News (ಸುದ್ದಿ)

ವಾಹನ ಚಾಲಕರಿಗೆ ಸೇವಾ ಸಿಂಧು ವೆಬ್ ಸೈಟ್ & ಆ್ಯಪ್ ಬಳಸಿ ಅರ್ಜಿ ಸಲ್ಲಿಸಲು ಹೊಸ ಸೌಲಭ್ಯ ತೆರೆದ ಸರಕಾರ – ಸೇಫ್ ವೀಲ್ಹ್ ಕಛೇರಿ ಬಗ್ಗೆ ತಿಳಿದುಕೊಳ್ಳಿ: heggaddesamachar

Spread the love

ಸರಸ್ವತಿಪುರಂ ನಲ್ಲಿ ಇರುವ ಸೇಫ್ ವ್ಹೀಲ್ಸ್ ಕಛೇರಿಯಲ್ಲಿ 1 ವಾರಗಳ ಕಾಲ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ರಾಜ್ಯ ಬಿಡುಗಡೆಗೊಳಿಸಿರುವ ಕ್ಯಾಬ್ ವಾಹನ ಚಾಲಕರಿಗೆ ಮತ್ತು ಆಟೋ ಚಾಲಕರಿಗೆ ಸೇವ ಸಿಂಧು ವೆಬ್ ಸೈಟ್ ಮತ್ತು ಆಪ್ ಮೂಲಕ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದ್ದು ಈ ಕಾರ್ಯಕ್ರಮಕ್ಕೆ ಶಾಸಕರಾದ ಎಸ್.ಎ.ರಾಮದಾಸ್ ರವರು ಚಾಲನೆಗೊಳಿಸಿದರು.

ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ 2,200 ಕೋಟಿ ರುಪಾಯಿ ಯೋಜನೆಯನ್ನು ಜಾರಿಗೆಗೊಳಿಸಿದ್ದು ಕೊರೊನಾ ವೈರಸ್ ಲಾಕ್‌ಡೌನ್‌ ಹಿನ್ನೆಲೆ ಸಂಕಷ್ಟಕ್ಕೆ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಪರಿಹಾರವಾಗಿ ರಾಜ್ಯ ಸರ್ಕಾರ 5000ರೂಪಾಯಿ ಘೋಷಣೆ ಮಾಡಿರುವುದು ಎಲ್ಲರಿಗೂ ತಿಳಿದ ವಿಷಯ. ಕಳೆದೆರೆಡು ದಿನಗಳಿಂದ ಈ ಯೋಜನೆಯ ಸದುಪಯೋಗ ಪಡೆಯಲು ಸೇವಾಸಿಂಧು ವೆಬ್ ಸೈಟ್ ಮತ್ತು ಆಪ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು ಮೈಸೂರು ನಗರದ ಸರಸ್ವತಿಪುರಂನಲ್ಲಿ ಇರುವ ಸೇಫ್ ವ್ಹೀಲ್ಸ್ ಕಛೇರಿಯಲ್ಲಿ 1 ವಾರಗಳ ಕಾಲ ಆಟೋ ಮತ್ತು ವಾಹನ ಚಾಲಕರುಗಳು ಸೂಕ್ತ ದಾಖಲೆಗಳೊಂದಿಗೆ (ಅಂದರೆ ವಾಹನ ಪರನಾಗಿ, ಆರ್ ಸಿ ಕಾಪಿ, ಆದಾರ್ ಕಾರ್ಡ್, ಬ್ಯಾಡ್ಜ್ ನಂಬರ್) ಅರ್ಜಿ ಸಲ್ಲಿಸುವ ಕಾರ್ಯಕ್ರಮವನ್ನು ಸರಸ್ವತಿ ಪುರಂ ನಲ್ಲಿ ಇರುವ ಸೇಫ್ ವ್ಹೀಲ್ಸ್ ನಲ್ಲಿ ಚಾಲನೆಗೊಳಿಸಲಾಗಿದೆ. ಮೈಸೂರಿನಲ್ಲಿ ವೃತ್ತಿನಿರತ ವಾಹನ ಚಾಲಕರು ಪ್ರಶಾಂತ್ ಪ್ಲಾಜಾ ಕೆಳಗೆ ತಿಳಿಸಿರುವ ವಿಳಾಸದಲ್ಲಿ ಸೂಕ್ತ ದಾಖಲೆಗಳೊಂದಿಗೆ ಬಂದು ಅರ್ಜಿಸಲ್ಲಿಸಬಹುದಾಗಿರುತ್ತದೆ ಎಂದು ಶಾಸಕರಾದ ಎಸ್.ಎ.ರಾಮದಾಸ್ ರವರು ತಿಳಿಸಿದರು.

