News (ಸುದ್ದಿ)

ರಕ್ತದಾನ ಮಹಾದಾನ: ಹೀಗೊಂದು ಪ್ರಯತ್ನಕ್ಕೆ ಕಾರಣರಾಗುತ್ತಿರುವ ಟೀಮ್ ಅಭಿಮತಕ್ಕೆ ನಿಮ್ಮ ಬೆಂಬಲವೂ ಇರಲಿ:heggaddesamachar.com

Spread the love

ಸ್ನೇಹಿತರೇ ನಮಸ್ಕಾರ,

ಒಂದು ಯೂನಿಟ್ ರಕ್ತ ಎಷ್ಟು ಅಮೂಲ್ಯ ಎನ್ನುವುದು ಅರ್ಥವಾಗಬೇಕಿದ್ದರೆ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡುಗಳಲ್ಲಿ ಹೋಗಿ ಗಮನಿಸಿ ಬರಬೇಕು. ಹಿಂದೆಲ್ಲ ರಕ್ತದ ಪೂರೈಕೆ ಮಾಡಲಾಗದ ಕಾರಣಕ್ಕೇ ಅನೇಕ ಮನೆಯ ಬೆಳಕು ಆರಿ ಹೋಗುತ್ತಿತ್ತು! ಇಂದೂ ಕೂಡ ಆ ಪರಿಸ್ಥಿತಿ ಪೂರ್ತಿಯಾಗಿ ಬದಲಾಗಿಲ್ಲ.ಸರ್ಕಾರಿ ಆಸ್ಪತ್ರೆಯಲ್ಲಿ ಅನೇಕ ರೋಗಿಗಳಿಗೆ ಒಂದು ಯೂನಿಟ್ ರಕ್ತ ಪೂರೈಕೆಗೂ ಕಷ್ಟವಿದೆ! ಕಾರಣವಿಷ್ಟೆ. ಬಹುತೇಕ ರಕ್ತದಾನ ಶಿಬಿರಗಳನ್ನ ಆಯೋಜಿಸುವುದು ಖಾಸಗಿ ಆಸ್ಪತ್ರೆಗಳು. ಮತ್ತು ಖಾಸಗಿ ಆಸ್ಪತ್ರೆಗಾಗಿ.

ಇದನ್ನ ಮನಗಂಡು ಜನಸೇವಾ ಟ್ರಸ್ಟ್.ರಿ. ಮೂಡುಗಿಳಿಯಾರು, ಸಾಸ್ತಾನ ಕೋಡಿಯ ವೀರಕೇಸರಿ ಸ್ಪೋರ್ಟ್ಸ್ ಕ್ಲಬ್, ಚಕ್ರವರ್ತಿ ಬಳಗ ಸಿದ್ದಾಪುರ ಮುಂತಾದ ಹತ್ತು ಹಲವಾರು ಸಂಘ ಸಂಸ್ಥೆಗಳ ಮತ್ತು ಮುಖ್ಯವಾಗಿ ನಿಮ್ಮ ಸಹಯೋಗದೊಂದಿಗೆ ಇದೇ ಫೆಬ್ರವರಿ ಎರಡರ ಭಾನುವಾರ ಮೂಡುಗಿಳಿಯಾರಿನಲ್ಲಿ ‘ನೆತ್ತರ ನೆರವು’ ಎಂಬ ಪರಿಕಲ್ಪನೆಯಲ್ಲಿ ರಕ್ತದಾನ ಶಿಬಿರವನ್ನ ಆಯೋಜಿಸಿಕೊಂಡಿದೆ. ಈ ಮೆಸೇಜನ್ನು ಮುಂದೆ ಕಳಿಸುವ ಮೊದಲು ನಿಮ್ಮ ಮಸ್ತಿಷ್ಕದಲ್ಲಿ ‘ಸಾವಿನ ಮನೆಗೆ ಹೊರಟ ಜೀವವೊಂದು ನಿಮ್ಮ ರಕ್ತದಾನದ ಕಾರಣಕ್ಕೇ ತನ್ನ ಮನೆಗೆ ಆರೋಗ್ಯವಾಗಿ ಮರಳುವ ಚಿತ್ರವೊಂದು ಮೂಡಲಿ.’ ರಕ್ತದಾನದ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೂ ಈ ಕೆಳಕಂಡ ನಂಬರುಗಳಿಗೆ ಒಂದು ಕರೆ ಮಾಡಿ. ಹನಿ ಹನಿಗೂಡಿ ಹಳ್ಳವಾಗೋಣ. ಆ ಹಳ್ಳಕ್ಕೆ ಮಾನವೀಯತೆ ಎಂಬ ಹೆಸರು.

ರಿ: ಟೀಮ್ ಅಭಿಮತ.

ಸಂಪರ್ಕ:
81972 07997
88846 57737

Leave a Reply

Your email address will not be published. Required fields are marked *