News (ಸುದ್ದಿ)
ವಿದ್ಯಾರ್ಥಿಗಳಿಗೆ ಶುಭ ಸುದ್ದಿ – ಶಾಲಾ ಪಠ್ಯಕ್ಕೆ ಕತ್ತರಿ – ಹೆಚ್ಚಿನ ಒತ್ತಡದ ಓದಿಗೆ ಬ್ರೇಕ್ : Heggaddesamachar.com

ಕೊರೋನಾ ಬಂದಾಗಿನಿಂದ ಎಲ್ಲ ಕಾರ್ಯಗಳು ಸ್ತಬ್ಧವಾಗಿದ್ದು, ಶೈಕ್ಷಣಿಕ ವರ್ಷಾಂತ್ಯದ ಸಮಯದಲ್ಲೇ ಹೆಚ್ಚಾಗಿ ಪರಿಣಾಮ ಬೀರಿತು. ಇದು ವಿದ್ಯಾರ್ಥಿ ಜೀವನವನ್ನು ಮತ್ತು ಪೋಷಕರನ್ನು ಹೆಚ್ಚು ಆತಂಕಕ್ಕೆ ಈಡು ಮಾಡಿದೆ.
ಹಾಗಾಗಿ ಮುಂದಿನ ಶೈಕ್ಷಣಿಕ ವರ್ಷದ ಶಿಕ್ಷಣಕ್ಕೆ ಸುಲಭವಾಗುವಂತೆ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡಗಳು ಬೀಳಬಾರದು ಎಂಬ ಕಾರಣದಿಂದ ಕೆಲವು ಅನಗತ್ಯ ಪಠ್ಯಗಳನ್ನು ಕೈಬಿಡಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿಕೆ ನೀಡಿರುತ್ತಾರೆ.
ಈಗಾಗಲೇ ಪ್ರೌಢಶಾಲಾ ಮಟ್ಟದ ಪರೀಕ್ಷೆಗಳು ರದ್ದುಗೊಳಿಸಲಾಗಿದ್ದು,
ಮುಂದಿನ ಶೈಕ್ಷಣಿಕ ವರುಷ ತಡವಾಗಿ ಆರಂಭವಾಗುವ ಕಾರಣ,
ಅತೀ ಅಗತ್ಯ ಪಠ್ಯಗಳನ್ನು ಮಾತ್ರ ಸೇರಿಸಬೇಕು ಮತ್ತು ಶಾಲಾದಿನಗಳು ನಡೆಯುವ ದಿನಗಳ ಲೆಕ್ಕಚಾರಕ್ಕೆ ಅನುಗುಣವಾಗಿ ಸರಿಯಾದ ರೀತಿಯಲ್ಲಿ ಅವುಗಳನ್ನು ರೂಪಿಸಬೇಕು ಎಂಬುದನ್ನು ಕೂಡಾ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ತಿಳಿಸಿರುತ್ತಾರೆ.
ರಿ: ಹೆಗ್ಗದ್ದೆ ಸಮಾಚಾರ್.ಕಾಮ್
