News (ಸುದ್ದಿ)
ರೋಟರಿ ಕ್ಲಬ್ – ಮಿಡ್ ಟೌನ್, ಕುಂದಾಪುರ ಇವರಿಂದ ಇ-ಲರ್ನಿಂಗ್ ಕಿಟ್ ವಿತರಣೆ: heggaddesamachar.com

ಕುಂದಾಪುರ-ಕೊಡ್ಲಾಡಿ: ರೋಟರಿ ಕ್ಲಬ್ -ಮಿಡ್ ಟೌನ್ ,ಕುಂದಾಪುರ ಇವರಿಂದ ನಿನ್ನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾರ್ಡಿ ಕೊಡ್ಲಾಡಿ ಶಾಲೆಗೆ “ಇ-ಲರ್ನಿಂಗ್ ಕಿಟ್”ನ್ನು ಹಸ್ತಾಂತರಿಸಲಾಯಿತು…
ಈ ಸಂದರ್ಭದಲ್ಲಿ ಶಾಲೆ
ಮುಖ್ಯೋಪಾಧ್ಯಾಯರು ಹಾಗೂ ಹಳೆಯ ವಿದ್ಯಾರ್ಥಿಗಳು ಊರಿನ ಹಿರಿಯರು ರೋಟರಿ ಕ್ಲಬ್ ನ ಅಧ್ಯಕ್ಷರಾದ ಶ್ರೀ ಶಶಿಧರ್ ಶೆಟ್ಟಿ ಸರ್ವ ಸದಸ್ಯರು ಉಪಸ್ಥಿತರಿದ್ದರು…

"ಇ-ಲರ್ನಿಂಗ್ ಕಿಟ್" ಶಾಲೆಗೆ ನೀಡಿರುವ ಬಗ್ಗೆ ಶಾಲೆಯ ಅಧ್ಯಾಪಕರು ಮತ್ತು ಊರಿನ ಜನ ಖುಷಿ ಹಂಚಿಕೊಂಡಿದ್ದು, ಕನ್ನಡ ಶಾಲೆಯ ಉಳಿವಿಗೆ ರೋಟರಿ ಕ್ಲಬ್ ಮಿಡ್ ಟೌನ್ ಕುಂದಾಪುರದ ಈ ಕೆಲಸ ಮಾದರಿಯಾಗುತ್ತದೆ ಎಂದಿದ್ದಾರೆ.
ಸರ್ಕಾರಿ ಶಾಲೆಗಳು ಇಂದು ಮುಚ್ಚುವ ನೆಲೆಗೆ ತಲುಪಿದ್ದು, ಖಾಸಗಿ ಶಾಲೆಗಳ ಸೆಡ್ಡು ಹೊಡೆಯುವಿಕೆಗೆ ಇಂತಹ ಕೆಲಸಗಳು ಎಲ್ಲಾ ಶಾಲೆಗಳಲ್ಲೂ ನಡೆದರೆ ಉತ್ತಮವಾಗಿರುತ್ತದೆ ಮತ್ತು ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಯಾವುದಕ್ಕೂ ಕಡಿಮೆ ಇಲ್ಲ ಎಂಬಂತೆ ವಿದ್ಯಾಭ್ಯಾಸ ಪಡೆಯಲು ಸಹಕಾರಿಯಾಗುತ್ತದೆ.

ಶುಭಾಶಯ