ಲೂಸ್ ಮಾದ ಯೋಗಿ “ಅಕಟಕಟ”… ಬರ್ತಡೇ ದಿನ ವಿನೂತನ ಸಿನಿಮಾ ಅನೌನ್ಸ್ ಮಾಡಿದ ಲೂಸ್ ಮಾದ ಯೋಗೀಶ್. : heggaddesamachar

ಅಕಟಕಟ ಕಥೆನ ಹತ್ತ್ ನಿಮಿಷದಲ್ಲಿ ಕೇಳಿ…ಹನ್ನೊಂದನೇ ನಿಮಿಷಕ್ಕೆ ಕಾಲ್ ಶೀಟ್ ಕೊಟ್ಟ ಲೂಸ್ ಮಾದ ಯೋಗೀಶ್. ದಿ ಬೆಸ್ಟ್ ಆ್ಯಕ್ಟರ್ ಅನ್ನೋ ಕಿರು ಚಿತ್ರ ಮಾಡಿ ಪ್ರಶಂಸೆ ಪಡೆದಿದ್ದ ನಿರ್ದೇಶಕ ನಾಗರಾಜ್ ಸೋಮಯಾಜಿಯವರ ಕಥೆ ಅಕಟಕಟ.

ನಿರ್ದೇಶಕ ನಾಗರಾಜ್ ಕಥೆ ಹೇಳಿದ ಶೈಲಿಗೆ ನಿಮಿಷಗಳಲ್ಲಿ ಯೋಗೀಶ್ ಸಿನಿಮಾ ಮಾಡೋದಕ್ಕೆ ಸಹಿ ಹಾಕಿದ್ದಾರೆ. ಅಕಟಕಟ ಕಥಾವಸ್ತು ಮತ್ತು ನಿರೂಪಣೆ ಅಷ್ಟೂ ಮಜಭೂತಾಗಿ… ತಾಜಾನದಿಂದ ಕೂಡಿದೆಯಂತೆ.
ಅಕಟಕಟ ಯೋಗಿಯವರ ವೃತ್ತಿ ಬದುಕಿನ ವಿಭಿನ್ನ, ವಿಶಿಷ್ಠ ಮತ್ತು ವೈಶಿಷ್ಟ್ಯ ಭರಿತ ಅಂಶಗಳಿಂದ ಕೂಡಿರಲಿರೋ ಅಪ್ಪಟ 100% ಕಮರ್ಷಿಯಲ್ ಎಂಟ್ರೈನಿಂಗ್ ಆಟ.
ಈ ಹುಟ್ಟುಹಬ್ಬಕ್ಕೆ ನಟ ಯೋಗೀಶ್ ಮತ್ತು ನಿರ್ದೇಶಕ ನಾಗರಾಜ್ ಸೋಮಯಾಜಿಯವರು ಟೈಟಲ್ ಪೋಸ್ಟರ್ ಲಾಂಚ್ ಮಾಡಿ ದೊಡ್ಡ ನಿರೀಕ್ಷೆ ಹುಟ್ಟಿಸಿದ್ದಾರೆ.
ಸೌಂಡ್ ಆಫ್ ಅಬ್ನಾರ್ಮಲ್ ಸೌಲ್ ಅಂಡ್ ಮೈಂಡ್ ಅನ್ನೋ ಟ್ಯಾಗ್ ಲೈನ್ ಇರೋ ಅಕಟಕಟ ಚಿತ್ರದ ಪೋಸ್ಟರ್ ಇಂಟ್ರೆಸ್ಟಿಂಗ್ ಆಗಿ ಕಾಣ್ತಿದೆ.. ತಲೆ ಮೆದುಳಿಗೆ ಜೋಕಾಲಿಯಾಕಿ ಜೀಕುತ್ತಿರುವಂತೆ ಕಾಣ್ತಿರೋ ಪೋಸ್ಟರೊಳಗಿನ ಚಿತ್ರ ಸಿನಿಮಾದ ಮೇಲೆ ನಾನ ಬಗೆಯ ಊಹೆಗಳನ್ನ ಹುಟ್ಟಿಸ್ತಿದೆ.
ಸದ್ಯಕ್ಕೆ ಇಷ್ಟು ವಿಷ್ಯವನ್ನಷ್ಟೇ ಬಿಟ್ಟುಕೊಟ್ಟಿರೋ ಚಿತ್ರತಂಡ ಕೊರೋನ ಕಡಿಮೆಯಾಗಿ ಚಲನಚಿತ್ರ ಚಟುವಟಿಕೆಗಳು ಶುರುವಾದ್ಮೇಲೆ ಸಿನಿಮಾ ಸೆಟ್ಟೇರಿಸೋ ದಿನಾಂಕ ಹಶಗೂ ಚಿತ್ರದ ಬಗೆಗಿನ ಮತ್ತಷ್ಟು ವಿಚಾರಗಳನ್ನ ಹಂಚಿಕೊಳ್ಳಲಿದೆಯಂತೆ.