ರಾಷ್ಟ್ರೀಯ ಹೆದ್ದಾರಿ ಪ್ಲೈಓವರ್ ಮೇಲೆ ನಿಂತ ನೀರು: heggaddesamachar.com

ಪಟ್ಟಣದಲ್ಲಿ ಬುಧವಾರ ಸಂಜೆ ಸುರಿದ ಮಳೆಗೆ ಕಾನಾಹೊಸಳ್ಳಿ ರಾಷ್ಟ್ರೀಯ ಹೆದ್ದಾರಿ ಪ್ಲೈಓವರ್ ಮೇಲೆ ಎರಡು ಅಡಿಗಳಷ್ಡು ನೀರು ನಿಂತಿರುವ ಪರಿಣಾಮ ಚಿತ್ರದುರ್ಗದಿಂದ ಇಮಡಾಪುರಕ್ಕೆ ಹೋಗುತ್ತಿದ್ದ ಓಮಿನಿ ಕಾರ್ ನೀರಿನಲ್ಲಿ ಆಯ ತಪ್ಪಿ ಪಲ್ಟಿ ಆಗಿದ್ದು ಅದರಲ್ಲಿ ಇದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಹಾಗೂ ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮ ಕೆಲ ಕಾಲ ಟ್ರಾಪಿಕ್ ಜಾಮ್ ಆಗಿದ್ದು ಕಂಡುಬಂತು,
ಕಳಪೆ ಕಾಮಗಾರಿ ರಾಷ್ಟ್ರೀಯ ಹೆದ್ದಾರಿ 50 ಸಂಪೂರ್ಣ ಕಳಪೆ ಆಗಿದ್ದು ಸರಿಯಾದ ಸರ್ವೀಸ್ ರಸ್ತೆ ಹಾಗೂ ಊರಿನ ಪಕ್ಕ ಮಳೆ ನೀರು ಹಾಗೂ ಚರಂಡಿ ನೀರು ಹರಿದು ಹೋಗಲು ಯಾವುದೇ ಸರಿಯಾದ ವ್ಯವಸ್ಥೆ ಮಾಡಿಲ್ಲದ ಕಾರಣ ಸ್ವಲ್ಪವೇ ಮಳೆ ಬಂದರೆ ಸಾಕು ಹೆದ್ದಾರಿಯಲ್ಲಿ ಹಾಗೂ ಪಕ್ಕದ ರಸ್ತೆಗಳಲ್ಲಿ ನೀರು ನಿಲ್ಲುತ್ತದೆ ಇದರಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸ್ಥಳೀಯರು ಹೆದ್ದಾರಿ ಗುತ್ತಿಗೆದಾರರ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು.

ಕಾನಾಹೊಸಳ್ಳಿ ಹೋಬಳಿಯಲ್ಲಿ ಮಳೆ.
ಹೋಬಳಿಯ ಕೆಲ ಹಳ್ಳಿಗಳಲ್ಲಿ ಸಣ್ಣ ಪ್ರಮಾಣದ ಮಳೆ ಆಗಿದ್ದು ಪಟ್ಟಣದಲ್ಲಿ ಕೆಲ ಕಾಲ ಆಲಿಕಲ್ಲು ಮಳೆ ಆಗಿದ್ದು ರೈತರ ಮುಗದಲ್ಲಿ ಸಂತಸ ತಂದಿದೆ, ಹಾಗೂ ಬಿರುಗಾಳಿ ಎದ್ದ ಪರಿಣಾಮ, ಕೆಲ ತಗಡು ಶೆಡ್ ಮತ್ತು ಮನೆಗಳ ಹೆಂಚು ಹಾರಿ ಹೋಗಿದ್ದು ಯಾವುದೇ ಪ್ರಾಣಾಯಾಮದ ಬಗ್ಗೆ ವರದಿಯಾಗಿಲ್ಲ.
ರಿ: ಪುನಿತ್ ಐನಾಪುರಿ