“ರಾಜಸ್ಥಾನ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ 2021 ಕ್ಕೆ   ದಾರಿ ಯಾವುದಯ್ಯಾ ವೈಕುಂಠಕೆ : heggaddesamachar

Spread the love

ವರ್ಧನ್ ನಟನೆಯ ಸಿದ್ದು ಪೂರ್ಣಚಂದ್ರರವರ ನಿರ್ದೇಶನದ ದಾರಿ ಯಾವುದಯ್ಯಾ ವೈಕುಂಠಕೆ ಚಲನಚಿತ್ರ
“ರಾಜಸ್ಥಾನ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್”2021 ಕ್ಕೆ  ಅಫಿಷಿಯಲ್ ಸೆಲೆಕ್ಷನ್ ಆಗಿದೆ. ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣಗೊಂಡು ಬಿಡುಗಡೆಗೆ ರೆಡಿಯಾಗಿರುವ ಈ ಚಿತ್ರವನ್ನ ಶರಣಪ್ಪ ಎಂ ಕೊಟಗಿಯವರು ನಿರ್ಮಿಸಿದ್ದಾರೆ.

ತಿಥಿ ಸಿನಿಮಾ ಖ್ಯಾತಿಯ ನಟಿ ಪೂಜಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಜೊತೆಗೆ ರಾಜ್ ಬಲವಾಡಿ, ಅನುಷಾ ರೋಡ್ರಿಗಾಸ್, ಶೀಬಾ, ಅರುಣ್ ಮೂರ್ತಿ, ಸ್ಫಂದನ ಪ್ರಸಾದ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದ್ದು ಢಿಫರೆಂಟ್ ಟೈಟಲ್ ನಿಂದಲೇ ಎಲ್ಲರ ಗಮನ ಸೆಳೆದಿದೆ.

ಬ್ಲ್ಯಾಕ್ ಸ್ಯಾಂಡ್, ಪ್ರವಾಸ್, ಕ್ರಾಂತಿವೀರ, ಮೇರಿಜಾನ್ ಸೇರಿದಂತೆ ವಿವಿಧ ಭಾಷೆಯ, ವಿವಿಧ ರಾಜ್ಯಗಳ ಸಿನಿಮಾಗಳು “ರಾಜಸ್ಥಾನ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ 2021ನಲ್ಲಿ ಆಯ್ಕೆಯಾಗಿದ್ದು, ಇವುಗಳ ಮಧ್ಯೆ ದಾರಿ ಯಾವುದಯ್ಯಾ ವೈಕುಂಠಕ್ಕೆ ಪ್ರದರ್ಶನ ಕಾಣುತ್ತಿರುವುದು ಚಂದನವನದ ಹೆಮ್ಮೆ ಎನ್ನಬಹುದು.

ಈ ಚಿತ್ರದ ತಾಂತ್ರಿಕ ಮತ್ತು ಕಲಾವಿದರ ಬಳಗದ ಸಣ್ಣ ವಿವರ ಇಲ್ಲಿದೆ:
ಚಿತ್ರ: “ದಾರಿ ಯಾವುದಯ್ಯಾ ವೈಕುಂಠಕೆ”
ಲಾಂಛನ: ಶ್ರೀ ಬಸವೇಶ್ವರ ಕ್ರಿಯೇಷನ್ಸ್
ನಿರ್ಮಾಪಕರು: ಶರಣಪ್ಪ ಎಂ ಕೊಟಗಿ
ಕಥೆ,ಚಿತ್ರಕಥೆ,ಸಂಭಾಷಣೆ,ಸಾಹಿತ್ಯ, ನಿರ್ದೇಶನ: ಸಿದ್ದು ಪೂರ್ಣಚಂದ್ರ
ಛಾಯಾಗ್ರಹಣ: ನಿತಿನ್ ಅಪ್ಪಿ
ಸಂಕಲನ: ಮುತ್ತುರಾಜ್
ಸಂಗೀತ: ಲೋಕಿ
ಎಫೆಕ್ಟ್ಸ್: ಶೇಖರ್
ಶಬ್ದವಿನ್ಯಾಸ: ರಾಜ್ ಭಾಸ್ಕರ್
ಕಲರಿಂಗ್: ನಿತಿನ್ ಕಾರ್ಯಪ್ಪ

ಕಲಾವಿದರು:
ವರ್ಧನ್
ಪೂಜಾ (ತಿಥಿ ಖ್ಯಾತಿಯ)
ರಾಜ್ ಬಲವಾಡಿ
ಅನುಷಾ ರೋಡ್ರಿಗಾಸ್
ಶೀಬಾ
ಅರುಣ್ ಮೂರ್ತಿ
ಸ್ಪಂದನ ಪ್ರಸಾದ್…
ಇನ್ನೂ ಮುಂತಾದವರು…

ರಿ: ಹೆಗ್ಗದ್ದೆ ಸಮಾಚಾರ್.ಕಾಮ್

Leave a Reply

Your email address will not be published. Required fields are marked *