ರತಾಂಡವವಾಡಿದೆ. ಬಡವರಿಂದ ಹಿಡಿದು ಶ್ರೀಮಂತರವರೆಗೂ ಬಲವಾದ ಪರಿಣಾಮ ಬೀರಿದೆ. ಕೊರೋನಾ ತಂದ ಬಿಕ್ಕಟ್ಟುಗಳು ಒಂದೆರಡಲ್ಲ ಸಾವಿರಾರು. ಅದೆಷ್ಟೋ ಮಂದಿಯ ಪಾಲಿಗೆ ಪಿಶಾಚಿಯಾಗಿ ರೂಪಿತವಾಗಿದೆ. ಆರಾಮಾಗಿ ಓಡಾಡುತ್ತಿದ್ದ ಮನುಷ್ಯನ ಹಾರಾಟಕ್ಕೂ ಕೊಳ್ಳಿ ಇಟ್ಟಿದೆ. ಒಂದು ಕಾಯಿಲೆ ಇಡೀ ವಿಶ್ವವನ್ನೇ ನಡುಗಿಸುತ್ತದೆ ಎಂದರೆ ಎಷ್ಟು ಅಚ್ಚರಿ ಅಲ್ವಾ?…

ಚೀನಾದಲ್ಲಿ ಮೊದಲಿಗೆ ಕೊರೋನಾ ಕಾಣಿಸಿಕೊಂಡಾಗ ನಮಗೆ ಅಷ್ಟು ಭಯ ಇರಲಿಲ್ಲ. ಆದರೆ ಭಾರತಕ್ಕೆ ಒಕ್ಕರಿಸಿದ ಕೊರೋನಾ ತನ್ನ ರಕ್ಕಸತನವನ್ನು ತೀವ್ರವಾಗಿ ನಡೆಸುತ್ತಿದೆ. ನಿಜ ಮನುಕುಲವೇ ಭಯ ಪಡಬೇಕಾದ ಕಾಯಿಲೆ ಇದು. ಕರ್ನಾಟಕದಲ್ಲೂ ಕೊರೊನ ಕಾಣಿಸಿಕೊಂಡು ಕಲ್ಬುರ್ಗಿಯಲ್ಲಿ ಮೊದಲ ಬಲಿ ಪಡೆದ ನಂತರ ಸರ್ಕಾರ ಎಚ್ಚೆತ್ತುಕೊಂಡಿತು. ಅಲ್ಲಿಂದ ಶುರು ಆಯ್ತು ನೋಡಿ ಒಂದೊಂದೇ ಸಮಸ್ಯೆಗಳ ಸರಮಾಲೆ. ಮಕ್ಕಳಿಗೆ ಕೊರೋನಾ ಸುಲಭವಾಗಿ ತಗಲುತ್ತದೆ ಎಂಬ ಭಯದಿಂದ ಪುಟ್ಟ ಮಕ್ಕಳಿಗೆ ರಜೆ ಘೋಷಣೆ ಮಾಡಲಾಯಿತು. ತದನಂತರ ಲೊಕ್ಡೌನ್ಗಳಿಂದ ಎಲ್ಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬ್ರೇಕ್ ಬಿತ್ತು. ಲಕ್ಷ ಲಕ್ಷ ವಿದ್ಯಾರ್ಥಿಗಳಿದ್ದಾರೆ ನಮ್ಮಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯ ತಯಾರಿಯಲ್ಲಿದ್ದರು, ಪಿ.ಯು.ಸಿ ವಿದ್ಯಾರ್ಥಿಗಳು ತಮ್ಮ ಕೊನೆಯ ಇಂಗ್ಲಿಷ್ ಪರೀಕ್ಷೆ ಬರೆದು ಮುಂದಿನ ಪದವಿಯ ಕನಸು ಕಾಣುತ್ತಿದ್ದರೆನೊ ಆದರೆ ಅದಕ್ಕೆಲ್ಲ ಕೊರೊನಾದ ಕಣ್ಣು ಬಿದ್ದು ಅರ್ಧಕ್ಕೆ ನಿಂತಿದೆ. ಸಾಮಾಜಿಕ ಅಂತರದ ಸಲುವಾಗಿ ಎಲ್ಲೂ ಜನ ಗುಂಪು ಸೇರುವಂತಿಲ್ಲ ಹಾಗಾಗಿ ಶಾಲಾ ಕಾಲೇಜುಗಳು ಆರಂಭಗೊಳ್ಳುವ ಯಾವ ಲಕ್ಷಣಗಳು ಕಾಣುತ್ತಿಲ್ಲ..