ಪ್ರಶಾಂತ್ ಪ್ಲಾಜಾ #ಸಿ.ಹೆಚ್-16, 5ನೇ ಕ್ರಾಸ್, 4ನೇ ಮುಖ್ಯ ರಸ್ತೆ, ಸರಸ್ವತಿಪುರಂ, ಮೈಸೂರು-570009. 0821-4001100.

ಸೇವ ಸಿಂಧು ಆಪ್ ನಲ್ಲಿ ಹಲವಾರು ಗೊಂದಲಗಳಿದ್ದು 6 ಸೀಟರ್ ಬಾಡಿಗೆ ವಾಹನಗಳ ನೊಂದಣಿಯಾಗುತ್ತಿಲ್ಲವೆಂಬ ಸಮಸ್ಯೆ, ಒಂದು ವಾಹನವನ್ನು ಇಬ್ಬರು ವಾಹನ ಚಾಲಕರಿರುವ ಕಾರಣ ಕೇವಲ ಒಬ್ಬ ಚಾಲಕನಿಗೆ ಮಾತ್ರ ಅರ್ಜಿ ಹಾಕುವ ಅವಕಾಶ ಸಿಗುತ್ತಿದ್ದು ಎಂಬ ಗೊಂದಲ, ಹೀಗೆ ಹಲವಾರು ವಿಷಯಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ಸಮಸ್ಯೆಗಳ ಬಗ್ಗೆ ತಿಳಿದು ಬರುತಿದ್ದು ತಕ್ಷಣದಲ್ಲಿಯೇ ಟ್ರಾನ್ಸ್ಪೋರ್ಟ್ ಕಮಿಷನರ್ ಮತ್ತು ಟ್ರಾನ್ಸ್ಪೋರ್ಟ್ ಮಂತ್ರಿಗಳೊಂದಿಗೆ ಈ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಹುಡುಕಲು ಮಾತನಾಡಲಾಗುವುದು ಎಂದು ತಿಳಿಸಿದರು.

ಮೈಸೂರು ಇಡೀ ದೇಶದಲ್ಲಿ ಜಿಲ್ಲಾವಾರು ಇದ್ದಾ ಎಲ್ಲಾ ಕರೋನ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡುವುದರ ಮೂಲಕ ಮೈಸೂರನ್ನು ಸೋಂಕಿತರಿಲ್ಲದ ಪ್ರದೇಶವನ್ನಾಗಿಸಿರುವುದಕ್ಕೆ ಹಗಲಿರುಳು ಕಾರ್ಯ ನಿರ್ವಹಿಸಿರುವ ಮೈಸೂರು ಜಿಲ್ಲಾಡಳಿತ, ವೈದ್ಯರು, ಅರೆ ವೈದ್ಯರು, ಆಶಾ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ ಹಿಗೆ ನಿರಂತರವಾಗಿ ದುಡಿಯುತ್ತಿರುವವರನ್ನು COVID -19 ವಾರಿಯರ್ಸ್‌ ಎಂದು ಗುರುತಿಸಿ ಇವರಿಗೆ ಉಚಿತ ಕ್ಯಾಬ್ ವ್ಯವಸ್ಥೆಯನ್ನು ಮಾಡಿಕೊಡಲು ಸೇಫ್ ವ್ಹೀಲ್ಸ್ ಸಂಸ್ಥೆಯ ದಿನಾಂಕ 25.05.2020 ರಿಂದ 31.05.2020 ರ ತನಕ ಮೈಸೂರಿನ COVID -19 ವಾರಿಯರ್ಸ್‌ ಗಳಿಗೆ ರಾಜ್ಯಧ್ಯಂತ ಯಾವುದೇ ಊರಿಗೆ ಹೋಗಿ ಬರಲು ಸೇಫ್ ವ್ಹೀಲ್ಸ್ ಸಂಸ್ಥೆಯ ಕಾರುಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದು ಕೇವಲ ಇಂಧನವನ್ನು ಮಾತ್ರ ಭರಿಸಬೇಕಾಗಿರುತ್ತದೆ. COVID -19 ವಾರಿಯರ್ಸ್‌ ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿರುತ್ತದೆ ಎಂದು ತಿಳಿಸಿದರು. ಕಾರಿನ ಜೊತೆ ಸೇಫ್ ವ್ಹೀಲ್ಸ್ ವಾಹನ ಚಾಲಕರೆ ಬರಲಿದ್ದು ಈ ಯೋಜನೆ 31.05.2020 ರ ತನಕ ಮಾತ್ರ ಜಾರಿಯಲ್ಲಿ ಇರುತ್ತದೆ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕರಾದ ಎಸ್.ಎ.ರಾಮದಾಸ್ ರವರು ತಿಳಿಸಿದರು.

Leave a Reply

Your email address will not be published. Required fields are marked *