ರುದ್ರಭೂಮಿಯಲ್ಲಿ ಕೆಲಸ ಮಾಡುವವರಿಗೆ ಕಿಟ್ ವಿತರಣೆ: heggaddesamachar.com

ಮೈಸೂರಿನ ಹಲವಾರು ರುದ್ರಭೂಮಿಯಲ್ಲಿ ಕೆಲಸ ಮಾಡುತ್ತಿರುವ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರ ಘಾಟ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಕುಟುಂಬದವರಿಗೆ ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳು .ಹಾಗು ಸಿಎಂ ಪುತ್ರರಾದ ಬಿವೈ ಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ ಮೈಮುಲ್ ನಿರ್ದೇಶಕರಾದ ಅಶೋಕ್ ರವರ ನೇತೃತ್ವದಲ್ಲಿ ಆಹಾರ ಕಿಟ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ
ಆಹಾರ ಕಿಟ್ ವಿತರಿಸಿ ನಂತರ ಮಾತನಾಡಿದ ಮೈಮುಲ್ ನಿರ್ದೇಶಕರಾದ ಅಶೋಕ್
ಪ್ರಧಾನಿ ಪ್ಯಾಕೇಜ್ ನವ ಭಾರತ ನಿರ್ಮಾಣಕ್ಕೆ ಪೂರಕ
ಕೋವಿಡ್- 19 ಸಂಕಷ್ಟ ಪರಿಹಾರಕ್ಕೆ ಪ್ರಧಾನಿ ಮೋದಿ ಅವರು ಪ್ರಕಟಿಸಿರುವ ₹20 ಲಕ್ಷ ಕೋಟಿ ಪ್ಯಾಕೇಜ್ ನವ ಭಾರತ ನಿರ್ಮಾಣ ಪ್ರಕ್ರಿಯೆಗೆ ಪೂರಕವಾಗಿದೆ
ಜಗತ್ತಿನ 3ನೇ ಅತಿ ದೊಡ್ಡ ಪ್ಯಾಕೇಜ್ ಇದಾಗಿದೆ. ಇದರಿಂದ ಲಾಕ್ಡೌನ್ ಸಂಷ್ಟಕ್ಕೆ ಸಿಲುಕಿದ ಸಮಾಜದ ವಿವಿಧ ವರ್ಗದ ಜನರಿಗೆ ಹೆಚ್ಚು ನೆರವಾಗಲಿದೆ ಎಂದು ಹೇಳಿದರು.
ನಂತರ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಲ್ ಆರ್ ಮಹದೇವಸ್ವಾಮಿ ಮಾತನಾಡಿ
ಕೊರೊನಾ ವೈರಾಣು ಹರಡುವಿಕೆ ತಡೆಯಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ಭಾರತ ಹೆಚ್ಚು ಹಾನಿಗೆ ಒಳಗಾಗಿಲ್ಲ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಮಾದರಿಯಾಗಿ ಕ್ರಮ ಕೈಗೊಂಡಿದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ದೇಶ ಸಂಕಷ್ಟದ ನಡುವೆಯೂ ಭರವಸೆಯ ಬೆಳಕು ಕಾಣಲು ಸಾಧ್ಯವಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ₹6610 ಕೋಟಿ ಪ್ಯಾಕೇಜ್ ಪ್ರಕಟಿಸುವ ಮೂಲಕ ನಾಡಿನ ಹಲವು ಸಮುದಾಯಗಳಿಗೆ ನೆಮ್ಮದಿ ತಂದಿದ್ದಾರೆ. ಲಾಕ್ಡೌನ್ ಸಂಕಷ್ಟದಿಂದ ಪಾರಾಗಲು ಈ ಪ್ಯಾಕೇಜ್ ಸಹಕಾರಿಯಾಗಿದೆ ಎಂದು
ಹೇಳಿದರು.
ಬಿಜೆಪಿ ಮಹಿಳಾ ಮುಖಂಡರಾದ ಲಕ್ಷ್ಮೀದೇವಿ ಮಾತನಾಡಿ
ಮಾಸ್ಕ್ ಉತ್ಪಾದನೆ ದೇಶೀಯವಾಗಿ ಹೆಚ್ಚಿದೆ. ಸ್ವಾವಲಂಬಿ ಭಾರತ ನಿರ್ಮಾಣ ಕಾರ್ಯ ಚುರುಕಾಗಿ ನಡೆಯುತ್ತಿದೆ, ಆರ್ಥಿಕ ಪ್ರಗತಿ, ಮೂಲ ಸೌಕರ್ಯ ಕಲ್ಪಿಸುವುದು, ಪ್ರಜಾತಂತ್ರ ವ್ಯವಸ್ಥೆ ಬಲಪಡಿಸುವುದು ಹಾಗೂ ಬೇಡಿಕೆ ಮತ್ತು ಪೂರೈಕೆ ಸರಪಳಿ ಬಲಪಡಿಸುವುದು ಸೇರಿದಂತೆ ಹಲವು ರೀತಿಯ ಪ್ರಗತಿಪರ ಚಟುವಟಿಕೆ ಕೈಗೊಳ್ಳಲು ಒತ್ತು ನೀಡಲಾಗಿದೆ
ಕೊರೊನಾ ಅಂತ್ಯವಾಗುವ ಲಕ್ಷಣ ಕಾಣಿಸುತ್ತಿಲ್ಲ. ಅದರೊಂದಿಗೆ ಬದುಕು ಕಟ್ಟಿಕೊಳ್ಳುವ ಬಗೆಯನ್ನು ಕಲಿಯಬೇಕಾಗಿದೆ. ಅಂತರ ಪಾಲನೆ, ಮಾಸ್ಕ್ ಧರಿಸುವಿಕೆ ಹಾಗೂ ಕೈತೊಳೆಯುವಿಕೆ ಮೂಲಕ ಕೋವಿಡ್ ಮಹಾಮಾರಿಯನ್ನು ಮಣಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ .ವಕೀಲರಾದ ಪ್ರಸನ್ನ ಶಾಮ್ಲಾ ಬೇಕರಿ ಮಾಲೀಕರಾದ ಆನಂದ್ .ಯುವ ಮುಖಂಡರಾದ ವಿಕ್ರಮ ಅಯ್ಯಂಗಾರ್ . ನಿಖಿತ್. ಜಸ್ವಂತ್. ಅಶೋಕ್ . ಅನಿಲ್ ಅರಸಿಕೆರೆ ಉಮೇಶ್.ರವಿ ತೇಜ .ಸತೀಶ್ ಭಟ್ಟರು ಮುಂತಾದವರು…..