ಎಲ್ಲಾ ಸಮಸ್ಯೆಗಳಿಗೂ ಒಂದಲ್ಲ ಒಂದು ಪರಿಹಾರ ಇರುತ್ತಂತೆ ಹಾಗೆ ಇದಕ್ಕೂ ಒಂದು ಪರಿಹಾರ ಎಂಬಂತೆ ಶಿಕ್ಷಣ ಮಂಡಳಿಯು ವಿದ್ಯಾರ್ಥಿಗಳ ಮೇಲಿನ ಹಿತಚಿಂತನೆಯಿಂದ ಆನ್ಲೈನ್ ತರಗತಿಗಳನ್ನು ಆರಂಭಿಸಿತು. ಆದರೆ ಅದರಿಂದ ವಿದ್ಯಾರ್ಥಿಗಳಿಗೆ ವದಗಿದ ಲಾಭಕ್ಕಿಂತ ಕಿರಿಕಿರಿನೇ ಹೆಚ್ಚು. ಕೆಲವರಿಗೆ ನೆಟ್ವರ್ಕ್ ಸಮಸ್ಯೆ, ಕೆಲವರ ಬಳಿ ಮೊಬೈಲ್ ಇರುವುದಿಲ್ಲ ಹೀಗೆ ಹಲವಾರು ತೊಂದರೆಗಳಿರುತ್ತವೆ. ತರಗತಿಯಲ್ಲಿ ಕೂತು ಪಾಠ ಕೆಳುವುದಕ್ಕು ಮೊಬೈಲ್ನಲ್ಲಿ ಕೆಳುವುದಕ್ಕು ಅಜಗಜಾoತರ ವ್ಯತ್ಯಾಸವಿದೆ. ತರಗತಿಯಲ್ಲಿ 100 ಮಕ್ಕಳಿದ್ದರೆ ಆನ್ಲೈನ್ ತರಗತಿಗೆ ಬರುವವರು ಕೇವಲ 20 ಮಂದಿ ಮಾತ್ರ. ಹೀಗೆ ಹಲವು ಸಮಸ್ಯೆ ಉದ್ಭವಿಸಿದೆ.

ಲಕ್ಷಗಟ್ಟಲೆ ವಿದ್ಯಾರ್ಥಿಗಳು ತಮ್ಮ ಈ ವರ್ಷದ ಕೊನೆಯ ಶೈಕ್ಷಣಿಕ ಹಂತದಲ್ಲಿದ್ದರು, ಪಾಪ ತಮ್ಮ ಮುಂದಿನ ಉಜ್ವಲ ಭವಿಷ್ಯದ ಬಗ್ಗೆ, ಉದ್ಯೋಗದ ಬಗ್ಗೆ ವಿವಿಧ ಕನಸು ಕಂಡಿದ್ದರೆನೊ?. ಆದರೆ ಅದಿಂದು ಕನಸಿಗಷ್ಟೇ ಮೀಸಲಾಗಿದೆ ಎನಿಸುತ್ತಿದೆ. ಸುಮಾರು ಕಂಪನಿಗಳು ನಷ್ಟ ಹೊಂದಿ ತಲೆ ಮೇಲೆ ಕೈ ಇಟ್ಟು ಕೂತಿವೆ ಹಾಗೂ ಇರುವ ಕೆಲಸಗಾರರನ್ನೇ ಮನೆಗೆ ಕಳುಹಿಸಿದೆ. ಕೆಲ ವಿದ್ಯಾರ್ಥಿಗಳು ತಮ್ಮ ಓದನ್ನೇ ನಂಬಿ ಕೆಲಸ ಅರಸಿ ಊರು ಬಿಟ್ಟು ಪಟ್ಟಣಕ್ಕೋ ಇನ್ನೇಲ್ಲಾದರು ತೆರಳುತ್ತಾರೆ ಆದರೆ ಈ ಸ್ಥಿತಿಯಲ್ಲಿ ಯಾವ ಕಂಪನಿ ಕೆಲಸ ನೀಡುತ್ತೆ ಹೇಳಿ?.. ಅವುಗಳೆ ನಷ್ಟದಿಂದ ಎದ್ದು ಬರಲು ವರ್ಷಗಳೇ ಬೇಕೇನೋ.. ಅಂತೂ ಹಲವಾರು ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಈ ಪಾಪಿ ಕೊರೊನ ನಿರಾಸೆ ಉಂಟು ಮಾಡಿದ್ದಂತು ನಿಜ..

– ನಯನಾ ಶೆಟ್ಟಿ, ಹೆಸಕುತ್ತುರ್

Leave a Reply

Your email address will not be published. Required fields are marked *