News (ಸುದ್ದಿ)

ಲಾಕ್ ಡೌನ್ ಮತ್ತೆ ಮುಂದುವರಿಕೆ?! : heggaddesamachar.com

Spread the love

ಮೇ 04 ರಿಂದ ಮೇ 17ರ ತನಕ ಮತ್ತೆ ಲಾಕ್ ಡೌನ್ ಮುಂದುವರಿಯುತ್ತಿದ್ದು,
ಕರ್ನಾಟಕ ಸರಕಾರ ಮಾನ್ಯ ಮುಖ್ಯಮಂತ್ರಿಗಳನ್ನೊಳಗೊಂಡ ಇಂದಿನ ಸಭೆಯಲ್ಲಿ ಕೆಲವೊಂದಿಷ್ಟು ಬದಲಾವಣೆಗಳ ಮೂಲಕ ತೆಗೆದುಕೊಂಡ ನಿರ್ಧಾರಗಳು ಇಂತಿವೆ.
ನಿಷೇಧಾಜ್ಞೆ ಯಥಾವತ್ತಾಗಿ ಮುಂದುವರೆದಿದ್ದು,
ಸಂಜೆ 7 ಗಂಟೆಯಿಂದ ಬೆಳಗ್ಗೆ ಏಳು ಗಂಟೆಯವರೆಗೆ ಓಡಾಟ ನಿಷೇಧ.
ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಇತರ ಕಡೆಗಳಲ್ಲಿ ವಾಣಿಜ್ಯಕ್ಕೆ ಸಂಬಂಧಪಟ್ಟ ವಹಿವಾಟುಗಳಿಗೆ ಅಸ್ತು ಅಂದಿದೆ.


ಶಾಲಾ ಕಾಲೇಜು, ಶಿಕ್ಷಣ ಸಂಸ್ಥೆ, ಜಿಮ್, ಸ್ವಿಮ್ಮಿಂಗ್ ಪೂಲ್, ಸಿನಿಮಾ ಥಿಯೇಟರ್, ಶಾಪಿಂಗ್ ಮಾಲ್, ಪಾರ್ಕ್ ಹೋಟೆಲ್ ಬಾರ್ ಅಂಡ್ ರೆಸ್ಟೋರೆಂಟ್ ಅರ್ತುರಿಯನ್ ಪಾರ್ಟಿ ಹಾಲ್ ಕಾರ್ಯ ನಡೆಸುವಂತಿಲ್ಲ.
ವಿಮಾನ, ರೈಲು, ಅಂತರರಾಜ್ಯ ಬಸ್, ಮೆಟ್ರೋ ಸಂಚಾರವೂ ಸ್ಥಗಿತ.
ಸಭೆ ಸಮಾರಂಭ ಮಾಡುವುದಕ್ಕೆ ಅನುಮತಿ ಇಲ್ಲ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳು ನಡೆಸುವಂತಿಲ್ಲ. ಅಲ್ಲದೆ ಧಾರ್ಮಿಕ ಸ್ಥಳಗಳನ್ನು ಕೂಡ ತೆರೆಯುವಂತಿಲ್ಲ. ಈ ಎಲ್ಲಾ ಸೂಚಿಗಳು ಎಲ್ಲಾ ಕ್ಷೇತ್ರಕ್ಕೆ ಅನ್ವಯವಾಗಲಿದ್ದು,

ಉಳಿದಂತೆ ರೆಡ್ ಝೋನ್ನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ವಾಹನಗಳ ಓಡಾಟ ಇರುವುದಿಲ್ಲ, ಅನಗತ್ಯವಾಗಿ ಓಡಾಟ ನಿಷೇಧಿಸಿದ್ದು,
ಅಗತ್ಯ ಇದ್ದಲ್ಲಿ ಮಾತ್ರ ಓಡಾಟಕ್ಕೆ ಅನುಮತಿ ಸಿಗುತ್ತದೆ.
ಕಿತ್ತಲೆ ಅಥವಾ ಆರೆಂಜ್ ಝೋನ್ನಲ್ಲಿ ಟ್ರ್ಯಾಕ್ಸ್ನಲ್ಲಿ ಚಾಲಕ ಸಹಿತ ಇಬ್ಬರ ಪ್ರಯಾಣ, ಅತಿ ಅವಶ್ಯಕ ಎನಿಸಿದರೆ ಮಾತ್ರ ಅಂತರ್ ರಾಜ್ಯ ಓಡಾಟಕ್ಕೆ ಅನುಮತಿ, ಆದರೆ ಅಂತರ್ರಾಜ್ಯ ಬಸ್ಸುಗಳಿಗೆ ಅನುಮತಿ ನಿಷೇಧಿಸಲಾಗಿದೆ.
ಹಸಿರು ಝೋನ್ನಲ್ಲಿ ವಾಹನಗಳ ಓಡಾಟ ಹಾಗೂ ಕೆಲವು ಬಸ್ಸುಗಳು ಓಡಾಟಕ್ಕೆ ಅನುಮತಿ ಇದ್ದು, ವ್ಯಾಪಾರಕ್ಕೆ ಕೂಡ ಅನುಮತಿ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *