News (ಸುದ್ದಿ)

ರಾಸಾಯನಿಕ ಶಾಸ್ತ್ರ ಉಪನ್ಯಾಸಕಿಯಿಂದ ಮೂಕ ಪ್ರಾಣಿಗಳಿಗೆ ಅನ್ನ ಆಹಾರ : heggaddesamachar.com

Spread the love

ಲಾಕ್ ಡೌನ್ ಸಂದರ್ಭದಲ್ಲಿ ಮೈಸೂರಿನ ವಿವಿಧೆಡೆ ಸುಮಾರು ಮೂರು ಸಾವಿರಕ್ಕೂ ಅಧಿಕ ಮೂಕ ಪ್ರಾಣಿಗಳಿಗೆ ಅನ್ನ ಆಹಾರ ಪೂರೈಸಿದ ನಿವೇದಿತಾ ರವರನ್ನು ಗುರುತಿಸಿ ಕೇಂದ್ರ ಸರ್ಕಾರದ ನೀತಿ ಆಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ.

ನಗರದ ಶಾರದಾ ವಿದ್ಯಾಮಂದಿರದಲ್ಲಿ ರಾಸಾಯನಿಕ ಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ 27 ವರ್ಷದ ಎಸ್ ನಿವೇದಿತಾ ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಸಹಯೋಗದೊಂದಿಗೆ ಕಳೆದ 35 ದಿನಗಳಿಂದ 3115 ಬೀದಿ ನಾಯಿಗಳಿಗೆ ಅನ್ನ ಆಹಾರ ಪೂರೈಸಿದ್ದಾರೆ.

ನಿವೇದಿತಾ ಅವರು ತಾವು ಪೋಷಿಸಿದ ಪ್ರಾಣಿಗಳೊಂದಿಗೆ ತೆಗೆಸಿಕೊಂಡ ಛಾಯಾಚಿತ್ರವನ್ನು ಕಂಡು ನೀತಿ ಆಯೋಗ ಪ್ರಶಂಸೆ ವ್ಯಕ್ತ ಪಡಿಸಿದೆ.

ನಿವೇದಿತಾ ಅವರು ಪ್ರತಿದಿನ ಎರಡು ಗಂಟೆಗೂ ಅಧಿಕ ಸಮಯವನ್ನು ಪೌಷ್ಟಿಕ ಆಹಾರ ತಯಾರಿಕೆಗೆ ಬಳಸುತ್ತಿದ್ದರು. ಮತ್ತರೆಡು ಗಂಟೆ ಪ್ರಾಣಿಗಳಿಗೆ ಪೂರೈಸಲು ವಿನಿಯೋಗಿಸುತ್ತಿದ್ದರು. ಸತತ 35 ದಿನವೂ ಚಾಚೂ ತಪ್ಪದೇ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಲಾಕ್ ಡೌನ್ ಮುಗಿದ ಮೇಲೂ ಸೇವೆ ಮುಂದುವರೆಸುವುದಾಗಿ ಹೇಳಿದ್ದಾರೆ.

Leave a Reply

Your email address will not be published. Required fields are marked *